More

    ಸೂಕ್ತ ಮಾರ್ಗದರ್ಶನ ಇಲ್ಲದಿದ್ದರೆ ಜೈಲೇ ಗತಿ

    ಶಿವಮೊಗ್ಗ: ಹಾದಿ ತಪ್ಪುವ ಮುಸ್ಲಿಂ ಯುವಕರಿಗೆ ಆ ಸಮಾಜದ ರಾಷ್ಟ್ರಭಕ್ತರು ಸೂಕ್ತ ಮಾರ್ಗದರ್ಶನ ಮಾಡದೆೇ ಇದ್ದರೆ ಆ ಯುವಕರು ಅನಿವಾರ್ಯವಾಗಿ ಜೈಲು ಸೇರಬೇಕಾದ ಸನ್ನಿವೇಶ ಸೃಷ್ಠಿಯಾಗುತ್ತದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
    ಶಿವಮೊಗ್ಗದಲ್ಲಿ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕೆ ಮೇಲೆ ಇಬ್ಬರನ್ನು ಬಂಧಿಸುವ ಮೂಲಕ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಮುಂದೆ ಉಂಟಾಗಬಹುದಾಗಿದ್ದ ಅನಾಹುತ ತಡೆದಿದ್ದಾರೆ. ಈಗಲಾದರೂ ಮುಸ್ಲಿಂ ಸಮಾಜದ ಹಿರಿಯರು ಯುವಕರಿಗೆ ಬುದ್ದಿವಾದ ಹೇಳಬೇಕೆಂದರು.
    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಡಿಪಿಐ, ಪಿಎಫ್‌ಐ ಮುಂತಾದ ಸಂಘಟನೆಗಳು ರಾಷ್ಟ್ರದ್ರೋಹದ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿವೆ. ಕೆಲ ಮುಸ್ಲಿಂ ಯುವಕರು ಇದರಿಂದ ಪ್ರಚೋದನೆಗೆ ಒಳಗಾಗಿ ಉಗ್ರ ಸಂಘಟನೆಗೆ ಸೇರುತ್ತಿದ್ದಾರೆ. ಇದಕ್ಕೆಂದು ವಿದೇಶದಿಂದ ಹಣ ಹರಿದು ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಕಾಂಗ್ರೆಸ್‌ನವರು ಖಂಡಿಸಲ್ಲ
    ಎನ್‌ಐಎ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ದೇಶದ ವಿವಿಧೆಡೆ ಅನೇಕರನ್ನು ಬಂಧಿಸಿದ್ದಾರೆ. ಆದರೂ ಕಾಂಗ್ರೆಸ್ ನಾಯಕರು ಯಾವುದೇ ಹೇಳಿಕೆ ನೀಡಿಲ್ಲ. ಇಂತಹ ಕೃತ್ಯದಲ್ಲಿ ಪಾಲ್ಗೊಳ್ಳಬಾರದು ಎಂದು ಹೇಳುವ ಧೈರ್ಯವೂ ಕಾಂಗ್ರೆಸ್‌ನವರಿಗೆ ಇಲ್ಲ ಎಂದು ಕೆ.ಎಸ್.ಈಶ್ವರಪ್ಪ ಟೀಕಿಸಿದರು.
    ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಲಪಾಡ್ ತಪ್ಪು ಕೆಲಸ ಮಾಡುವವರ ಬೆಂಬಲಕ್ಕೆ ನಿಂತಿದ್ದಾರೆ. ನಿರುದ್ಯೋಗದಿಂದ ಬಾಂಬ್ ತಯಾರು ಮಾಡುತ್ತಾರೆ ಎಂದು ಹೇಳುವ ಮೂಲಕ ದುಷ್ಕೃತ್ಯದಲ್ಲಿ ಭಾಗಿಯಾದ ಸಂಘಟನೆಗಳು, ಯುವಕರಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
    ನಲಪಾಡ್ ಹೇಳಿಕೆಯನ್ನು ವಿರೋಧಿಸುವ ಬದಲು ಕಾಂಗ್ರೆಸ್ ನಾಯಕರು, ರಾಷ್ಟ್ರಭಕ್ತರ ಸಂಘಟನೆಯಾದ ಶ್ರೀರಾಮ ಸೇನೆಯನ್ನು ನಿಷೇಧಿಸಿ ಎನ್ನುತ್ತಿದ್ದಾರೆ. ಪಿಎಫ್‌ಐ ನಿಷೇಧಿಸಿ ಎಂಬ ಮಾತು ಇವರ ಬಾಯಿಂದ ಬರುವುದೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts