More

    ಗಿಡ ನೆಟ್ಟು ಜನ್ಮದಿನ ಆಚರಿಸಿಕೊಂಡ ಸಿದ್ದಲಿಂಗಶ್ರೀ ; ಹಳೆಯ ಮಠದಲ್ಲಿ ವಿವಿಧ ಮಠಾಧೀಶರಿಂದ ಶ್ರೀಗಳ ಪಾದಪೂಜೆ

    ತುಮಕೂರು: ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಶಿವಕುಮಾರ ಶ್ರೀಗಳ ಗದ್ದುಗೆ ಆವರಣದಲ್ಲಿ ಗಿಡನೆಡುವ ಮೂಲಕ 58ನೇ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡರು. ಬುಧವಾರ ಹಳೆಯ ಮಠದಲ್ಲಿ ವಿವಿಧ ಮಠಾಧೀಶರು ಶ್ರೀಗಳ ಪಾದಪೂಜೆ ನೆರವೇರಿಸಿದರು.

    ಕರೊನಾ ನಡುವೆಯೂ ಹತ್ತಾರು ಗಣ್ಯರು ಶ್ರೀಮಠಕ್ಕೆ ಭೇಟಿ ನೀಡಿ ಶ್ರೀಗಳಿಗೆ ಶುಭ ಕೋರಿ, ಆಶೀರ್ವಾದ ಪಡೆದುಕೊಂಡರು. ಶ್ರೀಗಳು ಬೆಳಗ್ಗೆ ಶಿವಪೂಜೆ ನೆರವೇರಿಸಿ ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆಗೆ ತೆರಳಿ ಪೂಜೆ ಸಲ್ಲಿಸಿ, ಪ್ರಾರ್ಥನಾ ಮಂದಿರದಲ್ಲಿ ಧ್ಯಾನ ಮಾಡಿದರು. ಬಳಿಕ ಹಳೆಯ ಮಠದ ಆವರಣದಲ್ಲಿ ಕಂಚುಗಲ್ ಬಂಡೇಮಠ, ಕಿರಿಕೊಡ್ಲಿ ಮಠ, ಬೆಟ್ಟದಹಳ್ಳಿ ಮಠದ ಶ್ರೀಗಳು ಸೇರಿ ವಿವಿಧ ಮಠಾಧೀಶರು ಪಾದಪೂಜೆ ನೆರವೇರಿಸಿದರು.

    ಶ್ರೀಗಳು ಕಚೇರಿಗೆ ಆಗಮಿಸುತ್ತಿದ್ದಂತೆ ಗಣ್ಯರ ದಂಡು ಪ್ರತ್ಯೇಕವಾಗಿ ಆಗಮಿಸಿ ಜನ್ಮದಿನದ ಶುಭಕೋರಿ, ಆಶೀರ್ವಾದ ಪಡೆದುಕೊಂಡರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಎಸ್ಪಿ ಡಾ.ಕೆ.ವಂಶಿಕೃಷ್ಣ, ಸಿಇಒ ಶುಭಾಕಲ್ಯಾಣ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ.ಅಜಯ್, ಪಾಲಿಕೆ ಆಯುಕ್ತೆ ರೇಣುಕಾ, ಎಸ್‌ಐಟಿ ನಿರ್ದೇಶಕ ಎಂ.ಎನ್.ಚನ್ನಬಸಪ್ಪ, ಡಾ.ಅರುಣ್ ವಿ.ಸೋಮಣ್ಣ , ನಗರಸಭಾ ಮಾಜಿ ಸದಸ್ಯ ಆರ್.ಬಸವರಾಜು, ಹೊನ್ನೇಶ್‌ಕುಮಾರ್ ಹಾಗೂ ಮಠದಲ್ಲಿ ಉಳಿದುಕೊಂಡಿದ್ದ ಬೆರಳೆಣಿಕೆಯಷ್ಟು ಮಕ್ಕಳು, ಮಠದ ಸಿಬ್ಬಂದಿ ಶ್ರೀಗಳ ಆಶೀರ್ವಾದ ಪಡೆದರು.

    ವೀಳ್ಯದೆಲೆ ಅಲಂಕಾರ: ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆಗೆ ಬುಧವಾರ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀಗಳ ಗದ್ದುಗೆಗೆ ವೀಳ್ಯದೆಲೆ ಅಲಂಕಾರ ಮಾಡಲಾಗಿತ್ತು.

    ಆಶೀರ್ವಾದ ಪಡೆದ ಬಿ.ವೈ.ವಿಜಯೇಂದ್ರ: ಸಿದ್ದಲಿಂಗ ಶ್ರೀಗಳ ಜನ್ಮದಿನದ ಅಂಗವಾಗಿ ಬುಧವಾರ ಸಂಜೆ ಶ್ರೀಮಠಕ್ಕೆ ಭೇಟಿ ನೀಡಿದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ಬೆಂ.ಗ್ರಾಮಾಂತರ ಜಿಪಂ ಅಧ್ಯಕ್ಷ ಮರಿಸ್ವಾಮಿ, ಎಂ.ಆರ್.ರುದ್ರೇಶ್, ಬಿ.ಸುರೇಶಗೌಡ ಶುಭಕೋರಿ, ಶ್ರೀಗಳ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಹ ಶ್ರೀಗಳಿಗೆ ಶುಭಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts