More

    ಪ್ರಧಾನಿ ಮೋದಿ ನೀಡಿದ ಒಂದೇ ಒಂದು ಭರವಸೆಯನ್ನು ಇದುವರೆಗೆ ಸಂಪೂರ್ಣವಾಗಿ ಈಡೇರಿಸಿಲ್ಲ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಜನರ ಸಮಸ್ಯೆಗಳ ಬಗ್ಗೆ ಮಾತನಾಡಬೇಕಾದ ಪ್ರಧಾನಿಗಳು ಮೂಕರಾಗಿದ್ದಾರೆ, ಕಷ್ಟ ಕೇಳಬೇಕಾದ ಕೇಂದ್ರದ ಸಚಿವರುಗಳು ಕಿವುಡರಾಗಿದ್ದಾರೆ ಎಂದು ಮುಕ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು, ಕಳೆದ 10 ವರ್ಷಗಳು ದೇಶದ ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು, ಶೋಷಿತರು ಮತ್ತು ಜನಸಾಮಾನ್ಯರ ಪಾಲಿಗೆ ಅನ್ಯಾಯದ ಕಾಲ ಎಂದು ಕಿಡಿಕಾರಿದ್ದಾರೆ.

    ಕಳೆದ 10 ವರ್ಷಗಳು ದೇಶದ ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು, ಶೋಷಿತರು ಮತ್ತು ಜನಸಾಮಾನ್ಯರ ಪಾಲಿಗೆ ಅನ್ಯಾಯದ ಕಾಲ. ಜನರ ಸಮಸ್ಯೆಗಳ ಬಗ್ಗೆ ಮಾತನಾಡಬೇಕಾದ ಪ್ರಧಾನಿಗಳು ಮೂಕರಾಗಿದ್ದಾರೆ, ಕಷ್ಟ ಕೇಳಬೇಕಾದ ಕೇಂದ್ರದ ಸಚಿವರುಗಳು ಕಿವುಡರಾಗಿದ್ದಾರೆ. ನರೇಂದ್ರ ಮೋದಿ ಅವರ ಉದ್ಯಮಮಿತ್ರರು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಶರವೇಗದಲ್ಲಿ ಮುಂದಕ್ಕೆ ಹೋಗುತ್ತಿದ್ದರೆ, ಈ ದೇಶದ ಜನಸಾಮಾನ್ಯ ಕೇಂದ್ರ ಸರ್ಕಾರದ ದುರಾಡಳಿತ, ವೈಫಲ್ಯಗಳ ಭಾರ ಹೊತ್ತು ಕುಸಿದು ಬಿದ್ದಿದ್ದಾನೆ.

    ಇದನ್ನೂ ಓದಿ: ಕಾಂಗ್ರೆಸ್​ಗೆ ಗುಡ್​ಬೈ ಹೇಳಿದ ಬೆನ್ನಲ್ಲೇ ಎನ್​​ಸಿಪಿ ಸೇರ್ಪಡೆಯಾದ ಬಾಬಾ ಸಿದ್ದಿಕ್​

    ಪ್ರಧಾನಿ ಮೋದಿಯವರು ನೀಡಿದ ಒಂದೇ ಒಂದು ಭರವಸೆಯನ್ನು ಇದುವರೆಗೆ ಸಂಪೂರ್ಣವಾಗಿ ಈಡೇರಿಸಿಲ್ಲ. ರೈತರ ಆದಾಯ ದ್ವಿಗುಣಗೊಳಿಸುವುದು, ಯುವಕರಿಗೆ ವಾರ್ಷಿಕ 2 ಕೋಟಿ ಉದ್ಯೋಗ, ಮಹಿಳೆಯರಿಗೆ ರಕ್ಷಣೆ, ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಶೋಷಿತ ಸಮುದಾಯಗಳ ರಕ್ಷಣೆ. ಕೈಗೆಟಕುವ ಬೆಲೆಯಲ್ಲಿ ಅಗತ್ಯ ವಸ್ತುಗಳನ್ನು ಒದಗಿಸುವುದು ಮುಂತಾದ ವರ್ಣರಂಜಿತ ಭರವಸೆಗಳು ಮೋದಿಯವರು ಚುನಾವಣೆಯಲ್ಲಿ ಗೆಲ್ಲಿಸಿತ್ತು. ಆದರೆ ಗೆದ್ದ ನಂತರ ಜನರಿಗೆ ನೀಡಿದ ಭರವಸೆಗಳನ್ನು ಮರೆತು ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಕೈಗಾರಿಕೋದ್ಯಮಿಗಳ ಓಲೈಕೆಯಲ್ಲಿ ಮಗ್ನರಾಗಿದ್ದಾರೆ.

    ಕಾರ್ಮಿಕರಿಗೆ, ನೌಕರರಿಗೆ ಉದ್ಯೋಗ ಭದ್ರತೆ ಕೊಡುವ ಬದಲು ಗುತ್ತಿಗೆ ಆಧಾರದ ಅಭದ್ರ ಉದ್ಯೋಗ ಸೃಷ್ಟಿಸಲಾಗುತ್ತಿದೆ. ಸೂಕ್ತ ಮುನ್ನೋಟವಿಲ್ಲದೆ ದಿಢೀರ್​ ಲಾಕ್​ಡೌನ್​ ಘೋಷಣೆಯಿಂದ 4 ಕೋಟಿ ವಲಸಿಗ ಕಾರ್ಮಿಕರು ಕುಟುಂಬ ಸಮೇತ ಕಾಲ್ನಡಿಗೆಯಿಂದ ಪರದಾಡಬೇಕಾಯಿತು. ಕೋಟ್ಯಧಿಪತಿ ಉದ್ದಿಮೆದಾರರಿಗಷ್ಟೇ ನೆರವು ನೀಡಿದ ಸರ್ಕಾರ, ಕಾರ್ಮಿಕರು ಮತ್ತು ಸಣ್ಣ ಉದ್ದಿಮೆದಾರರಿಗೆ ಆತ್ಮನಿರ್ಭರತೆಯ ಉಪದೇಶವನ್ನಷ್ಟೇ ನೀಡಿತು ಎಂದಿದ್ದಾರೆ.

    ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳ ಅನ್ಯಾಯದ ವಿವರಗಳನ್ನು ದತ್ತಾಂಶ ಸಹಿತ ಕರ್ನಾಟಕದ ಜನತೆಯ ಮುಂದೆ ಇಡುತ್ತಿದ್ದೇನೆ. ಅಮೃತ ಕಾಲೋ ಅಥವಾ ವಿನಾಶ ಕಾಲವೋ ಎಂದು ಜನ ನಿರ್ಧರಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts