More

    ಶಿಕ್ಷಣ ಕ್ಷೇತ್ರದಲ್ಲಿ ಸಿದ್ಧಗಂಗಾ ಶ್ರೀಗಳು ಕ್ರಾಂತಿ

    ಕೆ.ಆರ್.ನಗರ: ಸಮಾಜದ ಬೆಳವಣಿಗೆಗೆ ಪೂರಕವಾದದ್ದು ಶಿಕ್ಷಣ ಮತ್ತು ಆರೋಗ್ಯ. ಅಂತಹ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಿದವರು ಸಿದ್ಧಗಂಗಾ ಮಠದ ಶತಾಯುಷಿ ಡಾ.ಶಿವಕುಮಾರ ಶ್ರೀಗಳು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

    ಪಟ್ಟಣದ ಬಸವೇಶ್ವರ ಬಡಾವಣೆಯ ಬಳೆ ಬಸವರಾಜಪ್ಪ ಧರ್ಮಶಾಲೆಯಲ್ಲಿ ಶನಿವಾರ ಖಾದಿ ಭಂಡಾರ ಸ್ನೇಹ ಬಳಗದ ವತಿಯಿಂದ ಆಯೋಜಿಸಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 5ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಕ್ಷರ ಮತ್ತು ಅನ್ನದಾಸೋಹದ ಮೂಲಕ ಕೋಟ್ಯಂತರ ವಿದ್ಯಾರ್ಥಿಗಳ ಪಾಲಿನ ದೇವರಾಗಿರುವ ಸಿದ್ಧಗಂಗಾ ಮಠದ ಶ್ರೀಗಳು ದೈವಾಂತ ಸಂಭೂತರು ಎಂದರು.

    ಶಿಕ್ಷಣ ಕ್ಷೇತ್ರಕ್ಕೆ ಮಠಮಾನ್ಯಗಳ ಕೊಡುಗೆ ಅಪಾರ. ಸಿದ್ಧಗಂಗಾ ಮಠ ಹಾಕಿಕೊಟ್ಟ ಮಾರ್ಗದರ್ಶನವನ್ನು ಇತರ ಮಠಗಳು ಅನುಸರಿಸುವ ಮೂಲಕ ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರವನ್ನು ಸುಧಾರಿಸಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಸಿದ್ಧಗಂಗಾ ಮಠದಲ್ಲಿ ಕಲಿಯುವ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಲಿದ್ದು ಅಲ್ಲಿ ವ್ಯಾಸಂಗ ಮಾಡಿದವರು ಉತ್ತಮ ಬದುಕು ರೂಪಿಸಿಕೊಂಡು ಸಮಾಜಕ್ಕೆ ದಾರಿದೀಪವಾಗಲಿದ್ದಾರೆ ಎಂದು ಹೇಳಿದರು.

    ಕರ್ಪೂರವಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಅರಕೆರೆ ವಿರಕ್ತಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಕಲ್ಯಾಣಪುರ ಮಠದ ಮಾತೆ ಚಿನ್ಮಯಿತಾಯಿ ಆಶೀರ್ವಚನ ನೀಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಮಾಜಿ ಸದಸ್ಯರಾದ ರಾಜಯ್ಯ, ಸಿದ್ದಪ್ಪ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್‌ಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕೆಂಪರಾಜು, ಪುರಸಭೆ ಮಾಜಿ ಉಪಾಧ್ಯಕ್ಷೆ ಕೆ.ಎಂ.ನಾಗರತ್ನಮ್ಮ ಮಾತನಾಡಿದರು.

    ಖಾದಿ ಭಂಡಾರ ಸ್ನೇಹ ಬಳಗದ ಪದಾಧಿಕಾರಿಗಳಾದ ಅರ್ಜುನಹಳ್ಳಿ ಜ್ಞಾನಾನಂದ, ಬಿ.ಎಂ.ನಾಗರಾಜು, ಬುಡೀಗೌಡ, ಪೆರಿಸ್ವಾಮಿ, ಸುಬ್ಬುಕೃಷ್ಣ, ಎಚ್.ಸಿ.ಮಹದೇವಪ್ಪ, ಬಿ.ಎಂ.ಪ್ರಕಾಶ್, ದೇವರಾಜು, ಮೋಹನ್‌ಕುಮಾರ್, ಹೆಗ್ಗಂದೂರು ಪ್ರಭಾಕರ್, ಎಲ್.ಎಸ್.ಮಹೇಶ್, ಎ.ಟಿ.ಶಿವಣ್ಣ, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್, ಮುಸ್ಲಿಂ ಮುಖಂಡ ಇಕ್ಬಾಲ್‌ಪಾಷ, ಅರ್ಜುನಹಳ್ಳಿ ಗ್ರಾಪಂ ಅಧ್ಯಕ್ಷ ಸಿ.ಎಸ್.ದಿಲೀಪ್, ಟಿಎಪಿಸಿಎಂಎಸ್ ನಿರ್ದೇಶಕ ತೋಟಪ್ಪನಾಯಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಆರ್.ಕಾಂತರಾಜು, ಜನನಿ ಚಾನಲ್ ವ್ಯವಸ್ಥಾಪಕ ವಿಜಯ ಸುಬ್ರಹ್ಮಣ್ಯ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts