More

    ಯುವತಿಯರೇ ಲವ್ ಜಿಹಾದ್ ಬಗ್ಗೆ ಎಚ್ಚರ: ಸಾದ್ವಿ ಪ್ರಜ್ಞಾಸಿಂಗ್ ಕಿಡಿನುಡಿ

    ಶಿವಮೊಗ್ಗ: ಹೆಣ್ಣು ಮಕ್ಕಳು ನಡೆದಾಡುವ ಆಟಂಬಾಂಬ್‌ಗಳಾಗಬೇಕು. ಚಾಕು ಇರುವುದು ಸೊಪ್ಪು ಕತ್ತರಿಸುವುದಕ್ಕೆ ಮಾತ್ರವಲ್ಲ. ಅದನ್ನು ನಮ್ಮ ಆತ್ಮ ರಕ್ಷಣೆಗೂ ಬಳಸಿಕೊಳ್ಳಬೇಕು. ಯುವತಿಯರು ಲವ್ ಜಿಹಾದ್ ಬಗ್ಗೆ ಎಚ್ಚರದಿಂದ ಇರಬೇಕು..ಇದು ಮಧ್ಯಪ್ರದೇಶ ರಾಜ್ಯದ ಭೂಪಾಲ್ ಲೋಕಸಭಾ ಕ್ಷೇತ್ರದ ಸದಸ್ಯೆ ಸಾದ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರ ಕಿಡಿನುಡಿಗಳು
    ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯಕರ್ತರ ತ್ರೈವಾರ್ಷಿಕ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಪ್ರತಿ ಮನೆಗಳಲ್ಲೂ ಆಯಧಗಳನ್ನು ಇರಿಸಿಕೊಳ್ಳಬೇಕು. ಅದು ಆತ್ಮರಕ್ಷಣೆಗೆ, ತನ್ಮೂಲಕ ಸಮಾಜದ ರಕ್ಷಣೆಗೆ ಅವಶ್ಯ. ತೀರಾ ಅಗತ್ಯವೆನಿಸಿದರೆ ಆಯುಧಗಳ ಪರವಾನಗಿಯನ್ನೂ ಪಡೆದುಕೊಳ್ಳಬೇಕು ಎಂದರು.
    ನಾವು ಶಾಂತಿಯ ಪರಿಭಾಷೆಯನ್ನು ಒಪ್ಪುತ್ತೇವೆ. ವಸುದೈವ ಕುಟುಂಬಕಂ ಎಂಬುದನ್ನು ಮಾನ್ಯ ಮಾಡುತ್ತೇವೆ. ಆದರೆ ಕೆಲವರಿಗೆ ಇದು ಅರ್ಥವಾಗುವುದಿಲ್ಲ. ಅಂತವರಿಗೆ ಅವರದೇ ಭಾಷೆಯಲ್ಲಿ ಉತ್ತರ ಹೇಳಬೇಕಾಗುತ್ತದೆ ಎಂದು ಗುಡುಗಿದರು.
    ಅತಿಥಿ ದೇವೋಭವ ಎಂಬುದನ್ನು ಒಪ್ಪಿದವರು ನಾವು. ಆದರೆ ಅತಿಥಿಗಳೇ ಮನೆಯ ಯಜಮಾನರಾಗಲು ಅವಕಾಶ ನೀಡಬಾರದು. ಆತ್ಮರಕ್ಷಣೆಯ ಅಧಿಕಾರ ಎಲ್ಲರಿಗೂ ಇದೆ. ನಮ್ಮ ಮೇಲೆ ಉಂಟಾಗುವ ಅಕ್ರಮಣಗಳಿಗೆ ತಕ್ಕ ಉತ್ತರ ನೀಡಲೇ ಬೇಕು. ಶಿವಾಜಿಯ ರಣನೀತಿ ನಮ್ಮದಾಗಬೇಕೆಂದು ಹೇಳಿದರು.
    ಸಿಎಎ ವಿರುದ್ಧ ದೆಹಲಿಯಲ್ಲಿ ತಿಂಗಳುಗಟ್ಟಲೆ ಪ್ರತಿಭಟನೆಗಳು ನಡೆದವು. ಏಕರೂಪ ನಾಗರಿಕ ಸಂಹಿತೆಯನ್ನು ಜನರು ಬಯಸುತ್ತಿದ್ದಾರೆ. ಆದರೆ ಕೆಲವರು ಮಾತ್ರ ಇದನ್ನು ವಿರೋಧಿಸುತ್ತಿದ್ದಾರೆ. ಭಾರತ ಹಿಂದು ರಾಷ್ಟ್ರವಾಗಿಯೇ ಉಳಿಯಲು ಜನಸಂಖ್ಯಾ ನಿಯಂತ್ರಣ ಅತ್ಯವಶ್ಯ. ಇದಕ್ಕಾಗಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲೇ ಬೇಕು ಎಂದು ಅಭಿಪ್ರಾಯಪಟ್ಟರು.
    ಮಾತೃಶಕ್ತಿ ಜಾಗ್ರತಗೊಳ್ಳಬೇಕು. ಪಾಲಕರು ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಮಿಷನರಿ ಶಾಲೆಗಳಿಗೆ ದಾಖಲು ಮಾಡಬಾರದು. ಮಕ್ಕಳಿಗೆ ನಮ್ಮ ಸಂಸ್ಕೃತಿ, ಪರಂಪರೆ ಬಗ್ಗೆ ಅಗತ್ಯ ಮಾಹಿತಿ ನೀಡಬೇಕೆಂದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts