More

    ಶಿವಮೊಗ್ಗದಲ್ಲಿ ವಾರಾಂತ್ಯವೂ ಕರೊನಾ ಸ್ಫೋಟ

    ಶಿವಮೊಗ್ಗ: ಜಿಲ್ಲೆಯಲ್ಲಿ ವಾರಾಂತ್ಯದಲ್ಲೂ ಕರೊನಾ ಸ್ಫೋಟಗೊಂಡಿದ್ದು ಸತತ ಎರಡನೇ ದಿನವೂ ತ್ರಿಶತಕದ ಗಡಿ ದಾಟಿದೆ. ಭಾನುವಾರ 77 ವಿದ್ಯಾರ್ಥಿಗಳೂ ಸೇರಿ 339 ಜನರಲ್ಲಿ ವೈರಸ್ ಪತ್ತೆಯಾಗಿದ್ದು 118 ಮಂದಿ ಸೋಂಕು ಮುಕ್ತರಾದರು.
    ಶಿವಮೊಗ್ಗ ತಾಲೂಕಿನಲ್ಲಿ 120 ಮತ್ತು ಭದ್ರಾವತಿ ತಾಲೂಕಿನಲ್ಲಿ 105 ಜನರಲ್ಲಿ ಕಾಣಿಸಿಕೊಂಡಿದೆ. ಉಳಿದಂತೆ ಸಾಗರದಲ್ಲಿ 48, ತೀರ್ಥಹಳ್ಳಿಯಲ್ಲಿ 23, ಹೊಸನಗರದಲ್ಲಿ 24, ಸೊರಬದಲ್ಲಿ 8, ಶಿಕಾರಿಪುರದಲ್ಲಿ 4 ಮತ್ತು ಹೊರ ಜಿಲ್ಲೆಯ 7 ಮಂದಿಗೆ ಸೋಂಕು ದೃಢಪಟ್ಟಿದೆ. 1,089 ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಿದ್ದು ಬಾಕಿ ಇದ್ದ ವರದಿ ಸೇರಿ 2,539 ನೆಗಟಿವ್ ಬಂದಿದೆ. ಇದರೊಂದಿಗೆ ಸಕ್ರಿಯ ಪ್ರಕರಣ 1,556ಕ್ಕೆ ಏರಿಕೆಯಾಯಿತು. ಕರೊನಾ ಆಸ್ಪತ್ರೆಯಲ್ಲಿ 62, ಖಾಸಗಿ ಆಸ್ಪತ್ರೆಯಲ್ಲಿ 36, ಹೋಮ್ ಐಸೋಲೇಷನ್‌ನಲ್ಲಿ 1,374, ಸಮುದಾಯ ಕೇಂದ್ರಗಳಲ್ಲಿ 30 ಮತ್ತು ಟ್ರಾಯೇಜ್ ಸೆಂಟರ್‌ನಲ್ಲಿ 54 ಸೋಂಕಿತರಿದ್ದಾರೆ. 339 ಜನರಲ್ಲಿ ಸೋಂಕಿತರ ಪೈಕಿ 180 ಮಂದಿ ಪ್ರಾಥಮಿಕ ಸಂಪರ್ಕಕ್ಕೆ ಬಂದರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts