More

    ಸಿಟಿ ಸ್ಕ್ಯಾನ್ ಗೆ ಹೆಚ್ಚು ದರ ಪಡೆದರೆ ಕಾನೂನು ಕ್ರಮ: ಡಿಎಚ್‌ಒ

    ಶಿವಮೊಗ್ಗ: ಕರೊನಾ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಎಚ್‌ಆರ್‌ಸಿಟಿ(ಸಿಟಿ ಸ್ಕ್ಯಾನ್), ಚೆಸ್ಟ್ ಎಕ್ಸ್‌ರೇ ಹಾಗೂ ಇತರೆ ಪ್ರಯೋಗಶಾಲಾ ಪರೀಕ್ಷೆಗಳಿಗೆ ಕೆಲವು ಖಾಸಗಿ ಆಸ್ಪತ್ರೆಗಳು ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಪಡೆಯುತ್ತಿದ್ದು, ಸರ್ಕಾರದ ಆದೇಶದ ಪಾಲಿಸದ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕೆಪಿಎಂಇ ನೋಂದಣಿ ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಚ್‌ಒ ಡಾ. ರಾಜೇಶ್ ಸುರಗೀಹಳ್ಳಿ ಎಚ್ಚರಿಕೆ ನೀಡಿದ್ದಾರೆ.
    ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮದ ನಿಯಮರ ಪ್ರಕಾರ ಪ್ರತಿ ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರಿಗೆ ಕಾಣಿವಂತೆ ಚಿಕಿತ್ಸಾ ದರಪಟ್ಟಿ ಪ್ರದರ್ಶಿಸಬೇಕು. ಸರ್ಕಾರದ ಸುತ್ತೋಲೆಯಂತೆ ಸಿಟಿ ಸ್ಕ್ಯಾನ್ ಹಾಗೂ ಚೆಸ್ಟ್ ಎಕ್ಸ್‌ರೇಗಳಿಗೆ ದರ ಪಡೆಯಬೇಕು. ಹಲವು ಸಂದರ್ಭದಲ್ಲಿ ಪ್ರಯೋಗ ಶಾಲೆಗಳು ವೈದ್ಯರ ರೆಫರಲ್ ಸ್ಲಿಪ್ ಆಧಾರದಲ್ಲಿಯೇ ಸಿಟಿಸ್ಕ್ಯಾನ್, ಚೆಸ್ಟ್ ಎಕ್ಸ್‌ರೇ ಹಾಗೂ ಇತರೆ ಪ್ರಯೋಗಶಾಲಾ ಪರೀಕ್ಷೆಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
    ದೂರವಾಣಿ ಸೂಚನೆಯಂತೆ ಲ್ಯಾಬ್‌ಗಳು ಪರೀಕ್ಷೆಗಳನ್ನು ಕೈಗೊಂಡಿದ್ದಲ್ಲಿ ಪ್ರತ್ಯೇಕವಾದ ದಾಖಲಾತಿ ಪುಸ್ತಕಗಳನ್ನು ನಿರ್ವಹಿಸಿ ರೆಫರಲ್ ಮಾಡಿದ ವೈದ್ಯರ ಮಾಹಿತಿ, ಸಮಯ, ದಿನಾಂಕ, ರೋಗಿಯ ಸಂಪೂರ್ಣ ವಿವರ, ಪರೀಕ್ಷೆ ಕೈಗೊಳ್ಳಬೇಕಾದ ಬಗ್ಗೆ ನಮೂದಿಸಬೇಕು. ಹಾಗೆಯೇ ರೆಫರ್ ಮಾಡಿದ ವೈದ್ಯರು ಕೂಡ ಅವರ ಆರೋಗ್ಯ ಸಂಸ್ಥೆಗಳಲ್ಲಿ ಯಾವ ರೋಗಿಗೆ ಯಾವ ಪರೀಕ್ಷೆಗೆ, ಯಾವ ಪ್ರಯೋಗ ಶಾಲೆಗೆ ರೆಫರಲ್ ನೀಡಲಾಗಿದೆ ಎಂಬ ಬಗ್ಗೆ ದಾಖಲಾಗಿ ಪುಸ್ತಕವನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts