More

    ಮಾ. 22ಕ್ಕೆ ಶಿವಮೊಗ್ಗ ಕೋಟೆ ಮಾರಿಕಾಂಬಾ ಜಾತ್ರೆ

    ಶಿವಮೊಗ್ಗ: ಕೋಟೆ ಮಾರಿಕಾಂಬಾ ಜಾತ್ರಾ ಮಹೋತ್ಸವ ಮಾರ್ಚ್ 22ಕ್ಕೆ ನಿಗದಿಯಾಗಿದ್ದು ಸಂಪ್ರದಾಯದಂತೆ ಎಲ್ಲ ಪೂಜಾ ವಿಧಿವಿಧಾನಗಳೊಂದಿಗೆ ಜಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ತಿಳಿಸಿದರು.
    ಫೆ.22ರಿಂದ 26ರವರೆಗೆ ನಡೆಯಬೇಕಿದ್ದ ಜಾತ್ರೆಯನ್ನು ಕರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಒಂದು ತಿಂಗಳು ಮುಂದೂಡಲಾಗಿದೆ. ಅಂದಿನ ಕರೊನಾ ಪರಿಸ್ಥಿತಿ ಆಧರಿಸಿ ಜಿಲ್ಲಾಡಳಿತ ಹಾಗೂ ಸರ್ಕಾರದ ಮಾರ್ಗಸೂಚಿ ಪಾಲನೆಯೊಂದಿಗೆ ಎಷ್ಟು ದಿನ ಹಾಗೂ ಯಾವ ರೀತಿ ಆಚರಿಸಬೇಕು ಎಂಬುದನ್ನು ತೀರ್ಮಾನಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಈಗಾಗಲೇ ಶಿಕಾರಿಪುರದ ಮಾದರಿ ಶಿವಮೊಗ್ಗದಲ್ಲೂ ಜಾತ್ರೆಯನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಲಾಗುವುದು. ಜ.28ರೊಳಗೆ ಮರ ತರುವ ಕಾರ್ಯ ಸೇರಿದಂತೆ ಎಲ್ಲವೂ ನಡೆಯಲಿದೆ. ಭಕ್ತರು ಗೊಂದಲಕ್ಕೆ ಒಳಗಾಗುವುದು ಬೇಡ. ಒಂದು ವೇಳೆ ಆ ಸಂದರ್ಭದಲ್ಲಿ ಕರೊನಾ ಹೆಚ್ಚಿದ್ದರೆ ಸರಳವಾಗಿ ಆಚರಿಸಲಾಗುವುದು. ಲಾಕ್‌ಡೌನ್ ಘೋಷಣೆಯಾದರೆ ದೇವಾಲಯ ಸಮಿತಿ ಸದಸ್ಯರಿಗಷ್ಟೇ ಸೀಮಿತವಾಗಿ ಪೂಜಾ ವಿಧಿವಿಧಾನ ಹಾಗೂ ದೇವಿ ವಿಸರ್ಜನೆ ಕಾರ್ಯ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
    ಸಮಿತಿ ಗೌರಾವಾಧ್ಯಕ್ಷೆ, ಮೇಯರ್ ಸುನೀತಾ ಅಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಸಮಿತಿ ಪ್ರಮುಖರಾದ ಹನುಮಂತಪ್ಪ, ವಿ.ರಾಜು, ಯಮುನಪ್ಪ, ಡಿ.ಎಂ.ರಾಮಯ್ಯ, ಸೀತಾರಾಮ ನಾಯಕ, ಶ್ರೀಧರ್‌ಮೂರ್ತಿ ನವುಲೆ, ಪ್ರಕಾಶ್, ಲೋಕೇಶ್, ಸುನೀಲ್, ಸತ್ಯನಾರಾಯಣ್, ಚಂದ್ರಶೇಖರ್, ಪ್ರಭಾಕರ್, ಷಣ್ಮುಖಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts