More

    ಶಿವಮೊಗ್ಗ ಪೈಲ್ವಾನ್ ಕಿರಣಗೆ ಬೆಳ್ಳಿ ಗದೆ

    ಹಿರೇಕೆರೂರ: ದುರ್ಗಾದೇವಿ ಜಾತ್ರೆ ಅಂಗವಾಗಿ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಯ ಶನಿವಾರದ ಅಂತಿಮ ಪಂದ್ಯದಲ್ಲಿ ಶಿವಮೊಗ್ಗದ ಪೈಲ್ವಾನ್ ಕಿರಣ ವಿಜೇತರಾಗುವ ಮೂಲಕ ಬೆಳ್ಳಿ ಗದೆ ಪಡೆದರು.

    ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಪೈಲ್ವಾನರು ಬಗೆಬಗೆಯ ಪಟ್ಟುಗಳ ಮೂಲಕ ಸಾಮರ್ಥ್ಯ ಪ್ರದರ್ಶಿಸಿದರು. ಅನೇಕ ಖ್ಯಾತ ಪೈಲ್ವಾನರ ಪಂದ್ಯಗಳಲ್ಲಿ ರೋಚಕ ಹಣಾಹಣಿ ಕಂಡು ಬಂತು. ಕುಸ್ತಿ ನೋಡಲು ಸಾವಿರಾರು ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು.

    ಧಾರವಾಡ, ಶಿವಮೊಗ್ಗ, ಶಿಕಾರಿಪುರ, ಮಾಸೂರು, ರಾಣೆಬೆನ್ನೂರ, ಹಾನಗಲ್, ಹಾವೇರಿ ಮತ್ತು ಅಕ್ಕ ಪಕ್ಕದ ಜಿಲ್ಲೆಗಳಿಂದಲ್ಲದೆ, ಹೊರ ರಾಜ್ಯಗಳಿಂದಲೂ ಕುಸ್ತಿ ಪಟುಗಳು ಆಗಮಿಸಿ ಪ್ರಶಸ್ತಿಗಾಗಿ ಸೆಣಸಾಡಿದರು.

    ಶನಿವಾರದ ಕೊನೆ ಪಂದ್ಯದಲ್ಲಿ ಶಿವಮೊಗ್ಗದ ಕಿರಣ ಹಾಗೂ ಕಲಬುರಗಿ ಜಿಲ್ಲೆಯ ಶಹಾಪುರದ ಸಿದ್ದಣ್ಣ ಇವರ ನಡುವೆ ತೀವ್ರ ಸೆಣಸಾಟ ನಡೆದು ಕೊನೆಗೆ ಶಿವಮೊಗ್ಗದ ಕಿರಣ ಜಯಶಾಲಿಯಾದರು. ಇವರಿಗೆ ದುರ್ಗಾದೇವಿ ಜಾತ್ರಾ ವ್ಯವಸ್ಥಾಪಕ ಸಮಿತಿಯಿಂದ ಬೆಳ್ಳಿ ಗದೆ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು.

    ಜಾತ್ರಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ದುರ್ಗಪ್ಪ ನೀರಲಗಿ, ಪದಾಧಿಕಾರಿಗಳಾದ ಬಸವರಾಜ ಕಟ್ಟಿಮನಿ, ಲಿಂಗರಾಜ ನಾಯ್ಕರ್, ರವಿ ಉಣಕಲ್, ಚಂದ್ರು ಮಾರವಳ್ಳಿ, ಶಂಭು ಹಂಸಭಾವಿ, ಬೀರೇಶ ಹಾರ್ನಳ್ಳಿ, ರಾಜು ಮಡಿವಾಳರ, ಪರಮೇಶ ಕರಿಗಾರ, ಕಿಟ್ಟಿ ಬಾಗಲಕೋಟಿ, ರವಿ ನಾಯ್ಕರ್, ಚಂದ್ರು ಉಣಕಲ್, ಚಂದ್ರು ಮಾರವಳ್ಳಿ, ಪ್ರಶಾಂತ ತಿರಕಪ್ಪನವರ, ಮಹೇಶ ನಾಡಿಗೇರ, ಶಂಬು ಕರ್ಜಗಿ, ಸಿದ್ದು ತಂಬಾಕದ ಹಾಗೂ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts