More

    ಸಿದ್ದಾಪುರ ಗ್ರಾಪಂ ಆಡಳಿತ ಮತ್ತೆ ಕೈವಶ

    ಸಿದ್ದಾಪುರ: ಇಲ್ಲಿನ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಸೀನಾ ಬೇಗಂ ಆಯ್ಕೆಯಾದರು.

    26 ಸದಸ್ಯರ ಬಲದ ಗ್ರಾಪಂನಲ್ಲಿ , ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಹಸೀನಾಬೇಗಂ ಹಾಗೂ ಬಿಜೆಪಿಯಿಂದ ಅಂಬ್ರಮ್ಮ ಸ್ಪರ್ಧಿಸಿದ್ದರು. ಬೇಗಂ 18 ಮತ ಪಡೆದರೆ, ಅಂಬ್ರಮ್ಮ 8 ಮತ ಪಡೆದರು. ಹೆಚ್ಚಿನ ಮತ ಪಡೆದಿದ್ದರಿಂದ ಹಸೀನಾ ಬೇಗಂ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದರು. ಎರಡನೇ ಬಾರಿಗೆ ಗ್ರಾಪಂ ಆಡಳಿತ ಚುಕ್ಕಾಣಿ ಕೈ ವಶವಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ದ್ಯಾವಮ್ಮ, ಸದಸ್ಯರಾದ ಗಂಗಪ್ಪ ಸುಂಕದ್, ಕಲೀಂ, ಚನ್ನಬಸವನಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts