More

    ಲಾಕ್​ಡೌನ್​ನಲ್ಲಿ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ಕಾರ್ಮಿಕರು, ವಿದ್ಯಾರ್ಥಿ, ಪ್ರವಾಸಿಗರಿಗೆ ಸಿಹಿ ಸುದ್ದಿ

    ನವದೆಹಲಿ: ರಾಷ್ಟ್ರದ ವಿವಿಧ ಕಡೆಗಳಲ್ಲಿ ಇರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಇತರರಿಗೆ ತಮ್ಮ ಊರುಗಳಿಗೆ ತೆರಳಲು ಶ್ರಮಿಕ್​ ವಿಶೇಷ ರೈಲುಗಳ ಸಂಚಾರಕ್ಕೆ ರೈಲ್ವೇ ಮಂಡಳಿ ಮುಂದಾಗಿದೆ.

    ಕೇಂದ್ರ ಸರ್ಕಾರ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ಇತರರು ಲಾಕ್​ಡೌನ್​ ಹಿನ್ನೆಲೆಯಲ್ಲಿ ರಾಷ್ಟ್ರದ ವಿವಿಧ ಭಾಗಗಳಲ್ಲಿ ಸಿಲುಕಿದ್ದಾರೆ. ಇವರನ್ನು ಸುರಕ್ಷಿತವಾಗಿ ಸ್ವಂತ ಊರುಗಳಿಗೆ ಮರಳಿಸಲು ಕೇಂದ್ರ ಸರ್ಕಾರ ನೀತಿ ರೂಪಿಸಿದೆ.

    ಸಾರ್ವಜನಿಕ ಸಾರಿಗೆ ಸಂಸ್ಥೆ ಹಾಗೂ ವಿಶೇಷ ರೈಲುಗಳಲ್ಲಿ ಜನರನ್ನು ಸ್ವಂತ ಊರುಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೇ ಮಂಡಳಿ ಶ್ರಮಿಕ್​ ವಿಶೇಷ ರೈಲುಗಳನ್ನು ಓಡಿಸಲು ಮುಂದಾಗಿದೆ.

    ನೋಡಲ್​ ಅಧಿಕಾರಿಗಳ ನೇಮಕ: ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರನ್ನು ಸ್ವಂತ ಊರುಗಳಿಗೆ ತಲುಪಿಸಲು ಭಾರತೀಯ ರೈಲ್ವೇ ಮಂಡಳಿ ನೋಡಲ್​ ಅಧಿಕಾರಿಗಳನ್ನು ನೇಮಕ ಮಾಡಿದೆ.

    ಈ ಅಧಿಕಾರಿಗಳು ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಿ ವಿಶೇಷ ರೈಲುಗಳ ಸಂಚಾರಕ್ಕೆ ಅನುಮತಿ ನೀಡಲಿದ್ದಾರೆ.
    ನೋಡಲ್​ ಅಧಿಕಾರಿಗಳು ರೈಲು ನಿಲ್ದಾಣದಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಟಿಕೆಟ್​ ವಿತರಣೆ ಸೇರಿದಂತೆ ಇತರೆ ಸೇವೆಗಳನ್ನು ನೀಡಲಿದ್ದಾರೆ.

    ಪ್ರತಿಯೊಬ್ಬರನ್ನು ತಪಾಸಣೆ ನಡೆಸಿ ಕೈಗೆ ಸೀಲು ಹಾಕಲಿದ್ದಾರೆ. ಸ್ವಂತ ಊರುಗಳಿಗೆ ತೆರಳಿದವರು ವೈದ್ಯರು ಹೇಳಿದಷ್ಟು ದಿನ ಕ್ವಾರಂಟೈನ್​ನಲ್ಲಿ ಇರಬೇಕಾಗುತ್ತದೆ. ವಿಶೇಷ ರೈಲುಗಳಲ್ಲಿ ಆಗಮಿಸಿದವರ ಎಲ್ಲ ಮಾಹಿತಿಯನ್ನು ರೈಲ್ವೇ ಮಂಡಳಿ ಆಯಾ ರಾಜ್ಯ ಸರ್ಕಾರಗಳಿಗೆ ನೀಡಲಿದೆ. (ಏಜೆನ್ಸೀಸ್​)

    ಮಹಾರಾಷ್ಟ್ರದಲ್ಲಿ ಉದ್ಭವಿಸಬಹುದಾಗಿದ್ದ ಸಂವಿಧಾನ ಬಿಕ್ಕಟ್ಟಿಗೆ ಬ್ರೇಕ್​, ಮೇ 21ಕ್ಕೆ ವಿಧಾನಪರಿಷತ್​ ಚುನಾವಣೆ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts