More

    ಮಕ್ಕಳ ಬಗ್ಗೆ ಜಾಗೃತಿ ತೋರಿ

    ಯಲಬುರ್ಗಾ: ಗ್ರಾಮೀಣ ಕೂಲಿಕಾರರ ಮೂರು ವರ್ಷದ ಮಕ್ಕಳಿಗಾಗಿ ಆರಂಭಗೊಂಡ ಗೆದಗೇರಿ ಗ್ರಾಪಂ ಕೂಸಿನ ಮನೆ ತಾಲೂಕಿಗೆ ಮಾದರಿಯಾಗಿದೆ ಎಂದು ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪೊಲೀಸ್ ಪಾಟೀಲ್ ಹೇಳಿದರು.

    ಇದನ್ನೂ ಓದಿ: ಸರ್ಕಾರಿ ಶಾಲೆ ಮಕ್ಕಳನ್ನು ವಿಮಾನದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋದ ಶಿಕ್ಷಕ

    ತಾಲೂಕಿನ ಗೆದಗೇರಿಯಲ್ಲಿ ಕೂಸಿನಮನೆಯ ಮಕ್ಕಳ ಆರೈಕೆದಾರರಿಗೆ ತರಬೇತಿ ನಡೆಯುತ್ತಿದೆ. 6ನೇ ದಿನದ ಕಾರಣ ಕ್ಷೇತ್ರಭೇಟಿ ಮಾಡಿ ಮಂಗಳವಾರ ಮಾತನಾಡಿದರು.

    ಕೂಸಿನ ಮನೆಗೆ ಬರುವ ಮಕ್ಕಳನ್ನು ಜಾಗೃತಿಯಿಂದ ನೋಡಿಕೊಳ್ಳಬೇಕು. ಇಲ್ಲಿಗೆ ನರೇಗಾ ಕೂಲಿಕಾರರು, ರೈತರ ಮಕ್ಕಳು ಬರಲಿದ್ದು, ಅವರನ್ನು ಮಕ್ಕಳ ಆರೈಕೆದಾರರು ಸರಿಯಾಗಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಬೆಂಗಳೂರಿನ ಮೊಬೈಲ್ ಕ್ರೆಚ್ಛಸ್ ಸಂಸ್ಥೆ ತರಬೇತುದಾರ ಜಗದೀಶ ಎಂ.ವಿ ಮಕ್ಕಳ ಆರೈಕೆ ಮಾಡುವ ಬಗ್ಗೆ ಮಾಹಿತಿ ನೀಡಿದರು. ಗ್ರಾಪಂ ಅಧ್ಯಕ್ಷ ಶರಣಪ್ಪ ಕೊಪ್ಪದ, ಸದಸ್ಯರಾದ ನಾಗರಾಜ ನಾಯ್ಕ, ಬಾಳನಗೌಡ, ಪ್ರಮುಖರಾದ ವೀರಭದ್ರಪ್ಪ, ತಿರುಪತಿ ಬಸರಿಗಿಡದ, ತಾಪಂ ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಪಿಡಿಒ ಮಹಾಂತೇಶ ಬಾಳಿಕಾಯಿ, ಕಾರ್ಯದರ್ಶಿ ಚನ್ನಪ್ಪ, ಕರವಸೂಲಿಗಾರ ಕಳಕಯ್ಯ ಹಿರೇಮಠ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts