More

    ಹಿಂದು ಜಾಗರಣ ವೇದಿಕೆ ಸಮ್ಮೇಳನಕ್ಕೆ ಶಿವಮೊಗ್ಗ ಸಜ್ಜು

    ಶಿವಮೊಗ್ಗ: ಮೈಸೂರು ಜಿಲ್ಲೆಯಲ್ಲಿ ದೇವಾಲಯವೊಂದರ ಬೃಹತ್ ಗೋಪುರವನ್ನೇ ಕೆಡವಿದ್ದರು. ಆ ಸಮಯದಲ್ಲಿ ಹಿಂದು ಜಾಗರಣ ವೇದಿಕೆ ಹೋರಾಟ ನಡೆಸಿ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲು ಕಾರಣವಾಗಿತ್ತು. ರಾಜ್ಯದಲ್ಲಿ ಅನೇಕ ದೇವಸ್ಥಾನಗಳನ್ನು ಉರುಳಿಸುವ ಷಡ್ಯಂತ್ರ ನಡೆಯುತ್ತಿದೆ. ಅದರ ವಿರುದ್ಧ ವೇದಿಕೆ ನಿರಂತರ ಹೋರಾಟ ನಡೆಸುತ್ತಿದೆ ಎಂದು ದಕ್ಷಿಣ ಪ್ರಾಂತ ಸಂಚಾಲಕ ದೊ.ಕೇಶವಮೂರ್ತಿ ಹೇಳಿದರು.
    ನಗರದಲಿ ನ.25ರಂದು ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತದ ಮೂರನೇ ತ್ರೈ ವಾರ್ಷಿಕ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಬಿಎಚ್ ರಸ್ತೆಯ ಮೈಲಾರೇಶ್ವರ ದೇವಾಲಯದ ಆವರಣದಲ್ಲಿ ಸಮ್ಮೇಳನದ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.
    ಹಿಂದು ಸಮಾಜಕ್ಕೆ ಎದುರಾಗುತ್ತಿರುವ ವ್ಯವಸ್ಥಿತ ಪಿತೂರಿಗಳ ವಿರುದ್ಧ ನಮ್ಮ ಸಂಘಟನೆ ನಿರಂತರವಾಗಿ ಹೋರಾಟ ನಡೆಸುತ್ತಿದೆ. ಲವ್ ಜಿಹಾದ್ ಪಿಡುಗಿನ ವಿರುದ್ಧ ಸಮಾಜವನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದೆ. ಅನೇಕ ವಿಷಯಗಳಲ್ಲಿ ಹೋರಾಟ ಮಾಡುತ್ತಿರುವ ಸಂಘಟನೆ ಮೂರನೇ ಸಮ್ಮೇಳನಕ್ಕೆ ಶಿವಮೊಗ್ಗವನ್ನು ಆಯ್ಕೆ ಮಾಡಿಕೊಂಡಿದೆ ಎಂದರು.
    ಸಾವರ್ಕರ್ ಭಾವಚಿತ್ರವನ್ನು ಅಳವಡಿಸಿದರೆ ಅದನ್ನು ಹರಿದುಹಾಕುವ, ಹತ್ಯೆ ನಡೆಸಿ ಹತ್ಯೆಗೊಳಗಾದ ಯುವಕನ ಮನೆಯವರನ್ನೇ ಬೆದರಿಸುವ ಕೃತ್ಯ ಶಿವಮೊಗ್ಗದಲ್ಲಿ ನಡೆದಿದೆ. ಪ್ರಕೃತಿದತ್ತವಾದ ಮಲೆನಾಡಿನ ಸೊಬಗನ್ನು ಸವಿಯುತ್ತಿದ್ದ ಕರ್ನಾಟಕದ ಜನರಿಗೆ ಭಯದ ವಾತಾವರಣ ಸೃಷ್ಟಿಸಿ ಸೂಕ್ಷ್ಮ ಪ್ರದೇಶ ಎಂಬ ವಾತಾವರಣವನ್ನು ಶಿವಮೊಗ್ಗದಲ್ಲಿ ಸೃಷ್ಟಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ತೇಜಸ್ವಿ, ಉಪಾಧ್ಯಕ್ಷ ಎನ್.ಜೆ.ರಾಜಶೇಖರ್, ಸದಸ್ಯರಾದ ಶ್ರೀನಿವಾಸ್ ಕಾಸರವಳ್ಳಿ, ಹರ್ಷ ಕಾಮತ್, ಸುವರ್ಣ ಶಂಕರ್ ಮುಂತಾದವರು ಉಪಸ್ಥಿತರಿದ್ದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts