More

    ಶಿವಮೊಗ್ಗ ಘಟನೆ:ನ್ಯಾಯಾಂಗ ತನಿಖೆಗೆ ಬಿಜೆಪಿ ಆಗ್ರಹ

    ಬೆಂಗಳೂರು:
    ವ್ಯವಸ್ಥಿತ ಮತ್ತು ದುರುದ್ದೇಶದಿಂದ ನಡೆದಿರುವ ಶಿವಮೊಗ್ಗ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಮಾಡುವಂತೆ ಮಾಜಿ ಸಚಿವ ಸಿ.ಟಿ.ರವಿ ಆಗ್ರಹಿಸಿದ್ದಾರೆ.
    ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತಾಂಧ ಶಕ್ತಿಗಳು ಶಿವಮೊಗ್ಗ ಮತ್ತು ಕೋಲಾರ ಘಟನೆಗಳ ಮೂಲಕ ಟೆಸ್ಟಿಂಗ್ ಡೋಸ್ ನೀಡಿದ್ದಾರೆ. ಈಗಲೂ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ ಇದ್ದರೆ ರಾಜ್ಯಕ್ಕೆ ಮುಂದೆ ದೊಡ್ಡ ಗಂಡಾಂತರ ಕಾದಿದೆ ಎಂದು ಎಚ್ಚರಿಕೆ ನೀಡಿದರು.
    ರಾಜ್ಯದಲ್ಲಿ 140 ದಿನಗಳಲ್ಲಿ ಈ ಸರ್ಕಾರ ಹೇಳಿಕೊಳ್ಳುವಂತ ಕೆಲಸ ಮಾಡಲಿಲ್ಲ. ಬದಲಿಗೆ ಇಂಥಹ ನಕರಾತ್ಮಕ ವಿಷಯಗಳಿಂದಲೇ ಸುದ್ದಿ ಮಾಡುತ್ತಿದೆ. ಕೋಮುವಾದಿ ಶಕ್ತಿಗಳು ಸಾರ್ವಜನಿಕವಾಗಿ ವಜೃಂಬಿಸಲು ಕುಮ್ಮಕ್ಕು ನೀಡಿರುವುದೇ ಈ ಸರ್ಕಾರದ ಸಾಧನೆ ಎಂದರು.
    ಅನಗತ್ಯವಾಗಿ ಹಿಂದೂ ಸಂಘಟನೆಗಳು ಮತ್ತು ಹಿಂದೂ ಕಾರ್ಯಕರ್ತರ ಮೇಲೆ ದಾಖಲು ಮಾಡಿರುವ ಸುಳ್ಳು ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು. ಪುನೀತ್ ಕೆರೆಹಳ್ಳಿ ಮೇಲಿನ ಸುಳ್ಳು ಆರೋಪಕ್ಕೆ ಗೃಹ ಸಚಿವರು ಉತ್ತರಿಸಬೇಕು ಎಂದು ಒತ್ತಾಯಿಸಿದರು.
    ಬೆಳಆವಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ೋಷಣೆ ಮೊಳಗಿಸಿದರು. ಭಟ್ಕಳದಲ್ಲಿ ಹಿಂದೂಗಳ ಹೆಣ ಎತ್ತಲು ಕೂಡ ಜನ ಇರಬಾರದು ಎಂದು ಮುಸ್ಲಿಮರೊಬ್ಬರು ಬರಹ ಬರೆದಿದ್ದರು. ಬೆಳಗಾವಿಯಲ್ಲಿ ಜೈನ ಮುನಿಯ ಭೀಕರ ಹತ್ಯೆ ಆಯಿತು. ಟಿ.ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ಮತ್ತು ಹೊಸಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ಹಾಗೂ ಯಾದಗಿರಿಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ನಡೆದಿರುವುದನ್ನು ನೋಡಿದರೆ ಸಾಕು ತಾಲಿಬಾನಿಗಳನ್ನು ಬೆಂಬಲಿಸುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ದೂರಿದರು.
    ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಟಿಪ್ಪು ಜಯಂತಿ ಆರಂಭಿಸಲಾಗಿತ್ತು. ಈಗ ಶಾಂತಿ ಹಾಳು ಮಾಡಲು ಒಬ್ಬ ಟಿಪ್ಪು ಸಾಕಾಗುವುದಿಲ್ಲ ಎಂದು ಔರಂಗಜೇಬನ ವಿಜೃಂಭಣೆಗೆ ಅವಕಾಶ ಕೊಡುತ್ತಿದ್ದಾರೆ. ಮತಾಂಧರ ಮೆರೆಸುವ ಕೆಲಸಕ್ಕೆ ಈ ಸರಕಾರ ಬೆನ್ನೆಲುಬಾಗಿ ನಿಂತಿದೆ ಎಂದರು.
    ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಮನೆಗೇ ಬೆಂಕಿ ಹಾಕಿದ್ದರು. ಹಲವು ಮನೆಗಳು ಮತ್ತು ನೂರಾರು ವಾಹನಗಳಿಗೆ ಬೆಂಕಿ ಹಾಕಿದ್ದರು. ಆದರೂ ಈ ಪ್ರಕರಣದ ಕೇಸು ವಾಪಸ್ ಪಡೆಯಲು ತನ್ವೀರ್ ಸೇಠ್ ಪತ್ರ ಬರೆದಿದ್ದರು. ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ದಾಳಿ ಸೇರಿ 12 ಪ್ರಕರಣಗಳಲ್ಲಿ ಕೇಸು ಹಿಂಪಡೆಯಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರರು ಪತ್ರ ಬರೆಯತ್ತಾರೆ ಅಂದರೆ ಏನರ್ಥ ಎಂದು ಕೇಳಿದರು.
    ಸಿದ್ದರಾಮಯ್ಯ ಮುಸ್ಲಿಮರ ಋಣ ತೀರಿಸುವ ಮಾತನಾಡಿದ್ದಾರೆ. ಮುಸ್ಲಿಮರ ಅಭಿವೃದ್ಧಿಗಾಗಿ 10 ಸಾವಿರ ಕೋಟಿ ಕೊಡುವ ಮಾತನಾಡುತ್ತಾರೆ. ಸರ್ಕಾರ ಹೀಗೆಯೆ ಕುಮ್ಮಕ್ಕು ಮುಂದುವರಿಸಿದರೆ, ಭವಿಷ್ಯದಲ್ಲಿ ಅಫಜಲ್ ಗುರು, ಬಿನ್ ಲಾಡೆನ್, ಸದ್ದಾಂ ಹುಸೇನ್, ಮಹಮ್ಮದ್ ಆಲಿ ಜಿನ್ನಾನ ವೈಭವೀಕರಣ ನಡೆದರೂ ಅಚ್ಚರಿಯಿಲ್ಲ ಎಂದರು.
    ದೇಶ ಕಟ್ಟುವ ಕೆಲಸ ಮಾಡಿದ ಅಲ್ಪಸಂಖ್ಯಾತರು ಬಹಳ ಜನ ಇದ್ದಾರೆ. ಸ್ವಾತಂತ್ರ್ಯ ವೀರ ಅಶ್ಫಕುಲ್ಲ ಖಾನ್, ಎ.ಪಿ.ಜೆ.ಅಬ್ದುಲ್ ಕಲಾಂ ಫೋಟೊ ಹಾಕಿದ್ದರೆ ಸಂತಸ ಪಡುತ್ತಿದ್ದೆವು ಎಂದರು.
    35 ಡಿಎಸ್ಪಿಗಳು, 138 ಇನ್ಸ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡುವ ಮೂಲಕ ನಾನೂ ಸಕ್ರಿಯ ಎಂದು ತೋರಿಸುವ ಗೃಹಸಚಿವ ಪರಮೇಶ್ವರರನ್ನು ಯಾವ ದುರ್ಬಲತೆ ಕಾಡುತ್ತಿದೆ? ಎಂದು ಕೇಳಿದರು.
    ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಅರವಿಂದ ಬೆಲ್ಲದ್, ಮಾಜಿ ಶಾಸಕ ಪಿ.ರಾಜೀವ್, ವಿಧಾನಪರಿಷತ್ ಸದಸ್ಯ ಅ. ದೇವೇಗೌಡ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts