More

  ಉತ್ತರ ಕನ್ನಡ ಜಿಲ್ಲೆಯ ಆರತಿ ಕಿರಣ್ ಶೇಟ್, ರಾಯಚೂರಿನ ವೆಂಕಟೇಶ್​ಗೆ ಶೌರ್ಯ ಪ್ರಶಸ್ತಿ; 26ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ

  ನವದೆಹಲಿ: ಕರ್ನಾಟಕದ ರಾಜ್ಯದ ಇಬ್ಬರಿಗೆ ಶೌರ್ಯ ಪ್ರಶಸ್ತಿ ಪ್ರಕಟವಾಗಿದೆ. ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ಪ್ರಕಟಿಸಿರುವ ಪಟ್ಟಿಯಲ್ಲಿ ರಾಜ್ಯದ ಇಬ್ಬರು ಸ್ಥಾನ ಪಡೆದಿದ್ದಾರೆ.

  ಉತ್ತರ ಕನ್ನಡ ಜಿಲ್ಲೆಯ 9 ವರ್ಷದ ಆರತಿ ಕಿರಣ್ ಶೇಟ್ ಮತ್ತು ರಾಯಚೂರಿನ 11 ವರ್ಷದ ವೆಂಕಟೇಶ್​ಗೆ ಶೌರ್ಯ ಪ್ರಶಸ್ತಿಗೆ ಆಯ್ಕೆಯಾದವರು.

  ಕೋಪೋದ್ರಿಕ್ತ ಹಸುವಿನ ದಾಳಿಯಿಂದ ತನ್ನ ಸಹೋದರನ ಪ್ರಾಣವನ್ನು ಆರತಿ ಕಾಪಾಡಿದ್ದಳು. ಆರತಿ ಸಮಯೋಚಿತ ನಡೆಯಿಂದಾಗಿ ಆಕೆಯ ತಮ್ಮನಿಗೆ ಪುನರ್ಜನ್ಮ ಸಿಕ್ಕಿತ್ತು.

  ಪ್ರವಾಹದ ನೀರಿನಲ್ಲಿ ಈಜಿ ಆಂಬುಲೆನ್ಸ್​ಗೆ ದಾರಿ

  2019ರಲ್ಲಿ ಕೃಷ್ಣಾ ನದಿಯ ಭೀಕರ ಪ್ರವಾಹ ಬಂದಾಗ ಶೌರ್ಯ ತೋರಿದ್ದ ವೆಂಕಟೇಶ್​. ಆಗಸ್ಟ್ 10ರಂದು ನೀರಿನಿಂದ ಮುಳುಗಿದ್ದ ರಸ್ತೆಯಲ್ಲಿ ಈಜಿ ಆಂಬುಲೆನ್ಸ್​ಗೆ ದಾರಿ ತೋರಿಸಿದ್ದ ವೆಂಕಟೇಶ್. ಆ ಮೂಲಕ ಆಂಬುಲೆನ್ಸ್ ನಲ್ಲಿದ್ದ ಐವರ ಪ್ರಾಣ ಕಾಪಾಡಿದ್ದ ವೆಂಕಟೇಶ್​ಗೆ ಶೌರ್ಯ ಪ್ರಶಸ್ತಿ ದೊರೆತಿದೆ.

  ಒಟ್ಟು 22 ಮಕ್ಕಳಿಗೆ ಶೌರ್ಯ ಪ್ರಶಸ್ತಿ ಘೋಷಿಸಿದ್ದು, ರಾಜ್ಯದ ವೆಂಕಟೇಶ್​ ಮತ್ತು ಆರತಿ ಇಬ್ಬರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಜನವರಿ 26ರಂದು ರಾಜ​ಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್​​ನಲ್ಲಿ ಭಾಗಿಯಾಗಲಿರುವ ಈ ಇಬ್ಬರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts