ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು(ಶುಕ್ರವಾರ) ಬೆಳಗ್ಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಮೂಲವ್ಯಾಧಿಗೆ ಚಿಕಿತ್ಸೆ ಪಡೆದಿದ್ದ ಜಾಗದಲ್ಲಿ ಸಣ್ಣ ಗುಳ್ಳೆ ಕಾಣಿಸಿಕೊಂಡಿದ್ದು, ಸಣ್ಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿರುವ ಹಿನ್ನೆಲೆಯಲ್ಲಿ ಎಚ್ಎಎಲ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಶಸ್ತ್ರಚಿಕಿತ್ಸೆ ಬಳಿಕ ಸಂಜೆ ಡಿಸ್ಚಾರ್ಜ್ ಆಗಲಿದ್ದಾರೆ. ನಾಲ್ಕು ದಿನಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯಲಿದ್ದು, ಈ ವೇಳೆ ಸಾರ್ವಜನಿಕರ ಭೇಟಿಗೆ ಅವಕಾಶವಿಲ್ಲ.
ಯುವಕನಿಗೆ ಮದ್ವೆ ಆಸೆ ಹುಟ್ಟಿಸಿ ಹಾಸನದ ಮಹಿಳೆ ಹೀಗಾ ಮಾಡೋದು? ನನ್ನಾಕೆ ಡಿಸಿ… ಅಂತ ಖುಷಿಯಲ್ಲಿದ್ದವನಿಗೆ ಭಾರೀ ಸಂಕಷ್ಟ
ಶಾಮಿಯಾನದ ಕಂಬ ಮುಟ್ಟಿದ ವಿದ್ಯಾರ್ಥಿ ಸಾವು: ಈಜು ಸ್ಪರ್ಧೆಗೆ ರಾಮನಗರಕ್ಕೆ ಆಗಮಿಸಿದ್ದವ ದುರಂತ ಅಂತ್ಯ