More

    ಸರಳತೆಯ ಸಾರ್ವಭೌಮ ಡಾ. ಬಾಬು ಜಗಜೀವನ ರಾಮ್

    ಶ್ರೀರಂಗಪಟ್ಟಣ: ಭಾರತದ ಸ್ವಾತಂತ್ರ್ಯ ಮತ್ತು ಸಾಮಾಜಿಕ ಹೋರಾಟಗಾರ, ಹಸಿರು ಕ್ರಾಂತಿಯ ಹರಿಕಾರ ಭಾರತೀಯರ ಪ್ರೀತಿ ಗಳಿಸಿದ್ದ ಡಾ.ಬಾಬು ಜಗಜೀವನರಾಮ್ ಅವರ ಬದುಕು ಸರ್ವಕಾಲಕ್ಕೂ ಆದರ್ಶನೀಯ ಎಂದು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ತಿಳಿಸಿದರು.

    ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಸಮುದಾಯ ಜನರು ಹಾಗೂ ವಿವಿಧ ಪ್ರಗತಿಪರ ಮತ್ತು ಕನ್ನಡಪರ ಸಂಘಟನೆಗಳ ಸಮ್ಮುಖದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮ್ ಅವರ 117ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸ್ವಾತಂತ್ರ್ಯದ ನಂತರ ಭಾರತದಲ್ಲಿ ಆಳವಾಗಿ ಬೇರು ಬಿಟ್ಟಿದ್ದ ಮೇಲು-ಕೀಳು, ತಾರತಮ್ಯ, ಜಾತಿ ವ್ಯವಸ್ಥೆ ತೊಡೆದು ಹಾಕಲು ಡಾ.ಬಾಬು ಜಗಜೀವನ ರಾಮ್ ಪ್ರಮುಖ ಪಾತ್ರ ವಹಿಸಿದರು. ಭಾರತ ರಾಜಕಾರಣದಲ್ಲಿ ಹಲವು ಸ್ಥಾನಮಾನ ಪಡೆದು ದೇಶದ ಉಪಪ್ರಧಾನಿಯಾಗಿ ಸರಳತೆಯ ಸೌರ್ವಭೌಮನಾಗಿ ದೇಶ ಹಾಗೂ ದೇಶದ ಜನರಿಗೆ ನಿಷ್ಠೆಯ ಸೇವೆ ಅರ್ಪಿಸಿದರು. ಇಂತಹ ಮೇರು ವ್ಯಕ್ತಿತ್ವದ ಮಹಾನ್ ನಾಯಕ ಸದಾ ಆದರ್ಶನೀಯ ಎಂದರು.

    ಕಾರ್ಯಕ್ರಮದಲ್ಲಿ ಡಾ. ಬಾಬು ಜಗಜೀವನ ರಾಮ್ ಅವರ ಕುರಿತು ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಮೂರ್ತಿ ಅವರು ಉಪನ್ಯಾಸ ನೀಡಿದರು.
    ಇದಕ್ಕೂ ಮುಂಚೆ ಪಟ್ಟಣದ ತಾಲೂಕು ಕಚೇರಿಯ ಮಿನಿವಿಧಾನಸೌಧದ ಮುಂಭಾಗದಿಂದ ತೆರೆದ ವಾಹನದಲ್ಲಿ ಡಾ.ಬಾಬು ಜಗಜೀವನರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಬೃಹತ್ ಭಾವಚಿತ್ರಗಳನ್ನು ಸಮುದಾಯ ಮುಖಂಡರು ಹಾಗೂ ಸಂಘಟನೆಗಳ ಪ್ರಮುಖರು ತಮಟೆ-ನಗಾರಿ ವಾದ್ಯಗಳ ಮೇಳಗಳೊಂದಿಗೆ ಪಟ್ಟಣದ ಮುಖ್ಯರಸ್ತೆಯುದ್ದಕ್ಕೂ ಮೆರವಣಿಗೆ ನಡೆಸಿ ಜಯಘೋಷ ಮೊಳಗಿಸಿದರು.

    ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನರಾಮ್ ಜನಜಾಗೃತಿ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಿದ್ದರಾಜು ಅರಕೆರೆ, ತಾಲೂಕು ಅಧ್ಯಕ್ಷ ಆಟೋ ಶಂಕರ್, ಉಪಾಧ್ಯಕ್ಷ ಮೋಹನ್ ಕುಮಾರ್, ಗೌರವ ಅಧ್ಯಕ್ಷ ಕೆ.ಟಿ.ರಂಗಯ್ಯ, ಪದಾಧಿಕಾರಿಗಳಾದ ಮಹದೇವಪುರ ಸಿದ್ದರಾಜು, ಮಾಡ್ರಳ್ಳಿ ಸಿದ್ದು, ಶಿವಶಂಕರ್ ಬಿದರಹಳ್ಳಿ , ಆಲಗೂಡು ಸ್ವಾಮಿ, ಸಿದ್ದು, ಮಹಿಳಾ ಘಟಕದ ಅಧ್ಯಕ್ಷೆ ಸುಮಿತ್ರಾ ಆಲಗೂಡು, ಉಪಾಧ್ಯಕ್ಷೆ ಶಾಂತಮ್ಮ, ಅಪೆಕ್ಸ್ ಮಾಜಿ ನಿರ್ದೇಶಕ ಶಿವಯ್ಯ, ಅಂಬೇಡ್ಕರ್ ಒಕ್ಕೂಟಗಳ ಮುಖಂಡ ಗಂಜಾಂ ರವಿಚಂದ್ರು, ಪಾಂಡು, ಕುಬೇರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts