More

    30ರಂದು ಕನಕದಾಸ ಜಯಂತಿ ಸರಳ ಆಚರಣೆ

    ಹುನಗುಂದ: ಸರ್ಕಾರದ ನಿಯಮ ಮತ್ತು ಕುರುಬ ಸಮಾಜದ ಎಲ್ಲ ಹಿರಿಯರ ಮತ್ತು ಮುಖಂಡರ ಸಲಹೆಯಂತೆ ಹಾಗೂ ರಾಜ್ಯದಲ್ಲಿ ಬರ ಹಿನ್ನೆಲೆಯಲ್ಲಿ ನ.30 ರಂದು ತಾಲೂಕು ಆಡಳಿತದಿಂದ ಭಕ್ತ ಕನಕದಾಸರ ಜಯಂತ್ಯುತ್ಸವವನ್ನು ಸರಳವಾಗಿ ಆಚರಿಸಲಾಗುವುದೆಂದು ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದರು.

    ಪಟ್ಟಣದ ತಹಸೀಲ್ದಾರ್ ಸಭಾಭವನದಲ್ಲಿ ಬುಧವಾರ ತಾಲೂಕು ಆಡಳಿತ ಮತ್ತು ಸಮಾಜ ಬಾಂಧವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಭಕ್ತ ಕನಕದಾಸರು ಸೇರಿ ಎಲ್ಲ ಮಹಾನ್ ಮಹನೀಯರು ಜಾತ್ಯತೀತ ನೆಲಗಟ್ಟಿನಲ್ಲಿ ವಚನಗಳು ಮತ್ತು ಕೀರ್ತನೆಯ ದಾಸರ ಹಾಡಿನ ಮೂಲಕ ಸಮಾಜ ಮನುಕುಲಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಹೋರಾಟಗಾರರು, ಸಮಾಜ ಸುಧಾರಕರು ಜಯಂತಿಗಳನ್ನು ಜಾತಿಗೆ ಮೀಸಲಿರಿಸದೆ ಎಲ್ಲ ಧರ್ಮದವರು ಸೇರಿ ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರ ಮನಮುಟ್ಟುವಂತೆ ನಾವೆಲ್ಲ ದಿನಾಚರಣೆ ಮೂಲಕ ಪಾಲಿಸೋಣ ಎಂದು ತಿಳಿಸಿದರು.

    ಸಮಾಜದ ಮುಖಂಡರಾದ ಗಂಗಾಧರ ದೊಡಮನಿ, ವಿಜಯ ಮಹಾಂತೇಶ ಗದ್ದನಕೇರಿ, ದೇವು ಡಂಬಳ, ಲಿಂಬಣ್ಣ ಮುಕ್ಕಣ್ಣವರ, ಸಿದ್ದು ಘಂಟಿ, ಸಂಗಮೇಶ ಚೂರಿ ಮಾತನಾಡಿ, ಎಲ್ಲ ಶರಣರು, ಸಂತರು, ಮಹಾನ್ ನಾಯಕರುಗಳು ಹುಟ್ಟು ಜಾತಿ ಪರಿಗಣಿಸದೆ ತಮ್ಮದೆ ಆದ ಮನುಕುಲ ಸನ್ಮಾರ್ಗದಲ್ಲಿ ನಡೆಯಲು ನೀಡಿದ ತತ್ವಾದರ್ಶಗಳು ಎಂದೆಂದಿಗೂ ನಮಗೆ ದಾರಿದೀಪ ಎಂದರು.

    ರಾಷ್ಟ್ರೀಯ ಹಬ್ಬ ಆಚರಣೆ ಸಮಿತಿ ಅಧ್ಯಕ್ಷ ತಹಸೀಲ್ದಾರ್ ನಿಂಗಪ್ಪ ಬಿರಾದಾರ ಮಾತನಾಡಿ, ಶಾಸಕರ ಮತ್ತು ಸಮಾಜಬಂಧುಗಳ ಸಲಹೆ ಸೂಚನೆಯಂತೆ ಸರಳವಾಗಿ ಕನಕ ಜಯಂತಿ ಆಚರಿಸಲಾಗುವುದು ಎಂದರು. ಮುಖಂಡ ನೀಲಪ್ಪ ತಪೇಲಿ, ತಾಪಂ ಮುಳೀಧರ ದೇಶಪಾಂಡೆ, ಸಮನ್ವಯಧಿಕಾರಿ ಶರಣು ಕಾರಿಕಲ್, ಅಬಕಾರಿ ಮಂಜುನಾಥ ಸಿಂಗರಡ್ಡಿ, ಬಿಇಒ ಜಾಸ್ಮಿನ್ ಕಿಲ್ಲೇದಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts