More

    ಶಿವಮೊಗ್ಗ: ಕಾಂಗ್ರೆಸ್‌ನಲ್ಲಿ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ. ಆಕಾಂಕ್ಷಿಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾದ ಬಳಿಕ ಇದೀಗ ಆಕಾಂಕ್ಷಿಗಳಿಂದ ಅಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆ ನಡೆಯುತ್ತಿದೆ. ಗುರುವಾರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ನಾಯಕರು ಅರ್ಜಿ ಸಲ್ಲಿಸಿದವರ ಅಭಿಪ್ರಾಯ ಆಲಿಸಿದರು.
    ಕಚೇರಿಯೊಳಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದ್ರುವನಾರಾಯಣ, ಎಐಸಿಸಿ ಕರ್ನಾಟಕ ಪ್ರಭಾರಿ ಮಯೂರ್ ಜಯಕುಮಾರ್, ಎಐಸಿಸಿ ಸದಸ್ಯ ಸಯ್ಯದ್ ಅಹಮದ್, ಜಿಲ್ಲಾ ಉಸ್ತುವಾರಿ ಎಚ್.ಎಂ.ರೇವಣ್ಣ, ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಪ್ರತ್ಯೇಕವಾಗಿ ಆಕಾಂಕ್ಷಿಗಳನ್ನು ಕರೆಯಿಸಿಕೊಂಡು ಮಾತನಾಡಿದರು.
    ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದವರಿಗೆ ವಿವಿಧ ಪ್ರಶ್ನೆಗಳನ್ನು ಕೇಳುವ ಮೂಲಕ ಕ್ಷೇತ್ರದಲ್ಲಿ ಪಕ್ಷದ ಪೂರಕ ಹಾಗೂ ಪ್ರತಿಕೂಲ ಅಂಶಗಳನ್ನು ಪಟ್ಟಿ ಮಾಡಲಾಯಿತು. ಪಕ್ಷದ ಸಂಘಟನೆ, ಭಿನ್ನಮತ, ಹಿಂದಿನ ಚುನಾವಣೆಗಳಲ್ಲಿ ಆಗಿರುವ ಲೋಪಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ಅರ್ಜಿ ಸಲ್ಲಿಸಿದವರು ಗೆಲ್ಲಲು ಪೂರಕವಾಗಿರುವ ಅಂಶಗಳೇನು ಎಂಬುದನ್ನು ಆಕಾಂಕ್ಷಿಗಳಿಂದಲೇ ತಿಳಿಯುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡಿದರು.
    ಒನ್ಸ್ ಮೋರ್ ಕೆಬಿಪಿ
    ಒಳಗೆ ಆಕಾಂಕ್ಷಿಗಳೊಂದಿಗೆ ನಾಯಕರು ಸಂದರ್ಶನ ನಡೆಸುತ್ತಿದ್ದರೆ ಹೊರಗಡೆ ಆಕಾಂಕ್ಷಿಗಳ ಬೆಂಬಲಿಗರ ಘೋಷಣೆ ಮುಗಿಲು ಮುಟ್ಟಿತ್ತು. ತಮ್ಮ ನೆಚ್ಚಿನ ಮುಖಂಡರ ಭಾವಚಿತ್ರವಿರುವ ಪೋಸ್ಟರ್ ಹಿಡಿದುಕೊಂಡು ಟಿಕೆಟ್‌ಗಾಗಿ ಆಗ್ರಹಿಸಿದರು. ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಬೆಂಬಲಿಗರು ಒನ್ಸ್ ಮೋರ್ ಕೆಬಿಪಿ ಎಂದು ಘೋಷಣೆಗಳನ್ನು ಕೂಗಿದರು. ಈ ಬಾರಿ ಕೆ.ಬಿ.ಪ್ರಸನ್ನಕುಮಾರ್ ಅವರಿಗೆ ಟಿಕೆಟ್ ನೀಡಿದರೆ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ದಿನವಿಡೀ ಕಾಂಗ್ರೆಸ್ ಕಚೇರಿಯಲ್ಲಿ ಬಿರುಸಿ ಚಟುವಟಿಕೆ ನಡೆಯುತ್ತಿದ್ದುದರಿಂದ ಕಚೇರಿ ಹೊರಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳು ಒಳಗಡೆ ನಾಯಕರೊಂದಿಗೆ ಇರುವಾಗ ಮುಖಂಡರು ಹೊರಗಡೆ ಘೋಷಣೆಗಳನ್ನು ಕೂಗುತ್ತಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts