More

    ಗುಣಾತ್ಮಕ ಜೀವನಕ್ಕೆ ಸಂಶೋಧನೆಗಳ ಪಾತ್ರ ದೊಡ್ಡದು: ಡಾ. ಆನಂದ ಹಲಗೇರಿ

    ಶಿವಮೊಗ್ಗ: ಮಾನವ ಗುಣಾತ್ಮಕ ಜೀವನ ನಡೆಸುವಲ್ಲಿ ವೈಜ್ಞಾನಿಕ ಹಾಗೂ ತಾಂತ್ರಿಕ ಸಂಶೋಧನೆಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಬೆಂಗಳೂರಿನ ಪೂರ್ಣಪ್ರಜ್ಞ ವೈಜ್ಞಾನಿಕ ಸಂಶೋಧನಾ ವಿವಿಯ ಮುಖ್ಯಸ್ಥ ಡಾ. ಆನಂದ ಬಿ ಹಲಗೇರಿ ಹೇಳಿದರು.
    ಪ್ರೇರಣಾ ಶಿಕ್ಷಣ ಸಂಸ್ಥೆಯ ಐಟಿಎಂ ಮತ್ತು ಎಐಸಿಟಿಇ ಸಹಯೋಗದಲ್ಲಿ ಸೋಮವಾರ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಿಂದ ಆರು ದಿನಗಳ ಅಡ್ವಾನ್ಸ್ಡ್ ರಿಸರ್ಚ್ ಇನ್ ನ್ಯಾನೋ ಮೆಟೀರಿಯಲ್ಸ್ ಆ್ಯಂಡ್ ನ್ಯಾನೋ ಕಾಂಪೋಸಿಟ್ ಕುರಿತ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ದಿನನಿತ್ಯ ಹಲವು ವಸ್ತುಗಳ ಸದ್ಭಳಕೆ ಮತ್ತು ಅವುಗಳು ಸುಲಭವಾಗಿ ಕೈಗೆಟುಕುವಂತೆ ಮಾಡುವಲ್ಲಿ ನ್ಯಾನೋ ಸೈನ್ಸ್ ಪ್ರಮುಖ ಜವಾಬ್ದಾರಿ ನಿಭಾಯಿಸುವಲ್ಲಿ ಕಾರ್ಯೋನ್ಮುಖವಾಗಿದೆ ಎಂದರು.
    ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮಾನವ ಸಂಪನ್ಮೂಲ ತೊಡಗಿಸಿಕೊಳ್ಳುವುದು ಅತಿ ಮುಖ್ಯ. ಸಂತೃಪ್ತಿಯಿಂದ ಹಸನ್ಮುಖಿಯಾಗಿ ಜೀವನ ನಡೆಸಲು ಅಗತ್ಯವಿರುವ ಸಾಮಗ್ರಿಗಳು ಕೈಗೆಟುಕುವ ದರದಲ್ಲಿ ದೊರೆಯುವುದು ಅತ್ಯವಶ್ಯಕವಾಗಿದೆ. ಈ ಅವಶ್ಯಕತೆಯನ್ನು ಕಾರ್ಯರೂಪಕ್ಕೆ ತರಲು ನ್ಯಾನೋ ಮೆಟೀರಿಯಲ್ಸ್ ಮತ್ತು ನ್ಯಾನೋ ಕಾಂಪೋಸಿಟ್ ಕ್ಷೇತ್ರವು ನೂರಾರು ಸಂಶೋಧನೆಗಳನ್ನು ನಡೆಸುತ್ತಿದೆ. ಕೈಗಾರಿಕೆ ಹಾಗೂ ಸಂಶೋಧನಾ ಕ್ಷೇತ್ರಗಳು ಒಟ್ಟಿಗೆ ಕಾರ್ಯನಿರ್ವಹಿಸುವ ಮೂಲಕ ಉತ್ಕೃಷ್ಟ ಮಾನವ ಸಮಾಜ ನಿರ್ಮಿಸುವಲ್ಲಿ ಶ್ರಮಿಸಬೇಕಿದೆ ಎಂದು ಹೇಳಿದರು.
    ಕಾರ್ಯಕ್ರಮದ ಮುಖ್ಯ ಸಂಚಾಲಕ, ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ. ಎಲ್.ಗಿರೀಶ್, ಪಿಇಎಸ್ ಮುಖ್ಯ ಆಡಳಿತಾಧಿಕಾರಿ ಎಸ್.ವೈ.ಉಮಾದೇವಿ, ಪ್ರಾಚಾರ್ಯ ಡಾ. ಎಂ.ವಿ.ಚೈತನ್ಯಕುಮಾರ್, ಟ್ರಸ್ಟ್‌ನ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಡಾ. ಆರ್.ನಾಗರಾಜ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ವೈ.ಎಚ್.ಬಸವರಾಜಪ್ಪ, ಪ್ರಾಧ್ಯಾಪಕರಾದ ಡಾ. ಅಶೋಕ್ ಬಣಗಾರ್, ಸಿ.ಪಿ.ಅಜೇಯ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts