More

    ಬಿಹಾರ ಹೊರತುಪಡಿಸಿ ಉಳಿದ ರಾಜ್ಯಗಳೆಲ್ಲ ಪಾಕಿಸ್ತಾನವಲ್ಲ: ಬಿಜೆಪಿ ವಿರುದ್ಧ ಶಿವಸೇನಾ ವಾಗ್ದಾಳಿ!

    ಮುಂಬೈ: ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ತನ್ನ ಪ್ರಣಾಳಿಕೆಯಲ್ಲಿ ಉಚಿತ ಕರೊನಾ ವೈರಸ್​ ವಿತರಿಸುವುದಾಗಿ ಹೇಳಿರುವ ಬಿಜೆಪಿ ವಿರುದ್ಧ ಶಿವಸೇನಾ ಪಕ್ಷ ಹರಿಹಾಯ್ದಿದ್ದು, ಬಿಹಾರ ಹೊರತು ಪಡಿಸಿ ಉಳಿದ ರಾಜ್ಯಗಳೇನೂ ಪಾಕಿಸ್ತಾನವಲ್ಲ. ಪ್ರಣಾಳಿಕೆ ಮೂಲಕ ಬಿಜೆಪು ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

    ಕೋವಿಡ್​-19 ಲಸಿಕೆ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಶಿವಸೇನಾ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಟೀಕಿಸಿದೆ. ಬಿಹಾರವು ಕರೊನಾ ಲಸಿಕೆಯನ್ನು ಪಡೆದುಕೊಳ್ಳಲಿ ಆದರೆ, ದೇಶದ ಉಳಿದ ರಾಜ್ಯಗಳೇನೂ ಪಾಕಿಸ್ತಾನವಲ್ಲ. ಲಸಿಕೆ ವಿಚಾರದಲ್ಲಿ ಎಲ್ಲ ರಾಜ್ಯಗಳಿಗೂ ಸಮಾನ ಹಕ್ಕಿದೆ ಎಂದು ಬಿಜೆಪಿ ನಡೆಯನ್ನು ಟೀಕಿಸಿದೆ.

    ಇದನ್ನೂ ಓದಿ: ದಂತದಿಂದ ಕಾಡಾನೆ ತಿವಿಯುತ್ತಿದ್ದರೂ ಅಸಹಾಯಕನಾಗಿ ಪ್ರಾಣಬಿಟ್ಟ ಆನೆರಂಗ

    ಇಡೀ ದೇಶವೇ ಕರೊನಾ ವೈರಸ್​ನಿಂದ ತತ್ತರಿಸಿರುವಾಗ ಬಿಜೆಪಿ ಲಸಿಕೆ ವಿಚಾರದಲ್ಲಿ ಕೀಳು ಮಟ್ಟದ ರಾಜಕೀಯಕ್ಕೆ ಕೈಹಾಕಿದೆ. ಲಸಿಕೆ ಸಿದ್ಧಪಡಿಸಿದ ಬೆನ್ನಲ್ಲೇ ಯಾವುದೇ ಧರ್ಮ-ಜಾತಿಯನ್ನು ನೋಡದೆ ಎಲ್ಲರಿಗೂ ಸಮಾನವಾಗಿ ಲಸಿಕೆ ಹಂಚುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಆದರೆ, ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರಕ್ಕೆ ಲಸಿಕೆ ನೀಡುವುದಾಗಿ ಭರವಸೆ ನೀಡಿದೆ. ಬಿಜೆಪಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ? ಅವರ ನಾಯಕತ್ವದಲ್ಲಿ ಏನು ತಪ್ಪಾಗಿದೆ? ಅಧಿಕಾರಕ್ಕೆ ಏನು ಬೇಕಾದರೂ ಮಾಡುತ್ತೀರಿ ಎಂದು ಶಿವಸೇನಾ ಕಿಡಿಕಾರಿದೆ.

    ಇಷ್ಟೇ ಅಲ್ಲದೆ ಇತ್ತೀಚೆಗೆ ಬಿಹಾರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಸಾಮಾಜಿಕ ಅಂತರ ಸೇರಿದಂತೆ ಕರೊನಾ ನಿಯಮ ಉಲ್ಲಂಘನೆ ಮಾಡಿದ್ದರ ಬಗ್ಗೆಯೂ ತೀವ್ರ ವಾಗ್ದಾಳಿ ನಡೆಸಿದೆ. (ಏಜೆನ್ಸೀಸ್​)

    ಬಿಎಸ್​ವೈ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಸುಲಭವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts