More

    ಅಭಿವೃದ್ಧಿ ನೆಪದಲ್ಲಿ ಕರಗುತ್ತಿದೆ ಕೃಷಿ ಭೂಮಿ: ಟಿ.ಎಸ್.ನಾಗಾಭರಣ ಆತಂಕ

    ಶಿವಮೊಗ್ಗ: ಆದಾಯದ ಮೂಲವಾಗಿದ್ದ ಕೃಷಿ ಭೂಮಿಯನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳ ನೆಪದಲ್ಲಿ ಕಳೆದುಕೊಳ್ಳುತ್ತಿದ್ದೇವೆ. ಕೃಷಿ ಭೂಮಿಗೆ ಪರ್ಯಾಯವಾಗಿ ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಅನ್ನ ನೀಡುವ ಭೂಮಿ ಕರಗಿ ಹೋಗಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಆತಂಕ ವ್ಯಕ್ತಪಡಿಸಿದರು.
    ನವುಲೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಡಾ. ಎಂ.ಎಸ್.ಸ್ವಾಮಿನಾಥನ್ ಸಭಾಂಗಣದಲ್ಲಿ ಗುರುವಾರ 14 ಸರಣಿ ಪುಸಕ್ತಗಳ ಬಿಡುಗಡೆ ಸಮಾರಂಭ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರಸ್ತೆ ಸೇರಿ ವಿವಿಧ ಕಾಮಗಾರಿಗಳಿಗೆ ರೈತರ ಜಮೀನನ್ನು ಸರ್ಕಾರ ಪಡೆದುಕೊಳ್ಳುತ್ತಿದೆ. ಆ ಜಮೀನಿಗೆ ಪರ್ಯಾಯವಾಗಿ ಬೇರೆ ಜಮೀನು ನೀಡುವಂತೆ ಪಟ್ಟು ಹಿಡಿದಾಗ ಮಾತ್ರ ಅನ್ನದಾತ ಬದುಕಲು ಸಾಧ್ಯ ಎಂದರು.
    ರಸ್ತೆ, ಕಟ್ಟಡ ನಿರ್ಮಾಣ ಮಾಡುವುದೇ ಅಭಿವೃದ್ಧಿಯಲ್ಲ. ವೈಜ್ಞಾನಿಕವಾಗಿ ಕೃಷಿ ಮಾಡುವುದೂ ಅಭಿವೃದ್ಧಿಯ ಒಂದು ಭಾಗವಾಗಲಿದೆ. ಪಾರಂಪರಿಕ ಬದುಕಿಗೆ ಬೇಕಾದ ಹತ್ತು ಹಲವು ಕೃಷಿ ಪದ್ಧತಿಗಳು ನಮ್ಮಲ್ಲಿವೆ. ಆದರೆ ಇಂದಿಗೂ ಗುಲಾಮಿ ಸ್ಥಿತಿಯಲ್ಲೇ ಬದುಕುತ್ತಿರುವ ನಾವು ವಿನೂತನ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳದೇ ವಂಶ ಪಾರಂಪರ್ಯವಾಗಿ ಮಾಡಿಕೊಂಡು ಬಂದ ಪದ್ಧತಿಯನ್ನೇ ಅನುಸರಿಸುತ್ತಿದ್ದೇವೆ. ಇದು ಕೃಷಿ ಕ್ಷೇತ್ರದಲ್ಲಿ ಹಿನ್ನಡೆಗೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲೂ ಕೃಷಿ ಬದುಕು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹಾಸುಹೊಕ್ಕಾಗಿರುತ್ತದೆ. ಭವಿಷ್ಯದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೊಸ ಹೊಸ ಆವಿಷ್ಕಾರ, ಚಿಂತನೆಗಳನ್ನು ಮಾಡಬೇಕಿದೆ ಎಂದು ಹೇಳಿದರು.
    ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಡಾ. ಜಯಲಕ್ಷ್ಮೀ ನಾರಾಯಣ ಹೆಗಡೆ ಪ್ರಸ್ತಾವಿಕ ಮಾತನಾಡಿದರು. 14 ಪುಸ್ತಕಗಳ ಲೇಖಕರನ್ನು ಸನ್ಮಾನಿಸಲಾಯಿತು. ವಿವಿಯ ಆಡಳಿತ ಮಂಡಳಿ ಸದಸ್ಯರಾದ ಕೆ.ನಾಗರಾಜ್, ವೀರಭದ್ರಪ್ಪ ಪೂಜಾರಿ, ವಿವಿಯ ಶಿಕ್ಷಣ ನಿರ್ದೇಶಕ ಡಾ. ಎಂ.ಹನುಮಂತಪ್ಪ, ಕುಲಸಚಿವ ಡಾ. ಆರ್.ಲೋಕೇಶ್, ಸಂಶೋಧನಾ ನಿರ್ದೇಶಕ ಡಾ. ಬಿ.ಹೇಮ್ಲಾ ನಾಯಕ್, ಗ್ರಂಥಪಾಲಕ ಡಾ. ಡಿ.ತಿಪ್ಪೇಶ, ಡೀನ್(ಕೃಷಿ) ಡಾ. ಬಿ.ಎಂ.ದುಷ್ಯಂತ್‌ಕುಮಾರ್, ಇರುವಕ್ಕಿ ಆವರಣದ ವಿಶೇಷಾಧಿಕಾರಿ ಡಾ. ಕೆ.ಸಿ.ಶಶಿಧರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts