More

    ಶೂಟೌಟ್ ಭಯ ಇದ್ದರೆ ದೇಶದ್ರೋಹ ಚಟುವಟಿಕೆಗೆ ಹೆದರಿಕೆ

    ಶಿವಮೊಗ್ಗ: ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿದರೆ ಶೂಟೌಟ್ ಮಾಡುತ್ತಾರೆ ಅಥವಾ ಗಲ್ಲಿಗೇರಿಸುತ್ತಾರೆಂಬ ಭಯ ಮೂಡಬೇಕು. ಅಲ್ಲಿವರೆಗೂ ಸಮಾಜ ಸುಧಾರಣೆ ಆಗುವುದಿಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
    ಪಾಕಿಸ್ತಾನದ ಸೈನಿಕರು ದೇಶದ ಸೈನಿಕರಿಗೆ ಹೊಡೆದಾಗ ತಿರುಗಿಬೀಳುವಂತೆ ದೇಶದ್ರೋಹಿಗಳಿಗೆ ಗುಂಡು ಹಾರಿಸುವ ಅಥವಾ ನೇಣಿಗೇರಿಸುವ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
    ರಾಷ್ಟ್ರದ್ರೋಹಿಗಳಿಗೆ ಯಾವುದೇ ಭಯವಿಲ್ಲದಂತಾಗಿದೆ. ತಮ್ಮ ಮಕ್ಕಳು ಪಿಎಫ್‌ಐ ಜತೆ ಸೇರಿ ದೇಶದ್ರೋಹದ ಕೃತ್ಯ ಮಾಡುತ್ತಿರುವುದು ಮುಸ್ಲಿಂ ಪಾಲಕರಿಗೆ ಮಾಮೂಲಿ ಆಗಿಬಿಟ್ಟಿದೆ. ಮೊದಲು ಆ ಸಮಾಜದ ಮಕ್ಕಳನ್ನು ತಂದೆ-ತಾಯಿಗಳೇ ಬಿಗಿ ಮಾಡಬೇಕು. ಸಮಾಜವೂ ಈ ದಿಸೆಯಲ್ಲಿ ಗಮನ ಹರಿಸಬೇಕು. ಯಾವ ಸಂಘಟನೆ ಅಥವಾ ಪಕ್ಷ ಅವರಿಗೆ ಬೆಂಬಲ ನೀಡುತ್ತಿವೆ ಎಂಬುದನ್ನೂ ಗಮನಿಸಬೇಕು. ಬಿಗಿ ಕ್ರಮ ತೆಗೆದುಕೊಳ್ಳುತ್ತೇವೆಂದು ಕೇಂದ್ರ ಹಾಗೂ ರಾಜ್ಯದ ಸಚಿವರು ಪದೇಪದೆ ಹೇಳುತ್ತಿದ್ದರೂ ಯಾವ ಕ್ರಮ ಕೈಗೊಂಡಿದ್ದೀರೆಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
    ಮೃತಹಿಂದು ಕಾರ್ಯಕರ್ತರ ಪಟ್ಟಿ ಓದಲು ನಾವಿಲ್ಲಿಲ್ಲ. ತಂದೆ-ತಾಯಿಗಳೇ ದೇಶದ್ರೋಹಿಗಳ ಮನಪರಿವರ್ತನೆ ಮಾಡಬೇಕಿದೆ. ಇಲ್ಲದಿದ್ದಲ್ಲಿ ಸರ್ಕಾರ ಉಗ್ರ ಶಿಕ್ಷೆ ನೀಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಗಿ ಕಾನೂನು ರೂಪಿಸಬೇಕು ಎಂದರು.
    ನನ್ನ ಮನೆ ಸಮೀಪ ಪ್ರಾಯೋಗಿಕ ಸ್ಫೋಟ: ನನ್ನ ಮನೆಯಿಂದ ಅನತಿ ದೂರದ ಪುರಲೆ ತುಂಗಾ ನದಿ ತೀರದಲ್ಲಿ ಇತ್ತೀಚೆಗೆ ಪ್ರಾಯೋಗಿಕಾಗಿ ಬಾಂಬ್ ಸ್ಫೋಟಿಸಿದ್ದರು ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು. ಶಿವಮೊಗ್ಗ ಶಾಂತಿಪ್ರಿಯರ ಜಿಲ್ಲೆಯಾಗಿದ್ದು ಇಲ್ಲಿ ಬಂದು ಇಂತಹ ದುಷ್ಕೃತ್ಯಗಳನ್ನು ನಡೆಸುವ ಮೂಲಕ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಮುಖ್ಯವಾಗಿ ಜನ ಜಾಗೃತಿ ಆಗಲಿಲ್ಲ ಎಂದರೆ ಪೊಲೀಸರು ಏನೂ ಮಾಡಲು ಆಗುವುದಿಲ್ಲ. ಗೂಂಡಾಗಳು, ದರೋಡೆಕೋರರು ಹಾಗೂ ದೇಶದ್ರೋಹಿಗಳು ಚಿಗುರುತ್ತಲೇ ಹೋಗುತ್ತಾರೆ ಎಂದು ಶಾಸಕ ಈಶ್ವರಪ್ಪ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts