More

    ಶ್ರೀಗೇಣ್ರಾಯ ಕಳಸ ಮೆರವಣಿಗೆ ಅದ್ದೂರಿ

    ಕವಿತಾಳ: ಸಮೀಪದ ಚಿಲ್ಕರಾಗಿ ಗ್ರಾಮದಲ್ಲಿ ಶ್ರೀಗೇಣ್ರಾಯ(ಆಂಜನೇಯ) ದೇವಸ್ಥಾನದ ಗೋಪುರ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಶ್ರಾವಣ ಶನಿವಾರ ಅದ್ದೂರಿಯಾಗಿ ಜರುಗಿತು.

    ಉಟಗನೂರಿನ ಶ್ರೀಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಬೆಳಗ್ಗೆ 6ಗಂಟೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ವಿಶೇಷ ಪೂಜೆ ಜರುಗಿತು. ನಂತರ ಮಹಿಳೆಯರ ಕುಂಭ, ಕಳಸ ಮೆರವಣಿಗೆ ಮೂಲಕ ಗಂಗಾಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಶ್ರೀಅಂಬಾಭವಾನಿ ದೇವಸ್ಥಾನದಿಂದ ಪಂಚ ಕಳಸಗಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.

    ಶ್ರೀಮರಿ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಚಿಲ್ಕರಾಗಿ ಗ್ರಾಮ ಆಧ್ಯಾತ್ಮದ ತವರೂರು. ಇಲ್ಲಿ ಪ್ರತಿವರ್ಷ ವಿಭಿನ್ನ ಧಾರ್ಮಿಕ ಕಾರ್ಯಕ್ರಮ ನಡೆಸುವ ಮೂಲಕ ಗ್ರಾಮಸ್ಥರು ದೇವರ ಪ್ರೀತಿಗೆ ಪಾತ್ರರಾಗುತ್ತಿದ್ದಾರೆ. ಇಂಥ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ಇದರಿಂದ ಸಮಾಜದಲ್ಲಿ ಸಮಾನತೆ, ಶಾಂತಿ, ಸಮೃದ್ಧಿ ನೆಲೆಸಲು ಸಾಧ್ಯವಾಗಲಿದೆ ಎಂದರು.

    ಶ್ರೀಶರಣಯ್ಯ ತಾತ, ಬಿಜೆಪಿ ಮುಖಂಡ ಪ್ರಸನ್ನ ಪಾಟೀಲ್, ಪಾಮನಕಲ್ಲೂರು ಗ್ರಾಪಂ ಅಧ್ಯಕ್ಷ ಸೈಕಲ್ ರಾಜಾಸಾಬ್ ಗುಡಿಹಾಳ, ಗ್ರಾಪಂ ಸದಸ್ಯ ಬಸವಲಿಂಗಯ್ಯ ಸ್ವಾಮಿ, ಗ್ರಾಮಸ್ಥರಾದ ತಿಮ್ಮನಗೌಡ ಚಿಲ್ಕರಾಗಿ, ಅಮರೇಗೌಡ ಪೊಪಾ, ಬಸವರಾಜ ಕುಂಬಾರ, ಮಲ್ಲಿಕಾರ್ಜುನ ಪೊಪಾ, ಶಂಭುರೆಡ್ಡಿ, ಬಸನಗೌಡ ಹರ್ವಾಪುರ ಇತರರಿದ್ದರು.

    ಗೋಪುರ ಹಾಗೂ ಕಳಸ ದೇವಸ್ಥಾನದ ಜೀವಾಳ. ಗ್ರಾಮಸ್ಥರು ತಮ್ಮ ಶ್ರಮದಿಂದ ಶ್ರೀಮರಿಬಸವಲಿಂಗ ತಾತನವರ ದೇವಸ್ಥಾನ ಅದ್ಭುತವಾಗಿ ನಿರ್ಮಿಸಿದ್ದಾರೆ. ಗೋಪುರ, ಕಳಸ ನಿರ್ಮಿಸಿ ದೇವಸ್ಥಾನದ ಕಳೆ ಹೆಚ್ಚಿಸಬೇಕು. ಆಧ್ಯಾತ್ಮದಿಂದ ಮಾತ್ರ ಜಗತ್ತಿಗೆ ಶಾಂತಿ, ಸಮೃದ್ಧಿ ನೆಲಸಲು ಸಾಧ್ಯವಿದೆ.
    | ಶ್ರೀ ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ ಉಟಕನೂರು ಸಂಸ್ಥಾನಮಠದ ಪೀಠಾಧಿಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts