More

    ಫೆಬ್ರವರಿ 9ರಂದು ಸಿದ್ದರಾಮೇಶ್ವರ ಜಯಂತಿ ಅದ್ದೂರಿ ಆಚರಣೆ

    ಫೆಬ್ರವರಿ 9ರಂದು ಸಿದ್ದರಾಮೇಶ್ವರ ಜಯಂತಿ ಅದ್ದೂರಿ ಆಚರಣೆ

    ಚಿತ್ರದುರ್ಗ: ನಗರದ ಡಿಸಿ ಕಚೇರಿಯಲ್ಲಿ ಜ.15ರಂದು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಸರಳವಾಗಿ ಆಚರಿಸಲು ಹಾಗೂ ಭೋವಿ ಸ ಮಾಜದಿಂದ ಫೆಬ್ರವರಿ 9ರಂದು ನಗರದಲ್ಲಿ ರಾಜ್ಯಮಟ್ಟದ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಣೆ ಹಾಗೂ ಮಂಜರಿ ಹನುಮಂತಪ್ಪ ಸ್ಮರ ಣೋತ್ಸವ ಕಾರ‌್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ.

    ಎಡಿಸಿ ಇ.ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಗರದ ಡಿಸಿ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾ ತನಾಡಿದ ಸಮಾಜದ ಮುಖಂಡ ಡಿ.ಸಿ.ಮೋಹನ್,ಕೋವಿಡ್‌ನಿಂದಾಗಿ ಜಯಂತಿ ಸರಳವಾಗಿ ಆಚರಿಸಲಾಗಿದೆ. ಈ ಬಾರಿ ರಾಜ್ಯಮಟ್ಟದ ಸಮಾರಂಭ ನಗರದಲ್ಲಿ ನಡೆಯಲಿದೆ. ಸರ್ಕಾರದ ಕಾರ‌್ಯಕ್ರಮಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು. ಮುಖಂಡ ಚಂದ್ರು ಮಾತ ನಾಡಿ,ಸರ್ಕಾರದ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

    21ರಂದು ಅಂಬಿಗರ ಚೌಡಯ್ಯ ಜಯಂತಿ
    ನಗರದಲ್ಲಿ ಜ.21ರಂದು ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಗುತ್ತಿದ್ದು,ಅಗತ್ಯ ಸಿದ್ಧತೆಗಳಿಗೆ ಬಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿ ದರು. ಜಿಲ್ಲಾ ಗಂಗಾಭಿಕ ಬೆಸ್ತರ ಸಂಘದ ಅಧ್ಯಕ್ಷ ಎಚ್.ಡಿ.ರಂಗಯ್ಯ ಮಾತನಾಡಿ,ಸಮಾರಂಭದ ಸ್ಥಳ ಹಾಗೂ ಉಪನ್ಯಾಸಕರ ಕುರಿತು ಕುರಿತು ಚರ್ಚಿಸಿ,2 ದಿನಗಳಲ್ಲಿ ತಿಳಿಸಲಾಗುವುದು ಎಂದರು.
    ಎಎಸ್‌ಪಿ ಕುಮಾರಸ್ವಾಮಿ,ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ,ಕಾರ‌್ಯದರ್ಶಿದರ್ಶಿ ಲಕ್ಷ್ಮಣ್,ನಿರ್ದೇಶಕರಾದ ತಿಮ್ಮಣ್ಣ,ಎಸ್.ಎ. ಸ್ವಾಮಿ,ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ,ಜಿಲ್ಲಾ ಗಂಗಾಭಿಕ ಬೆಸ್ತರ ಸಂಘದ ಉಪಾಧ್ಯಕ್ಷ ಎಸ್.ಕೃಷ್ಣಮೂರ್ತಿ,ಕಾರ‌್ಯದರ್ಶಿ ಪಿ.ಶ್ರೀನಿವಾಸ್,ನಿರ್ದೇಶಕರಾದ ಎಚ್.ರಂಗನಾಥ್,ಮಂಜುನಾಥ್,ಕುಮಾರಸ್ವಾಮಿ,ಜಯಣ್ಣ,ಜೆ.ಮಹೇಶ್,ನಾಗೇಂದ್ರಪ್ಪ,ಬಿ.ರಾಜು ಮತ್ತಿತರರು ಇದ್ದರು.
    —-
    19ರಂದು ಮಹಾಯೋಗಿ ವೇಮನ ಜಯಂತಿ
    ನಗರದ ತರಾಸು ರಂಗಮಂದಿರದಲ್ಲಿ ಜ.19ರಂದು ಮಹಾಯೋಗಿ ವೇಮನ ಜಯಂತಿ ಆಚರಿಸಲಾಗುವುದು ಎಂದು ಎಡಿಸಿ ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಮಾತನಾಡಿ,ಮಹಾಯೋಗಿ ವೇಮನರ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts