More

    ಭಾವೈಕ್ಯ ಸಂದೇಶ ಸಾರಿದ ಶಿಶುನಾಳ ಶಿವಯೋಗಿಗಳು

    ಹುಬ್ಬಳ್ಳಿ: ನಗರದ ಶ್ರೀ ಶಿಶುನಾಳ ಶರೀ ಶಿವಯೋಗೀಶ್ವರ ಸೇವಾ ಸಮಿತಿ ವತಿಯಿಂದ ಬಿಡನಾಳ ಕ್ರಾಸ್ ಬಳಿಯ ಶಕ್ತಿನಗರದ ಶ್ರೀ ಮೈತ್ರಿ ವ್ಯಸನಮುಕ್ತಿ ಕೇಂದ್ರದಲ್ಲಿ ಶರೀ ಶಿವಯೋಗಿಗಳ 204ನೇ ಜಯಂತ್ಯುತ್ಸವ ಏರ್ಪಡಿಸಲಾಗಿತ್ತು.


    ಉಪನ್ಯಾಸ ನೀಡಿದ ಪ್ರೊ. ಕೆ.ಎಸ್. ಕೌಜಲಗಿ, ಶಿಶುನಾಳ ಶರೀರು ಹಾಗೂ ಕಳಸದ ಗೋವಿಂದ ಭಟ್ಟರ ಮಧ್ಯದ ಗುರು ಶಿಷ್ಯರ ಸಂಬಂಧ ವಿಶೇಷವಾದದ್ದು. ಶ್ರೇಷ್ಠ ತತ್ವಪದಕಾರರಾದ ಶರೀರು ಭಾವೈಕ್ಯತೆ ಸಂದೇಶ ಸಾರುವ ಹಾಡು ಹೇಳಿದರು. ಸಮಾಜದ ಅಂಕು ಡೊಂಕು ತಿದ್ದುವ ಪ್ರಯತ್ನ ಮಾಡಿದರು ಎಂದರು.


    ಸಮಾಜ ಸೇವಕ ರಮೇಶ ಮಹಾದೇವಪ್ಪನವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರೀರ ಪದಗಳು ಬದುಕನ್ನು ಹಸನು ಮಾಡುವಂತಿವೆ. ಜಾತಿ, ಮತ, ಪಂಥ, ಭಾಷೆಯ ಗಡಿ ಮೀರಿದ ತತ್ವ ಪದಕಾರರು ಎಂದರು.


    ಗಾಯಕ ನಾಗರಾಜ ಜಕ್ಕಮ್ಮನವರ, ಕೊಟ್ರೇಶ ಜಕ್ಕಮ್ಮನವರ ವಾದ್ಯಮೇಳದೊಂದಿಗೆ ಹಾಡುಗಳನ್ನು ಪ್ರಸ್ತುತಪಡಿಸಿದರು.
    ಶ್ರೀಕಾಂತ ಅಂಬೇಕರ, ವೀರಣ್ಣ ಯಲಬಳ್ಳಿ, ಗಂಗಾಧರ ಇಚ್ಚಂಗಿ, ರಾಚಣ್ಣ ಕುಬಸದ, ಅತ್ತಾರ ಶರೀಫ್, ಅಶೋಕ ನಾಡಕರ್ಣಿ, ಕುಮಾರ ಪಾಟೀಲ, ಮಲ್ಲಿಕಾರ್ಜುನ ಕೊಣ್ಣೂರ, ವಿಶ್ವನಾಥ ಶಾಸಿಮಠ, ಇತರರು ಇದ್ದರು.


    ಶರೀ ಶಿವಯೋಗೀಶ್ವರ ಸೇವಾ ಸಮಿತಿ ಅಧ್ಯಕ್ಷ ಚನ್ನಬಸಪ್ಪ ಕೊಣ್ಣೂರ ಪ್ರಾಸ್ತಾವಿಕ ಮಾತನಾಡಿದರು. ಶಾರದಾ ಪಾಟೀಲ ನಿರೂಪಿಸಿದರು. ಸಮಿತಿ ಕಾರ್ಯದರ್ಶಿ ಶಂಕರ ಮಿಸ್ಕಿನ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts