More

    ಶಿರಾಡಿ ಸಾಯಿಲ್ ನೈಲಿಂಗ್ ಬಾಕಿ

    ಮಂಗಳೂರು: ಎರಡು ವರ್ಷ ಹಿಂದೆ ಅತಿವೃಷ್ಟಿಯಿಂದ ಹಲವೆಡೆ ಕುಸಿದು ದುರಸ್ತಿಗೆ ಸವಾಲೆಸೆದಿದ್ದ ಶಿರಾಡಿ ಘಾಟ್‌ನ ಹೆದ್ದಾರಿ ಭಾಗದಲ್ಲಿ 36.51 ಕೋಟಿ ರೂ.ನ ಸುಧಾರಣಾ ಕಾಮಗಾರಿಗೆ ಕೇಂದ್ರ ಭೂಸಾರಿಗೆ ಸಚಿವಾಲಯ ಅಂಗೀಕಾರ ನೀಡಿದೆಯಾದರೂ ಮಳೆಗಾಲದ ನಂತರವಷ್ಟೇ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.

    ಮೊದಲ ಬಾರಿ ಟೆಂಡರ್ ಕರೆದಾಗ ಯಾರೂ ಅರ್ಹರಿರಲಿಲ್ಲ. ಎರಡನೇ ಬಾರಿಗೆ ಕರೆದ ಟೆಂಡರ್ ಅವಧಿ ಮೇ 22ಕ್ಕೆ ದಿನಾಂಕ ಮುಕ್ತಾಯಗೊಂಡಿದ್ದು, ಇಬ್ಬರು ಅರ್ಜಿ ಹಾಕಿದ್ದಾರೆ. ತಾಂತ್ರಿಕ ಬಿಡ್ ಇದಾಗಿದ್ದು, ಮೌಲ್ಯಮಾಪನ ಇನ್ನಷ್ಟೇ ನಡೆಯಬೇಕು. ಒಂದು ವೇಳೆ ಅರ್ಜಿದಾರರು ಅರ್ಹರಿದ್ದರೆ ಹಣಕಾಸು ಬಿಡ್ ತೆರೆಯಲಾಗುತ್ತದೆ. ಅರ್ಹರಿಲ್ಲದಿದ್ದರೆ ಮತ್ತೆ ಟೆಂಡರ್ ಕರೆಯಬೇಕಾಗುತ್ತದೆ. ಹೀಗಾಗಿ ಈಗಾಗಲೇ ವಿಳಂಬಗೊಂಡಿರುವ ಈ ಕಾಮಗಾರಿಯನ್ನು ತ್ವರಿತಗೊಳಿಸಲು ಹಲವು ಸವಾಲುಗಳಿವೆ.

    ಸಾಯಿಲ್ ನೈಲಿಂಗ್: ಹಲವು ಘಾಟ್ ಪ್ರದೇಶಗಳಲ್ಲಿ ಗುಡ್ಡ ಕುಸಿಯದಂತೆ ಪ್ರಸ್ತುತ ಬಳಸಲಾಗುವ ಸಾಯಿಲ್ ನೈಲಿಂಗ್ ವಿಧಾನವನ್ನೇ ಇಲ್ಲೂ ಅನುಸರಿಸಲಾಗುವುದು. ಗುಡ್ಡದ ಇಳಿಜಾರಿಗೆ ಅಭಿಮುಖವಾಗಿ ಉಕ್ಕಿನ ಕಂಬಿಗಳನ್ನು ಬಡಿದು, ಅದಕ್ಕೆ ಉಕ್ಕಿನ ಚಾನೆಲ್ ಅಳವಡಿಸಿ ಇರುವ ಇಳಿಜಾರು ಮತ್ತೆ ಕುಸಿತದಂತೆ ದೃಢಪಡಿಸಲಾಗುವ ವಿಶೇಷ ತಂತ್ರಜ್ಞಾನಗ ಕಾಮಗಾರಿ ಸಾಯಿಲ್ ನೈಲಿಂಗ್.
    ಶಿರಾಡಿ ಘಾಟಿಯಲ್ಲಿ ಅಡ್ಡಹೊಳೆಯಿಂದ ಹೆಗ್ಗದ್ದೆವರೆಗೆ ಗುಡ್ಡದ ಕಡೆ 2 ಹಾಗೂ ಕೆಂಪುಹೊಳೆ ಕಣಿವೆ ಕಡೆಗೆ 15 ಜಾಗಗಳಲ್ಲಿ ವಿಪರೀತ ಕುಸಿತವಾಗಿದ್ದು, ಅದನ್ನು ಶಾಶ್ವತವಾಗಿ ದುರಸ್ತಿ ಮಾಡಬೇಕಿದೆ. ಕಾಮಗಾರಿ ಮುಗಿಸಲು 18 ತಿಂಗಳು ಕೆಲಸದ ಅವಧಿ ಇರುತ್ತದೆ.

    ನೋಂದಣಿಯಾದವರಿಲ್ಲ
    ಸಾಯಿಲ್ ನೈಲಿಂಗ್ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡ ಗುತ್ತಿಗೆದಾರರಿಲ್ಲ. ನೋಂದಣಿಯಾದವರಿಗೆ ಈ ಕೆಲಸದ ಅನುಭವವಿಲ್ಲ. ಈ ತಾಂತ್ರಿಕ ಕಾರಣದಿಂದಾಗಿ ಟೆಂಡರ್‌ಗಳಿಗೆ ಅರ್ಜಿ ಹಾಕುವವರ ಸಂಖ್ಯೆ ತೀರಾ ಕಡಿಮೆ. ಹೀಗಾಗಿ ಎರಡನೇ ಬಾರಿಯ ಟೆಂಡರ್‌ನಲ್ಲೂ ಅರ್ಹರು ಸಿಗದಿದ್ದರೆ ಜಾಯಿಂಟ್ ವೆಂಚರ್ ಮಾಡುವ ಬಗ್ಗೆ ಅನುಮತಿ ನೀಡಲಾಗುವುದು ಎಂದು ಕೇಂದ್ರ ಸಚಿವಾಲಯ ರಾಜ್ಯ ಪಿಡಬ್ಲುಡಿ ಇಲಾಖೆಗೆ ತಿಳಿಸಿದೆ. ಅದರಂತೆ ನೋಂದಣಿ ಮಾಡಿಕೊಂಡ ಗುತ್ತಿಗೆದಾರರು ಸಾಯಿಲ್ ನೈಲಿಂಗ್ ಕೆಲಸಗಾರರೊಂದಿಗೆ ಜಾಯಿಂಟ್ ವೆಂಚರ್ ಮಾಡಿಕೊಂಡು ಕೆಲಸ ಮಾಡಬಹುದು.

    ಕಳೆದ ಮಳೆಗಾಲದಲ್ಲಿ ಶಿರಾಡಿಯಲ್ಲಿ ಸಮಸ್ಯೆಯಾಗಿಲ್ಲ, ಈ ಬಾರಿಯೂ ಏನೂ ಆಗಲಿಕ್ಕಿಲ್ಲ ಎಂಬ ಭರವಸೆಯಲ್ಲಿದ್ದೇವೆ. ಮಳೆಗಾಲ ಮುಗಿದ ಬಳಿಕ ವರ್ಕ್ ಆರ್ಡರ್ ನೀಡಿ ಕೆಲಸ ಮಾಡಿಸಲಾಗುವುದು.
    – ಮುನಿರಾಜು, ಎಇಇ, ಪಿಡಬ್ಲೂೃಡಿ ಸಕಲೇಶಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts