More

    ಜನಮನ ಗೆದ್ದ ಶಿವಧೂತ ಪಂಜುರ್ಲಿ ಯಕ್ಷಗಾನ

    ಸವಣೂರ: ಪಟ್ಟಣದ ಡಾ.ವಿ.ಕೃ. ಗೋಕಾಕ ಸಭಾ ಭವನದಲ್ಲಿ ಮಂಗಳವಾರ ಪ್ರದರ್ಶನಗೊಂಡ ಪಂಜುರ್ಲಿ ದೈವದ ಕುರಿತ ಶಿವಧೂತ ಪಂಜುರ್ಲಿ ಯಕ್ಷಗಾನ ಜನಮನ ಗೆದ್ದಿತು.

    ಪ್ರಶಾಂತ ಸೋಷಿಯಲ್ ಕ್ಲಬ್, ಹೋಟೆಲ್ ಮಾಲೀಕರ ಸಂಘ ಹಾಗೂ ಜೆಸಿಐ ನಮ್ಮ ಸವಣೂರ ಆಶ್ರಯದಲ್ಲಿ ನಡೂರು ಮಂದರ್ತಿಯ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಪ್ರದರ್ಶನ ನೀಡಿತು.

    ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ತಹಸೀಲ್ದಾರ್ ಅನಿಲಕುಮಾರ ಜಿ., ಮಾತನಾಡಿ, ಯಕ್ಷಗಾನ ಇಂದು ವಿಶ್ವವ್ಯಾಪಿಯಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಪಂಜುರ್ಲಿ ದೇವರ ಕುರಿತು ಮೂಡಿಬಂದ ಚಲನಚಿತ್ರದಿಂದಾಗಿ ಜನ ಸಾಮಾನ್ಯರಿಗೆ ಯಕ್ಷಗಾನ ಮತ್ತಷ್ಟು ಹತ್ತಿರವಾಗಿದೆ ಎಂದರು.

    ಆಯೋಜಕ ಪ್ರಶಾಂತ ಶೆಟ್ಟಿ, ಯಕ್ಷಗಾನ ಮಂಡಳಿ ಮುಖ್ಯಸ್ಥ ಸದಾಶಿವ ಅಮೀನ್ ಮಾತನಾಡಿದರು. ಜೆಸಿಐ ನಮ್ಮ ಸವಣೂರು ಸಂಸ್ಥೆಯ ಅಧ್ಯಕ್ಷ ಬಾಪುಗೌಡ ಕೊಪ್ಪದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರಘುಪತಿ ಭಟ್, ದಿನೇಶ ಭಟ್, ಪ್ರಭಾತ ಶೆಟ್ಟಿ, ಡಾ. ವಸಂತ ಹೊಸಮನಿ, ಜೆಸಿಐ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ವಿದ್ಯಾಧರ ಕುತನಿ ಹಾಗೂ ಬಸವರಾಜ ಚಳ್ಳಾಳ ನಿರ್ವಹಿಸಿದರು.

    ಪಾತ್ರ ನಿರ್ವಹಣೆ: ನಾರಾಯಣ ಸಿದ್ದಾಪುರ ಮದ್ದಳೆ ನುಡಿಸಿದರೆ, ಕುಮಾರ ಅಮೀನ್ ಕೊಕ್ಕರ್ಣಿ ಚಂಡೆ ವಾದ್ಯ ನುಡಿಸಿದರು. ನಡೂರಿನ ದಿನಕರ ಕುಂದರ್, ದೇವಲ್ಕುಂದದ ನಾಗರಾಜ ಪೂಜಾರಿ, ಮೇಗರವಳ್ಳಿಯ ರಾಕೇಶ್ ಶೆಟ್ಟಿ, ನಾಗೇಂದ್ರರಾವ್ ಉಪ್ಪುಂದ, ವಿಶ್ವನಾಥ್ ಹೆನ್ನಾಬೈಲ್, ಹರೀಶ ಜಪ್ತಿ, ನಂದೀಶ ಮೊಗವೀರ ಜನ್ನಾಡಿ, ಕೇಶವ ಆಚಾರ್ ಶೃಂಗೇರಿ, ಸಂತೋಷಕುಮಾರ್ ಬಾರಾಳಿ, ಶ್ರೀನಿವಾಸ ಶೆಟ್ಟಿ, ಶಂಕರ ನಾರಾಯಣ ಪಾತ್ರ ನಿರ್ವಹಿಸಿದರು. ಹಾಸ್ಯ ಪಾತ್ರದಲ್ಲಿ ಸತೀಶ ಹಾಲಾಡಿ ಅವರು ಎಲ್ಲರ ಹೊಟ್ಟೆ ಹುಣ್ಣಾಗಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts