More

    ಜ.6ರಿಂದ ಮಂಗಳೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ

    ಶಿವಮೊಗ್ಗ: ಈಡಿಗ ಸಮಾಜಕ್ಕೆ 2ಎ ಮೀಸಲಾತಿ ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2023ರ ಜನೆವರಿ 6ರಿಂದ ಫೆಬ್ರವರಿ 14ವರೆಗೆ ಮಂಗಳೂರಿನಿಂದ ಬೆಂಗಳೂರಿನವರೆಗೆ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೀಠಾಧೀಶ ಶ್ರೀ ಪ್ರಣಾವಾನಂದ ಸ್ವಾಮೀಜಿ ತಿಳಿಸಿದರು.
    40 ದಿನಗಳ 658 ಕಿ.ಮೀ. ಪಾದಯಾತ್ರೆಯು ಮಂಗಳೂರಿನ ಕದ್ರಿ ದೇವಸ್ಥಾನದಿಂದ ಆರಂಭಗೊಳ್ಳಲಿದೆ. ಪ್ರತಿದಿನ 20 ಕಿ.ಮೀ. ಪಾದಯಾತ್ರೆ ಇರಲಿದ್ದು ಉಡುಪಿ, ಕುಂದಾಪುರ, ಮಾಸ್ತಕಟ್ಟೆ, ಹೊಸಂಗಡಿ, ನಗರ, ಹೊಸನಗರ, ಸಾಗರ, ಸೊರಬ, ಶಿಕಾರಿಪುರದ ಮಾರ್ಗವಾಗಿ ಶಿವಮೊಗ್ಗ ತಲುಪಲಿದೆ. ಭದ್ರಾವತಿ, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ತೆರಳಿ ಫ್ರೀಡಂಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಕಳೆದ ಎರಡೂವರೆ ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ. ಆದರೆ ಸಚಿವ ಮುರುಗೇಶ್ ನಿರಾಣಿ ಒಳಗೊಂಡಂತೆ ಸರ್ಕಾರದ ಪ್ರತಿನಿಧಿಗಳು ಇಡೀ ಸಮಾಜಕ್ಕೆ ಮೋಸ ಮಾಡಿದ್ದಾರೆ. ಇನ್ಮುಂದೆ ಸಮಾಜಕ್ಕೆ ಆಗುತ್ತಿರುವ ಮೋಸ ತಡೆಯಲು ಉಗ್ರ ಹೋರಾಟ ಮಾಡಲಾಗುತ್ತಿದೆ. ನಮ್ಮ ಹೋರಾಟ ಕೇವಲ ಕಲ್ಯಾಣಕರ್ನಾಟಕಕ್ಕೆ ಸೀಮಿತವಾಗಬಾರದು ಎಂಬ ಕಾರಣಕ್ಕೆ ರಾಜ್ಯಾದ್ಯಂತ ವಿಸ್ತರಿಸಿ ಜಾಗೃತಿ ಮೂಡಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
    ಪಾದಯಾತ್ರೆ ರಾಜ್ಯ ಸಂಚಾಲಕ ಡಾ. ಬಿ.ಎಚ್.ಮಂಚೇಗೌಡ, ಸಹ ಸಂಚಾಲಕ ನಾಗರಾಜ್, ಪ್ರದೀಪ್, ಬಸಯ್ಯ ಗುತ್ತೇದಾರ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts