More

    ತಕ್ಷಣ ಬಾಗಿಲು ಮುಚ್ಚಿ ಇಲ್ಲದಿದ್ರೆ ನಿತ್ಯ 10 ಸಾವಿರ ರೂ. ದಂಡ ಕಟ್ಟಿ: ಮದರಸಾಗಳಿಗೆ ಯೋಗಿ ಸರ್ಕಾರದ ಎಚ್ಚರಿಕೆ

    ಲಖನೌ: ನೋಂದಣಿ ಅಥವಾ ಅನುಮತಿ ಇಲ್ಲದೆ ಕಾರ್ಯಾಚರಣೆ ಮಾಡುತ್ತಿರುವ ಮದರಸಾಗಳ ವಿರುದ್ಧ ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿರುವ ಮದರಸಾಗಳಿಗೆ ವಿದೇಶಿ ಹಣ ತಲುಪುತ್ತಿರುವ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಿದ ಬೆನ್ನಲ್ಲೇ ಈ ಹೊಸ ಆದೇಶ ಹೊರಬಿದ್ದಿದೆ.

    ಉತ್ತರ ಪ್ರದೇಶದ ಮುಜಾಫರ್​ನಗರ ಜಿಲ್ಲೆಯಲ್ಲಿರುವ ಮದರಸಾಗಳು ತನಿಖಾ ವ್ಯಾಪ್ತಿಯಲ್ಲಿವೆ. ಈ ಜಿಲ್ಲೆಯಲ್ಲಿ ನೂರಾರು ಮದರಸಾಗಳು ಸರ್ಕಾರದ ಅನುಮತಿಯಿಲ್ಲದೆ ಕಾರ್ಯಾಚರಣೆ ಮಾಡುತ್ತಿವೆ. ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಮದರಸಾಗಳ ಮ್ಯಾನೇಜರ್​ಗಳಿಗೆ ನೋಟಿಸ್​ ಹೊರಡಿಸಲಾಗಿದೆ. ತಕ್ಷಣ ಮದರಸಾಗಳನ್ನು ಮುಚ್ಚದಿದ್ದರೆ ನಿತ್ಯವು 10 ಸಾವಿರ ರೂಪಾಯಿ ದಂಡ ಪಾವತಿ ಮಾಡುವಂತೆ 12 ಮದರಸಾಗಳಿಗೆ ನೋಟಿಸ್​ ಹೊರಡಿಸಿರುವುದಾಗಿ ವರದಿ ತಿಳಿಸಿದೆ.

    ಕ್ಷೇತ್ರ ಶಿಕ್ಷಣಾಧಿಕಾರಿ ಮದರಸಾಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಮುಜಾಫರ್‌ನಗರದ ಮೂಲ ಶಿಕ್ಷಾ ಅಧಿಕಾರಿ ಶುಭಂ ಶುಕ್ಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸರಿಯಾದ ಅನುಮೋದನೆ ಇಲ್ಲದೆಯೇ ನೂರಾರು ಮದರಸಾಗಳು ಕಾರ್ಯಾಚರಣೆ ಮಾಡುತ್ತಿವೆ ಎಂದು ಮುಜಾಫರ್​ನಗರದ ಮೈನಾರಿಟಿ ಇಲಾಖೆ ಮಾಹಿತಿ ನೀಡಿದೆ. ಮದರಸಾಗಳನ್ನು ನೋಂದಣಿ ಮಾಡಿಸಿಕೊಳ್ಳಲು ತಿಳಿಸಲಾಗಿದ್ದು, ಇದರ ಕಾರ್ಯವಿಧಾನಗಳು ಕಷ್ಟವೇನಲ್ಲ ಎಂದು ಶುಭಂ ಶುಕ್ಲಾ ಹೇಳಿದ್ದಾರೆ.

    ಶಿಕ್ಷಣ ಇಲಾಖೆಗೆ ಯಾವುದೇ ಹಕ್ಕಿಲ್ಲ
    ಇದೇ ಸಂದರ್ಭದಲ್ಲಿ ಮದರಸಾ ಸಂಬಂಧಿತ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಶಿಕ್ಷಣ ಇಲಾಖೆಗೆ ಯಾವುದೇ ಹಕ್ಕಿಲ್ಲ ಎಂದು ಮದರಸಾ ಶಿಕ್ಷಣ ಮಂಡಳಿಯ ಅಧ್ಯಕ್ಷ ಇಫ್ತಿಕರ್ ಅಹ್ಮದ್ ಜಾವೇದ್ ಹೇಳಿದ್ದಾರೆ. ಅಲ್ಪಸಂಖ್ಯಾತ ಇಲಾಖೆಗೆ ಮಾತ್ರ ಇದರ ಅಧಿಕಾರವಿದೆ ಎಂದಿರುವ ಜಾವೇದ್​, ಮದರಸಾಗಳು ಸಾಮಾನ್ಯ ಶಾಲೆಗಳಂತಲ್ಲ. ಆದ್ದರಿಂದ, ಶಾಲೆಗಳ ನಿಯಮಗಳು, ದಂಡ ಇತ್ಯಾದಿಗಳು ಮದರಸಾಗಳಿಗೆ ಅನ್ವಯಿಸುವುದಿಲ್ಲ. 1995ರಲ್ಲಿ ಶಾಲೆಗಳ ನಿಯಮಗಳು ಮತ್ತು ನಿಬಂಧನೆಗಳಿಂದ ಮದರಸಾಗಳನ್ನು ಪ್ರತ್ಯೇಕಿಸಲಾಯಿತು ಎಂದು ಇಫ್ತಿಕಾರ್ ಅಹ್ಮದ್ ಜಾವೇದ್ ಸ್ಪಷ್ಟಪಡಿಸಿದ್ದಾರೆ.

    ಕೆಲವು ವಿಭಾಗಗಳನ್ನು ಗುರಿಯಾಗಿಸಿಕೊಂಡು ಮುಜಾಫರ್‌ನಗರದ ಮದರಸಾಗಳಿಗೆ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಜಮಿಯತ್ ಉಲೇಮಾ-ಇ-ಹಿಂದ್ ಉತ್ತರ ಪ್ರದೇಶದ ಕಾರ್ಯದರ್ಶಿ ಖಾರಿ ಜಾಕಿರ್ ಹುಸೇನ್ ಆರೋಪಿಸಿದ್ದಾರೆ. ಮೂರರಿಂದ ಐದು ದಿನಗಳಲ್ಲಿ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ ನೀಡಲಾಗಿದೆ. ತಪ್ಪಿದಲ್ಲಿ ದಿನಕ್ಕೆ 10,000 ರೂಪಾಯಿ ದಂಡ ತೆರಬೇಕಾಗುತ್ತದೆ. ಇಷ್ಟು ಕಡಿಮೆ ಅವಧಿಯಲ್ಲಿ ದಾಖಲೆಗಳನ್ನು ಸಲ್ಲಿಸಲು ಹೇಗೆ ಸಾಧ್ಯ ಎಂದು ಖಾರಿ ಝಾಕಿರ್ ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)

    ವಿಜಯನಗರದಲ್ಲಿ ಎರಡು ಕಾಲುಗಳುಳ್ಳ ಕರು ಜನನ: ಏನಿದು ಅಚ್ಚರಿ ಎಂದ ಗ್ರಾಮಸ್ಥರು!

    ಈ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳ ಬೇಡಿಕೆ ಹೆಚ್ಚಿದ ನಂತರ ವಿಮಾನ ಟಿಕೆಟ್‌ ದರ ಶೇ.30ರಷ್ಟು ಅಗ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts