More

    ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವ ಸಂಪನ್ನ

    ಆಯನೂರು: ಗ್ರಾಮದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಪ್ರತಿಷ್ಠಾಪನಾ ಮಹೋತ್ಸವ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆದು ಶುಕ್ರವಾರ ಸಂಪನ್ನಗೊಂಡಿತು.

    ಕೂಡ್ಲಿಯ ಶ್ರೀ ರಘು ವಿಜಯ ತೀರ್ಥ ಅವರ ಆಶೀರ್ವಾದದೊಂದಿಗೆ ಬುಧವಾರ ಬೆಳಗ್ಗೆ ಫಲ ಸಮರ್ಪಣೆ, ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹವಾಚನ, ದೇವನಾಂದಿ, ಮಂಟಪ ಪ್ರವೇಶ, ಅಂಕುರಾರ್ಪಣೆ, ಪುಣ್ಯಾಹ ವಾಚನ, 108 ಮೋದಕ ಗಣಹೋಮ, ಮಂಡಲಾರಾಧನೆ, ಸಂಜೆ ಶಿಲಾಪರಿ ಗ್ರಹಣ, ಶಿಲಾಧಿವಾಸ, ಕಳಸ ಸ್ಥಾಪನೆ, ಮಂಡಲ ಆರಾಧನೆ , ರಾಕ್ಷೋಜ್ಞ ಹೋಮ, ವಾಸ್ತು ಹೋಮ, ದಿಬ್ಬಲಿ, ಆಶ್ಲೇಷ ಬಲಿ, ಆದಿವಾಸಾದಿ ಪೂಜೆ, ಮಹಾ ಮಂಗಳಾರತಿ ನಡೆಯಿತು.
    ಗುರುವಾರ ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವ ನಡೆಯಿತು. ತದನಂತರ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ, ಪ್ರತಿಷ್ಠಾಂಗ ಹೋಮ, ಗೋಪುರ ಕಳಶ ಪೂಜೆ, ಧ್ವಜಸ್ತಂಭ ಪೂಜೆ, 108 ಕುಂಭಾಭಿಷೇಕ, ಮಹಾ ಮಂಗಳಾರತಿ ನಡೆಯಿತು. ಶುಕ್ರವಾರದಂದು ಬೆಳಗ್ಗೆ ಪ್ರಾಯಶ್ಚಿತ್ತ ಹೋಮ, ಮಹಾಮಂಗಳಾರತಿ ನೆರವೇರಿತು.
    ಮೂರು ದಿನಗಳ ಕಾಲ ಶ್ರೀಗಳಿಂದ ಆಶೀರ್ವಚನ, ಸಂಜೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಭರತನಾಟ್ಯ ನಡೆಯಿತು. ಮೂರು ದಿನವೂ ಪ್ರಸಾದ ವಿನಿಯೋಗ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts