More

    ನೊಂದ ಮಹಿಳೆ ನೆರವಿಗೆ ಸಖಿ ಕೇಂದ್ರ ಶೀಘ್ರದಲ್ಲೇ ಆರಂಭ

    ಚಿಕ್ಕಮಗಳೂರು: ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ ಆಶ್ರಯ ಕಲ್ಪಿಸುವ ಸಖಿ ಕೇಂದ್ರ ಉಡುಪಿಯಲ್ಲಿರುವಂತೆ ಶೀಘ್ರದಲ್ಲೇ ನಗರದಲ್ಲೂ ಆರಂಭಗೊಳ್ಳಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

    ನಗರದ ಕಸ್ತೂರ ಬಾ ಸದನದ ಆವರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದ ಸ್ವಾಧಾರ ಕೇಂದ್ರ ಉದ್ಘಾಟಿಸಿ ಮಾತನಾಡಿ, ಸ್ವಾಧಾರ ಕೇಂದ್ರ ನಗರದ ವಿಜಯಪುರ 60 ಅಡಿ ರಸ್ತೆಯ ಬಾಡಿಗೆ ಕಟ್ಟಡದಲ್ಲಿ ಆರಂಭವಾಗಿದ್ದು, ಶೀಘ್ರ ಸ್ವಂತ ಕಟ್ಟಡ ನಿರ್ವಿುಸಲಾಗುವುದು. ಇದರ ಜತೆಗೆ ಇಲ್ಲಿ ಸಖಿ ಕೇಂದ್ರ ಕೂಡ ಆರಂಭವಾದಲ್ಲಿ ನೊಂದ ಹೆಣ್ಣು ಮಕ್ಕಳಿಗೆ ಆಶ್ರಯ ನೀಡಲು ಇನ್ನಷ್ಟು ಅವಕಾಶ ಉಂಟಾಗಲಿದೆ ಎಂದು ಹೇಳಿದರು.

    ಶಿಕ್ಷಣ, ತಂತ್ರಜ್ಞಾನ ಹೆಚ್ಚಾದಂತೆ ಮಹಿಳೆಯರಿಗೆ ಕಿರುಕುಳ ನೀಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕುಟುಂಬಗಳಲ್ಲಿನ ಸಂಬಂಧಗಳು ಮುರಿದು ಬೀಳುತ್ತಿವೆ. ಮಹಿಳೆಗೆ ಕುಟುಂಬದಲ್ಲಿ ಸಮಸ್ಯೆ ಎದುರಾದಾಗ ಆಕೆ ಮನೆಯಿಂದ ಹೊರ ಬಂದರೆ ಬಂಧುಗಳು ಸೇರಿ ಯಾರ ಮನೆಯಲ್ಲೂ ಉಳಿಯಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸಖಿ ಕೇಂದ್ರ ಅನಿವಾರ್ಯ ಎಂದು ತಿಳಿಸಿದರು.

    ಐಟಿಬಿಟಿ ಪ್ರವೇಶದ ನಂತರ ಹೆಣ್ಣು-ಗಂಡಿನ ನಡುವೆ ವೈಯಕ್ತಿಕ ಪ್ರತಿಷ್ಠೆ ಹೆಚ್ಚಾಗಿ ಭಾರತೀಯ ಸಮಾಜದಲ್ಲಿ ಕಂಡು ಬಾರದಿದ್ದ ವಿಚ್ಚೇದನದ ಪ್ರಮಾಣ ಏರುತ್ತಲೇ ಇದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಪತಿ-ಪತ್ನಿ ದೂರಾಗುವ ಪ್ರಕರಣಗಳು ಹೆಚ್ಚುತ್ತಿವೆ. ಸಮಾಜದಲ್ಲಿ ಆರೋಗ್ಯಕರ ವಾತಾವರಣ ಇದ್ದಿದ್ದರೆ ಮಹಿಳೆಯರು ಈ ಕೇಂದ್ರಕ್ಕೆ ರಕ್ಷಣೆ ಅರಸಿಕೊಂಡು ಬರುವ ಪ್ರಮೇಯವಿರುತ್ತಿರಲಿಲ್ಲ ಎಂದು ವಿಷಾದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts