More

    ಭಾರತ್ ಜೋಡೋ ಯಾತ್ರೆಯಲ್ಲಿ ಐವರಿಗೆ ವಿದ್ಯುತ್ ಸ್ಪರ್ಶ

    ತಲಾ ೧ ಲಕ್ಷ ರೂ. ಪರಿಹಾರ ಘೋಷಿಸಿದ ರಾಹುಲ್ ಗಾಂಧಿ

    ಬಳ್ಳಾರಿ: ಭಾರತ್ ಜೋಡೋ ಯಾತ್ರೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಐವರು ಗಾಯಗೊಂಡಿರುವ ತಾಲೂಕಿನ ಮೋಕಾ ಗ್ರಾಮದಲ್ಲಿ ರವಿವಾರ ಬೆಳಗ್ಗೆ ಸಂಭವಿಸಿದೆ.
    ಮೋಕಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ ಹಾಗೂ ದೊಡ್ಡಪ್ಪ, ಸಂತೋಷ್ ಸೇರಿದಂತೆ ಐವರು ಗಾಯಗೊಂಡಿದ್ದಾರೆ.
    ಗ್ರಾಮದಿಂದ ಯರಗಟ್ಟಿಯತ್ತ ಪಾದಯಾತ್ರೆಯಲ್ಲಿ ಸಾಗುತ್ತಿತ್ತು. ಕಬ್ಬಿಣದ ಕಂಬಿಗೆ ಭಾರತ ಐಕ್ಯತಾ ಯಾತ್ರೆಯ ಧ್ವಜವನ್ನು ಸಿಕ್ಕಿದ್ದು, ಮಾರ್ಗ ಮಧ್ಯೆ ಹಾದು ಹೋಗುವ ವಿದ್ಯುತ್ ತಂತಿಗೆ ತಗುಲಿದೆ. ಧ್ವಜ ಹಿಡಿದುಒಂಡಿದ್ದ ವ್ಯಕ್ತಿಯಿಂದ ಇತರೆ ನಾಲ್ವರಿಗೆ ವಿದ್ಯುತ್ ಪ್ರವಹಿಸಿದೆ. ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ತಕ್ಷಣ ಗಾಯಾಳುಗಳನ್ನು ಮೋಕಾ ತಾಲೂಕು ಆಸ್ಪತ್ರೆಗೆ ದಾಖಳಿಸಿ, ಚಿಕಿತ್ಸೆ ಒದಗಿಸಲಾಯಿತು.

    ತಲಾ ೧ ಲಕ್ಷ ರೂ. ಪರಿಹಾರ
    ಘಟನೆ ಹಿನ್ನೆಲೆಯಲ್ಲಿ ಮೋಕಾ ತಾಲೂಕು ಆಸ್ಪತ್ರಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಅಲ್ಲದೇ, ತಲಾ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts