More

    ಜೆಇಎಂ ಮೂಲಕ ಟೆಂಡರ್ ಕರೆಯಲು ಸೆಲ್ವಕುಮಾರ್ ಸೂಚನೆ

    ಶಿವಮೊಗ್ಗ: ಜಿಲ್ಲೆಯಲ್ಲಿ ಔಷಧಗಳ ಕೊರತೆಯಿದ್ದರೆ ಜೆಇಎಂ(ಗೌರ‌್ನಮೆಂಟ್ ಇ-ಮಾರ್ಕೇಟ್‌ಪ್ಲೇಸ್) ಪೋರ್ಟಲ್‌ನಲ್ಲಿ ಬೇಡಿಕೆಪಟ್ಟಿ ಲಗತ್ತಿಸಿ. ಇದರಿಂದ ತ್ವರಿತ ಸಮಯದಲ್ಲಿ ಸ್ಪರ್ಧಾತ್ಮಕ ದರದಲ್ಲಿ ಔಷಧಗಳ ಪೂರೈಕೆಯಾಗುತ್ತದೆ. ಯಾವುದೇ ಕಾರಣಕ್ಕೂ ಔಷಧಗಳ ಕೊರತೆ ಕಾಡದಂತೆ ನೋಡಿಕೊಳ್ಳಿ ಎಂದು ಡಿಎಚ್‌ಒ ಡಾ.ರಾಜೇಶ್ ಸುರಗೀಹಳ್ಳಿ ಅವರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಸೂಚನೆ ನೀಡಿದರು.
    ಜೆಇಎಂ ಮೂಲಕ ಖರೀದಿಸಿದರೆ ಇಡೀ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿರುತ್ತದೆ. ಯಾರೂ ನಿಮ್ಮನ್ನು ಪ್ರಶ್ನೆ ಮಾಡುವ ಪ್ರಮೇಯವೇ ಇರುವುದಿಲ್ಲ. ಈ ಪೋರ್ಟಲ್‌ನಲ್ಲಿ ಅನೇಕ ಕಂಪನಿಗಳು ಸಕ್ರಿಯವಾಗಿರುವುದರಿಂದ ಸಕಾಲದಲ್ಲಿ ಔಷಧ ಪೂರೈಕೆ ಸಾಧ್ಯವಿದೆ ಎಂದು ಶುಕ್ರವಾರ ಕೆಡಿಪಿ ಸಭೆಯಲ್ಲಿ ತಿಳಿಸಿದರು.
    ಬಿಸಿಎಂ, ಕೃಷಿ ಹಾಗೂ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಅನೇಕ ಕಟ್ಟಡ ನಿರ್ಮಾಣ ಕಾಮಗಾರಿಗಳು ಇನ್ನೂ ಆರಂಭವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಾ.ಎಸ್.ಸೆಲ್ವಕುಮಾರ್, ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಆರಂಭವಾಗದಿದ್ದರೆ ಅನುದಾನ ಸರ್ಕಾರಕ್ಕೆ ವಾಪಾಸ್ಸು ಹೋಗುತ್ತದೆ ಎಂದು ಹೇಳಿದರು.
    ಅಂತರ್ಜಾತಿ ವಿವಾಹವಾದವರಿಗೆ ಸಹಾಯಧನ ನೀಡಲು ಅನುದಾನದ ಕೊರತೆಯಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಹಣವಿಲ್ಲ. ಇದಕ್ಕೆ ಅಗತ್ಯ ಅನುದಾನ ಒದಗಿಸುವಂತೆ ಪತ್ರ ಬರೆಯಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶ್ರೀನಿವಾಸ್ ಸಭೆಗೆ ಮಾಹಿತಿ ನೀಡಿದರು.
    ಜಿಪಂ ಸಿಇಒ ಎನ್.ಡಿ.ಪ್ರಕಾಶ್, ಪ್ರೊಬೇಷನರಿ ಐಎಎಸ್ ಅಧಿಕಾರಿ ದಲ್ಜಿತ್‌ಕುಮಾರ್ ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts