More

    ದುಶ್ಚಟ ಬಿಡದೆ ತೀರ್ಥಯಾತ್ರೆ ಮಾಡುವುದು ವ್ಯರ್ಥ

    ಶಿವಮೊಗ್ಗ: ನಮ್ಮಲ್ಲಿರುವ ದುಶ್ಚಟಗಳನ್ನು ಬಿಡದೆ ತೀರ್ಥಯಾತ್ರೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ, ಪ್ರಯೋಜನವೂ ಇಲ್ಲ. ತೀರ್ಥಯಾತ್ರೆಯಿಂದ ಲೋಕ ಪರ್ಯಟನೆ ಆಗಬಹುದೇ ವಿನಾ ನಮ್ಮಲ್ಲ್ಲಿರುವ ಗುಣಗಳು ಬದಲಾವಣೆ ಆಗುವುದಿಲ್ಲ ಎಂದು ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
    ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ನೊಳಂಬ ವೀರಶೈವ ಸಮಾಜದ ನಂದಿ ವಿದ್ಯಾಸಂಸ್ಥೆಯಿಂದ ಗುರುವಂದನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿ, ಯುವ ಪೀಳಿಗೆ ಹೆಚ್ಚಾಗಿ ದುಶ್ಚಟಗಳಿಗೆ ಒಳಗಾಗುತ್ತಿದ್ದು ಅದನ್ನು ಬಿಡಿಸುವ ಜವಾಬ್ದಾರಿ ಪಾಲಕರದ್ದೇ ಆಗಿದೆ. ಎಲ್ಲವನ್ನೂ ಒಂದೇ ದಿನ ಬಿಡಿಸಲು ಸಾಧ್ಯವಾಗದೆ ಇದ್ದರೂ ದಿನಕ್ಕೊಂದು ದುಶ್ಚಟಗಳನ್ನು ಬಿಡಿಸಬಹುದು ಎಂದು ಸಲಹೆ ನೀಡಿದರು.
    ಸಮಾಜದಲ್ಲಿ ಮೃದುವಚನ, ಸಹೃದಯ ಮತ್ತು ಗೌರವ ನೀಡುವುದನ್ನು ಕಲಿಯಬೇಕು. ನಡೆ ನುಡಿ ಎರಡೂ ಸರಿಯಾಗಬೇಕು. ಆಗ ಮಾತ್ರ ನಿಜವಾದ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ನಮ್ಮ ಅಂತರಂಗ ಶುದ್ಧವಾಗಿರಬೇಕು. ಮನಸ್ಸಿನಲ್ಲಿ ಅಸೂಯೆ, ದ್ವೇಷದ ಭಾವನೆ ಬಿಟ್ಟು ಪವಿತ್ರ, ಶುದ್ಧ ಅಂತಃಕರಣವಿದ್ದರೆ ಮಾತ್ರ ಮೃದುವಚನ ಸಾಧ್ಯವಾಗುತ್ತದೆ. ಈ ಮೂಲಕ ನಮ್ಮಲ್ಲಿರುವ ಕೋಪ, ದುರ್ಗುಣಗಳನ್ನು ನಿಗ್ರಹಿಸಿಕೊಂಡು ನಮ್ಮ ವ್ಯಕ್ತಿತ್ವಗಳನ್ನು ಸುಧಾರಿಸಿಕೊಳ್ಳಬೇಕಾಗುತ್ತದೆ ಎಂದರು.
    ಶಾಸಕ ಕೆ.ಎಸ್.ಈಶ್ವರಪ್ಪ, ಮಾಜಿ ಶಾಸಕ ಡಾ. ಡಿ.ಬಿ.ಗಂಗಪ್ಪ, ಅಧ್ಯಕ್ಷತೆ ವಹಿಸಿದ್ದ ನಂದಿ ವಿದ್ಯಾ ಸಂಸ್ಥೆ ಅಧ್ಯಕ್ಷ ಎಸ್.ರುದ್ರಪ್ಪ ಮಾತನಾಡಿದರು. ಉದ್ಯಮಿ ಧರಣೇಶ್-ಪ್ರತಿಭಾ ದಂಪತಿ ದೇಣಿಗೆ ನೀಡಿದರು. ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಈಶ್ವರ ಎಣ್ಣೇರ, ಕಾರ್ಯದರ್ಶಿ ಎಚ್.ಷಣ್ಮುಖಪ್ಪ, ಖಜಾಂಚಿ ಪಿ.ರುದ್ರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts