More

    ಮೇಯರ್ ಗೌನ್ ಧರಿಸುವ ಜ್ಞಾನೇಶ್ವರ್‌ಆಸೆಗೆ ತಣ್ಣೀರು

    ಶಿವಮೊಗ್ಗ: ನಗರಪಾಲಿಕೆಯ ಮೇಯರ್ ಮೀಸಲು ಪ್ರಶ್ನೆ ಮಾಡಿ ಹೈಕೋರ್ಟ್ ಮೊರೆ ಹೋಗಿರುವ ಅರ್ಜಿಗೆ ಸಂಬಂಧಿಸಿದ ತೀರ್ಪು ಹೊರಬೀಳುವ ಮುನ್ನವೇ ಮೇಯರ್ ಉಪಮೇಯರ್ ಮೀಸಲು ಬದಲಾವಣೆ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
    ಮೇಯರ್ ಮೀಸಲು ಪ್ರಶ್ನೆ ಮಾಡಿ ಸದಸ್ಯರೊಬ್ಬರು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದು, ಈ ತೀರ್ಪು ಬರುವ ಮುನ್ನವೇ ರಾಜ್ಯ ಸರ್ಕಾರ ಈ ಮೊದಲು ಪ್ರಕಟಿಸಿದ್ದ ಮೀಸಲು ಬದಲಾವಣೆ ಮಾಡಿ ಹೊಸ ಮೀಸಲು ಪ್ರಕಟಿಸಿದೆ. ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಹಾಗೂ ಉಪ ಮೇಯರ್‌ಸ್ಥಾನವನ್ನು ಹಿಂದುಳಿದ ವರ್ಗ(ಮ)ಕ್ಕೆ ಮೀಸಲಿರಿಸಿದೆ.
    ಸರ್ಕಾರ ಪ್ರಕಟ ಮಾಡಿರುವ ಹೊಸ ಮೀಸಲನ್ನು ಹೈಕೋರ್ಟ್ ಪರಿಗಣಿಸದಿದ್ದರೆ ಮೀಸಲು ನಿಗದಿ ಸಮಸ್ಯೆ ಜಟಿಲವಾಗಿ ಸುನೀತಾ ಅಣ್ಣಪ್ಪ ಅವರಿಗೆ ಈಗ ಸಿಕ್ಕರುವ ಬೋನಸ್ ಅವಧಿ ಮತ್ತಷ್ಟು ದಿನ ವಿಸ್ತರಣೆಯಾಗಲಿದೆ.
    ಈ ಹಿಂದೆ ಮೇಯರ್ ಸ್ಥಾನವನ್ನು ಒಬಿಸಿಗೆ ಮೀಸಲಿರಿಸಲಾಗಿತ್ತು. ಈ ಮೀಸಲು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ವಿದ್ಯಾನಗರದ ನಗರ ಪಾಲಿಕೆ ಸದಸ್ಯ ನಾಗರಾಜ್ ಅವರು ಪರಿಶಿಷ್ಟ ಜಾತಿಗೆ ನಿಗದಿಪಡಿಸಬೇಕು ಎಂದು ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ಸೆ.30ರಂದು ವಿಚಾರಣೆಗೆ ಬರಲಿದ್ದು, ಹೈಕೋರ್ಟ್ ತೀರ್ಪು ನೀಡುವ ಮುನ್ನವೇ ಹೊಸ ಮೀಸಲು ಪ್ರಕಟಿಸಿದೆ. ಹೀಗಾಗಿ ಕೊನೆಯ ಅವಧಿಗೆ ಮೇಯರ್ ಆಗುವ ಜ್ಞಾನೇಶ್ವರ್ ಕನಸು ಸರ್ಕಾರ ಪ್ರಕಟಿಸಿರುವ ಹೊಸ ಮೀಸಲಿನಿಂದ ಭಗ್ನವಾಗಿದೆ.ಧೀರರಾಜ್ ಶಿವಕುಮಾರ್‌ಗೆ ಅವಕಾಶ
    ಸರ್ಕಾರ ಪ್ರಕಟಿಸಿರುವ ಹೊಸ ಮೀಸಲಾತಿಯ ಅಧಿಸೂಚನೆಯನ್ನೇ ಹೈಕೋರ್ಟ್ ಮಾನ್ಯ ಮಾಡಿದಲ್ಲಿ ಧೀರರಾಜ್ ಹೊನ್ನವಿಲೆ ಮತ್ತು ಶಿವಕುಮಾರ್ ಅವರಲ್ಲಿ ಒಬ್ಬರಿಗೆ ಮೇಯರ್ ಆಗುವ ಅವಕಾಶ ಒದಗಿಬರಲಿದೆ. ಆರು ಸದಸ್ಯರು ಉಪಮೇಯರ್ ಸ್ಥಾನಕ್ಕೆ ಅರ್ಹರಾಗುತ್ತಾರೆ.
    ಅವಕಾಶ ವಂಚಿತ
    ಈ ಹಿಂದಿನ ಮೀಸಲಾತಿಯಲ್ಲಿ ಎಸ್. ಜ್ಞಾನೇಶ್ವರ್‌ಗೆ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶವಿತ್ತು. ಅವರನ್ನು ಮೇಯರ್ ಮಾಡುವ ಉದ್ದೇಶದಿಂದಲೇ ಅನುಕೂಲಕರ ಮೀಸಲು ಬರುವಂತೆ ನೋಡಿಕೊಳ್ಳಲಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಈಗ ಮೀಸಲು ಬದಲಾವಣೆಯಿಂದ ಮೇಯರ್ ಆಗುವ ಅವಕಾಶ ಕಳೆದುಕೊಂಡಿದ್ದಾರೆ. ಇನ್ನೊಂದೆಡೆ ಹೈಕೋರ್ಟ ಅಂತಿಮ ತೀರ್ಪು ಪ್ರಕಟಿಸುವ ಮುನ್ನವೇ ರಾಜ್ಯ ಸರ್ಕಾರ ಹೊಸ ಮೀಸಲಾತಿ ಘೋಷಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಪರಿಶಿಷ್ಟ ಜಾತಿ ಮೀಸಲಾತಿಗೆ ಸೇರಿದವರು ಬಿಜೆಪಿಯಲ್ಲಿ ಇಬ್ಬರೇ ಸದಸ್ಯರಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ಅಭ್ಯರ್ಥಿ ಆಯ್ಕೆ ಕಠಿಣವಾಗುವುದಿಲ್ಲ. ಆದರೆ ಮೇಯರ್ ಸ್ಥಾನದ ಇತರೆ ಆಕಾಂಕ್ಷಿತರು ಮತ್ತೊಮ್ಮೆ ಕೋರ್ಟ ಮೊರೆ ಹೋಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts