More

    ಮಾಧ್ಯಮಕ್ಕೆ ಮಹತ್ವದ ಜವಾಬ್ದಾರಿ: ಶ್ರೀ ಸಿದ್ದೇಶ್ವರ ಸ್ವಾಮೀಜಿ; 37ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಲಾಂಛನ ಬಗ್ಗೆ ಮೆಚ್ಚುಗೆ

    37ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಲಾಂಛನ ಬಗ್ಗೆ ಮೆಚ್ಚುಗೆ

    ವಿಜಯಪುರ: ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ೩೭ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ನಡೆಯುತ್ತಿರುವುದು ಜಿಲ್ಲೆಯ ಇತಿಹಾಸದಲ್ಲಿ ಮತ್ತೊಂದು ಹೊಸ ಮೈಲುಗಲ್ಲು ನಿರ್ಮಾಣವಾಗಲಿದೆ. ಶರಣರಿಗೆ ಜನ್ಮ ನೀಡಿದ ಈ ಪುಣ್ಯ ಭೂಮಿಯಲ್ಲಿ ಈ ಸಮ್ಮೇಳನ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.
    ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ನೇತೃತ್ವದ ನಿಯೋಗ ಸಮ್ಮೇಳನಕ್ಕೆ ಶುಭಾಶಯ ಕೋರಲು ತೆರಳಿದ್ದ ವೇಳೆ ಸ್ವಾಮೀಜಿಗಳು ಪದಾಧಿಕಾರಿಗಳನ್ನುದ್ದೇಶಿಸಿ ಅವರು ಮಾತನಾಡಿದರು.

    ವಿಜಯಪುರದ ಜನಪ್ರತಿನಿಧಿಗಳು ಹಾಗೂ ಜನರಿಗೆ ಸಮ್ಮೇಳನಗಳನ್ನು ಸಂಘಟಿಸುವುದು ಹಾಗೂ ಅವುಗಳನ್ನು ಯಶಸ್ವಿಗೊಳಿಸುವುದು ಹೊಸದೇನಲ್ಲ. ಈಗಾಗಲೇ ವಿವಿಧ ಕ್ಷೇತ್ರಕ್ಕೆ ಸಂಬAಧಿಸಿದAತೆ ಹತ್ತು ಹಲವು ಸಮ್ಮೇಳನಗಳು ಇಲ್ಲಿ ಯಶಸ್ಸು ಕಂಡಿವೆ. ಅದೇ ಮಾದರಿಯಲ್ಲಿ ಈ ಪುಣ್ಯ ಭೂಮಿಯಲ್ಲಿ ನಡೆಯಲಿರುವ ಪತ್ರಕರ್ತರ ಸಮ್ಮೇಳನವೂ ನಿರ್ವಿಘ್ನವಾಗಿ ನಡೆಯಲಿದೆ. ತನ್ಮೂಲ ಮೂಲಕ ಮತ್ತೊಂದು ಮನ್ವಂತರ ಸೃಷ್ಟಿಸಲಿದೆ ಎಂದ ಸ್ವಾಮೀಜಿ, ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೇತ್ರದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಸಮ್ಮೇಳನ ನೀರು ಕುಡಿದಷ್ಟೇ ಸುಲಭವಾಗಿ ಯಶಸ್ಸು ಕಾಣುತ್ತದೆ ಎಂದರು.
    ಅರ್ಥಪೂರ್ಣ ಚರ್ಚೆಯಾಗಲಿ : ವಿಜಯಪುರದವರು ಉತ್ತಮ ಸಮ್ಮೇಳನ ಮಾಡಿದರು ಎಂಬ ಮೆಚ್ಚುಗೆಯ ಮಾತುಗಳು ಇಡೀ ರಾಜ್ಯದ ಮನೆ-ಮಾತಾಗಬೇಕು. ಆ ನಿಟ್ಟಿನಲ್ಲಿ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿ. ಈ ನಾಡಿನ ಹಿರಿಯ-ಕಿರಿಯ ಪತ್ರಕರ್ತರಿಗೆ ಸಮ್ಮೇಳನ ಅರ್ಥಪೂರ್ಣ ವೇದಿಕೆಯಾಗಲಿ ಎಂದರು.

    ಜೊತೆಗೆ ಜಿಲ್ಲೆಯ ಹಿರಿಯ ಪತ್ರಕರ್ತರನ್ನು ಸ್ಮರಿಸುವ ಕಾರ್ಯ ನಡೆಯಲಿ. ಈ ಜಿಲ್ಲೆಯ ಹಿರಿಯ ಪತ್ರಕರ್ತರ ಕುರಿತು ಲೇಖನಗಳನ್ನು ಪ್ರಕಟಿಸುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಲಿ. ತನ್ಮೂಲಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದ ನಡೆಯಲಿರುವ ಸಮ್ಮೇಳನಕ್ಕೆ ಶುಭಾಶಯಗಳನ್ನು ಹೇಳಲು ಸ್ವಾಮೀಜಿ ಮರೆಯಲಿಲ್ಲ.

    ಲಾಂಛನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು : ಶ್ರೀಗಳನ್ನು ಭೇಟಿ ಮಾಡುತ್ತಿದ್ದಂತೆಯೇ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರು, ಸಮ್ಮೇಳನಕ್ಕೆ ಸಿದ್ಧಪಡಿಸಲಾದ ಲಾಂಛನವನ್ನು ಶ್ರೀಗಳ ಅಮೃತಹಸ್ತದಿಂದ ಬಿಡುಗಡೆಗೊಳಿಸಿ, ಲಾಂಛನ ಒಳಗೊಂಡಿರುವ ಆಲಮಟ್ಟಿ ಜಲಾಶಯ, ಬಸವನ ಬಾಗೇವಾಡಿಯ ಬಸವಸ್ಮಾರಕ, ಐತಿಹಾಸಿಕ ಗೋಲಗುಂಬಜ್, ದೇಶ-ವಿದೇಶಕ್ಕೆ ರಫ್ತಾಗುವ ಗುಣಮಟ್ಟದ ದ್ರಾಕ್ಷಿ, ನಿಂಬೆ ಕಣಜ, ಅಂತಾರಾಷ್ಟೀಯ ಮಟ್ಟದಲ್ಲಿ ಸೈಕ್ಲಿಸ್ಟ್ಗಳ ಪಾರಮ್ಯವನ್ನೊಳಗೊಂಡಿರುವ ಲಾಂಛನದ ವಿವರ ನೀಡಿದಾಗ ಸ್ವಾಮೀಜಿಯವರ ಸಂತಸಕ್ಕೆ ಪಾರವೇ ಇಲ್ಲ ಎಂಬಂತೆ ಈ ಪತ್ರಕರ್ತರ ಸಮ್ಮೇಳನ ವಿಶೇಷವಾಗಲಿದೆ. ಮಾತ್ರವಲ್ಲ. ವಿಜಯಪುರ ಜಿಲ್ಲೆಯ ಇತಿಹಾಸದಲ್ಲಿ ಮತ್ತೊಂದು ಇತಿಹಾಸ ಬರೆಯಲಿದೆ ಎಂದರು.

    ಇದರೊಟ್ಟಿಗೆ ಕಲಾವಿದ ಮಂಜುನಾಥ ಮಾನೆ ಅವರ ಕೈಚಳಕದಲ್ಲಿ ಅರಳಿದ ಲಾಂಛನವನ್ನು ಕಣ್ತುಂಬಿಸಿಕೊಂಡ ಸ್ವಾಮೀಜಿಯವರು ಮುಕ್ತ ಕಂಠದಿಂದ ಪ್ರಶಂಸಿಸಿದರು. ಅಲ್ಲದೇ ಸಂಘದ ಕ್ರಿಯಾಶೀಲ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರು, ಪತ್ರಕರ್ತರಿಗಾಗಿ ಮಾಡುತ್ತಿರುವ ನಿರಂತರ ಹೋರಾಟವನ್ನು ಪ್ರಶಂಸಿಸಿ, 2 ದಿನಗಳ ಪತ್ರಕರ್ತರ ಸಮ್ಮೇಳನಕ್ಕೆ ಮತ್ತೊಮ್ಮೆ ಶುಭ ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts