More

    ಸಾನಿಯಾ-ಶೋಯಿಬ್ ಡಿವೋರ್ಸ್​ ವದಂತಿ: ವಿವಾಹೇತರ ಸಂಬಂಧ ಕುರಿತ ಪ್ರಶ್ನೆಗೆ ಆಯೇಶಾ ಉತ್ತರ ಹೀಗಿತ್ತು….

    ದುಬೈ: ಭಾರತೀಯ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ (Sania Mirza) ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್​​ ಮಲಿಕ್ (Shoib Malik) ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಹರಿದಾಡಿತ್ತು. ಈವರೆಗೂ ಈ ಬಗ್ಗೆ ಸಾನಿಯಾ ಆಗಲಿ ಅಥವಾ ಮಲಿಕ್​​ ಆಗಲಿ ಪ್ರತಿಕ್ರಿಯೆ ನೀಡಿಲ್ಲ. ದಂಪತಿ ನಡುವಿನ ಬಿರುಕಿಗೆ ಪಾಕಿಸ್ತಾನಿ ಮಾಡೆಲ್​ ಆಯೇಷಾ ಓಮರ್​ ಕಾರಣ ಎಂಬ ಸುದ್ದಿಯು ಹರಿದಾಡಿತ್ತು.

    ಸಾನಿಯಾ ಮತ್ತು ಶೋಯೆಬ್​ ಅಧಿಕೃತವಾಗಿ ಬೇರೆಯಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಡಿವೋರ್ಸ್​ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿ ಪಾಕಿಸ್ತಾನಿ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗಿತ್ತು. ಈ ವಿಚಾರದ ಬಗ್ಗೆ ಅಭಿಮಾನಿಯೊಬ್ಬ ಕೇಳಿದ್ದ ಪ್ರಶ್ನೆಗೆ ಆಯೇಶಾ ಓಮರ್​ ಇನ್​ಸ್ಟಾಗ್ರಾಂನಲ್ಲಿ ನೀಡಿರುವ ಉತ್ತರದ ಸ್ಕ್ರೀನ್​ಶಾಟ್​ ಇದೀಗ ವೈರಲ್​ ಆಗಿದೆ.

    ನೀವು ಶೋಯಿಬ್​​ ಅವರನ್ನು ಮದುವೆ ಆಗುತ್ತೀರಾ? ನಿಮ್ಮ ನಡುವೆ ಸಂಬಂಧ ಇದೆಯಾ? ಎಂದು ಅಭಿಮಾನಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಆಯೇಶಾ, ಆತ (ಶೋಯಿಬ್​​ ಮಲಿಕ್​) ಸಂತೋಷವಾಗಿ ಮದುವೆ ಆಗಿದ್ದಾನೆ. ದಂಪತಿಯ ವೈಯಕ್ತಿಕ ಜೀವನವನ್ನು ಗೌರವಿಸಬೇಕು. ನಾನು ಮತ್ತು ಶೋಯಿಬ್​​ ಒಳ್ಳೆಯ ಸ್ನೇಹಿತರು ಮತ್ತು ಇತೈಷಿಗಳು. ಹೀಗಿರುವಾಗ ಇಂತಹ ಸಂಬಂಧಗಳನ್ನು ಹುಟ್ಟುಹಾಕುವುದು ಎಲ್ಲೆಡೆ ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ.

    ಸಾನಿಯಾ-ಶೋಯಿಬ್ ಡಿವೋರ್ಸ್​ ವದಂತಿ: ವಿವಾಹೇತರ ಸಂಬಂಧ ಕುರಿತ ಪ್ರಶ್ನೆಗೆ ಆಯೇಶಾ ಉತ್ತರ ಹೀಗಿತ್ತು….

    ಆಯೇಶಾ ಸ್ಪಷ್ಟನೆ ನೀಡಿದ್ದರೂ ಕೂಡ ವದಂತಿ ಮಾತ್ರ ಹಾಗೇ ಇದೆ. ಈ ಹಿಂದೆ ಶೋಯಿಬ್​​ ಮತ್ತು ಆಯೇಶಾ ಫೋಟೋಶೂಟ್​ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಫೋಟೋಗಳಲ್ಲಿ ತುಂಬಾ ಬೋಲ್ಡ್​ ಆಗಿ ಆಪ್ತರಾಗಿರುವಂತೆ ಪೋಸ್​​ ನೀಡಿದ್ದರು. ಅಂದಿನಿಂದ ಇಬ್ಬರ ನಡುವೆ ವಿವಾಹೇತರ ಸಂಬಂಧ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಬ್ರೇಕಪ್​ ಸುದ್ದಿ ಹರಡಲು ಕಾರಣವೇನು?
    ಇತ್ತೀಚೆಗೆ Sania Mirza ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಅದರಲ್ಲಿ “ಕಠಿಣ ದಿನಗಳು ಮತ್ತು ಒಡೆದ ಹೃದಯಗಳು” ಎಂದು ಬರೆದುಕೊಂಡಿದ್ದರು. ಅಲ್ಲಿಂದಾಚೆಗೆ ಇಬ್ಬರ ಬ್ರೇಕಪ್​ (Breakup) ವದಂತಿ ಹರಡಲು ಆರಂಭವಾಯಿತು. ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದ ಸಾನಿಯಾ, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದರು. ಇಷ್ಟೇ ಅಲ್ಲದೆ, ಶೋಯೆಬ್ ಮತ್ತು ಸಾನಿಯಾ ಇತ್ತೀಚೆಗಷ್ಟೇ ದುಬೈನಲ್ಲಿ ಇಜಾನ್‌ನ (Izan Mirza Malik) ನಾಲ್ಕನೇ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯಿಬ್​​ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿರಲಿಲ್ಲ. ಇದೆಲ್ಲವು ಡಿವೋರ್ಸ್​ ಅನುಮಾನಗಳಿಗೆ ಕಾರಣವಾಗಿತ್ತು.

    ಅಂದಹಾಗೆ ಸಾನಿಯಾ ಮಿರ್ಜಾ (Sania Mirza) ಮತ್ತು ಶೋಯಿಬ್​ ಮಲಿಕ್ (Shoib Malik) 2010ರ ಏಪ್ರಿಲ್ 12ರಂದು ಹೈದರಾಬಾದ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಇದಾದ ನಂತರ ಪಾಕಿಸ್ತಾನಿ ಪದ್ಧತಿಯಂತೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಮದುವೆ ನಡೆಯಿತು. (ಏಜೆನ್ಸೀಸ್​)

    ಸಾನಿಯಾ-ಶೋಯಿಬ್​​ ಮಧ್ಯೆ ಆಯೇಶಾ? ಡಿವೋರ್ಸ್​ ವದಂತಿಗೆ ಸ್ಫೋಟಕ ತಿರುವು ಕೊಟ್ಟ ಪಾಕ್​ ಮಾಧ್ಯಮಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts