More

    ಸಿಂದಗಿ ತಾಲೂಕಿನಲ್ಲಿ ಶೇ. 81.51ರಷ್ಟು ಮತದಾನ

    ಸಿಂದಗಿ: ತಾಲೂಕಿನ 23 ಗ್ರಾಮ ಪಂಚಾಯಿತಿ ಕ್ಷೇತ್ರಗಳಲ್ಲಿ ಒಟ್ಟು 1,29,638 ಮತದಾರರಲ್ಲಿ 55,779 ಪುರುಷರು ಹಾಗೂ 49,893 ಮಹಿಳೆಯರು ಮತ್ತು ಓರ್ವ ಇತರೆ ವರ್ಗದ ವ್ಯಕ್ತಿ ಸೇರಿದಂತೆ 1,05,673 ಮತಗಳು ಚಲಾವಣೆಗೊಂಡಿದ್ದು, ಶೇ. 81.51ರಷ್ಟು ಮತದಾನವಾಗಿದೆ. ಗುಬ್ಬೇವಾಡ ಗ್ರಾಪಂನಲ್ಲಿ ಶೇ. 86.12ರಷ್ಟು ಹೆಚ್ಚು ಮತದಾನ ನಡೆದಿದೆ.
    ರಾಂಪೂರ(ಪಿಎ) ಗ್ರಾಪಂ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಶೇ. 77.24, ಚಟ್ಟರಕಿ ಶೇ.83.34, ಕೊಕಟನೂರ ಶೇ.81.87, ಬ್ಯಾಕೋಡ ಶೇ.75.49, ಯಂಕಂಚಿ ಶೇ.77.89, ಸುಂಗಠಾಣ ಶೇ.83.49, ಗೋಲಗೇರಿ ಶೇ.80.52, ಗುಬ್ಬೇವಾಡ ಶೇ. 86.21, ಹಂದಿಗನೂರ ಶೇ.82.59, ಹೊನ್ನಳ್ಳಿ ಶೇ.81.22, ಕಡಣಿ ಶೇ. 81.74, ದೇವಣಗಾಂವ ಶೇ.81.39, ಬಮ್ಮನಹಳ್ಳಿ ಶೇ.84.06, ದೇವರನಾವದಗಿ ಶೇ. 85.95, ಬಗಲೂರ ಶೇ.81.80, ಮೋರಟಗಿ ಶೇ.77.05, ಮಲಘಾಣಶೇ. 85.46, ಕೋರಳ್ಳಿ ಶೇ.83.64, ಗಬಸಾವಳಗಿ ಶೇ.85.78, ಹಿಕ್ಕನಗುತ್ತಿ ಶೇ.83.44, ನಾಗಾವಿ ಬಿ.ಕೆ ಶೇ.76.16, ರಾಮನಹಳ್ಳಿ ಶೇ.82, ಕಕ್ಕಳಮೇಲಿ ಶೇ.77.38 ಹಾಗೂ ಇತರೆ ಒಟ್ಟು 18ಜನ ಮತದಾರರಲ್ಲಿ ಕೇವಲ ಓರ್ವ ಮಾತ್ರ ತನ್ನ ಹಕ್ಕನ್ನು ಚಲಾಯಿಸಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts