More

    ಕುಂವೀ 70, ಕಥೆ 50 ಕೃತಿ ಅ.1ಕ್ಕೆ ಬಿಡುಗಡೆ

    ಶಿವಮೊಗ್ಗ:ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಅ.1ರ ಸಂಜೆ 5ಕ್ಕೆ ಕುಂವೀ 70, ಕಥೆ 50 ಕೃತಿ ಬಿಡುಗಡೆ ಹಾಗೂ ಕುಂ.ವೀರಭದ್ರಪ್ಪ ಜನ್ಮದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸುವ್ವಿ ಪಬ್ಲಿಕೇಷನ್ಸ್‌ನ ಪ್ರಕಾಶಕ ಬಿ.ಎನ್.ಸುನೀಲ್‌ಕುಮಾರ್, ಸಾಹಿತಿ ಡಾ.ನಾ.ಡಿಸೋಜ ಕೃತಿ ಬಿಡುಗಡೆಗೊಳಿಸಲಿದ್ದು, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದರು.
    ಕೃತಿ ಕುರಿತು ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಮಾತನಾಡಲಿದ್ದಾರೆ. ಕೇಂದ್ರ ಬಾಲ ಸಾಹಿತ್ಯ ಅಕಾಡೆಮಿ ಪುರಸ್ಕೃತ ಡಾ.ಹಾಫೀಜ್ ಕರ್ನಾಟಕಿ, ಜಿಲ್ಲಾ ಕಸಪಾ ಅಧ್ಯಕ್ಷ ಡಿ.ಮಂಜುನಾಥ್, ಕೃತಿ ಲೋಕಾರ್ಪಣೆ ಸಮಿತಿ ಅಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಬಳ್ಳಾರಿ ಜ್ಞಾನಾಮೃತ ವಸತಿ ಶಿಕ್ಷಣ ಸಂಸ್ಥೆ ಗೌರವಾಧ್ಯಕ್ಷ ಎಂ.ಜಿ.ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
    ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಕುಂ.ವೀರಭದ್ರಪ್ಪ ನಮ್ಮ ನಡುವಿನ ಅತ್ಯುತ್ತಮ ಕಥೆಗಾರ. ಸಮಾಜದ ತಲ್ಲಣಗಳಿಗೆ ಸ್ಪಂದಿಸುವ ವಸ್ತುಗಳನ್ನೇ ಆಯ್ದುಕೊಂಡು ಸಾಹಿತ್ಯ ರಚನೆ ಮಾಡಿದ ಅವರು ಅ.1ಕ್ಕೆ 70ನೇ ವರ್ಷಕ್ಕೆ ಕಾಲಿರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರ ಜನ್ಮದಿನದ ಆಚರಣೆಯೊಂದಿಗೆ. ಅತ್ಯುತ್ತಮವಾದ 50 ಕಥೆಗಳನ್ನು ಆಯ್ದು ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತಿದೆ ಎಂದರು.
    ಕೃತಿ ಲೋಕಾರ್ಪಣೆ ಸಮಿತಿ ಅಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಬಳ್ಳಾರಿ ಜ್ಞಾನಾಮೃತ ವಸತಿ ಶಿಕ್ಷಣ ಸಂಸ್ಥೆ ಗೌರವಾಧ್ಯಕ್ಷ ಎಂ.ಜಿ.ಗೌಡ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts