More

    ಶಿವಮೊಗ್ಗ ಆಯುರ್ವೇದ ಹಬ್ ಆಗಲಿ: ಎಂಎಲ್‌ಸಿ ಅರುಣ್

    ಶಿವಮೊಗ್ಗ: ಶಿವಮೊಗ್ಗದಲ್ಲಿ ಆಯುರ್ವೇದ ಕಾಲೇಜು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ವರ್ಷದಿಂದಲೇ ಆಯುಷ್ ವಿಶ್ವವಿದ್ಯಾಲಯವನ್ನು ಕಾರ್ಯಾರಂಭಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೊಂದಿಗೆ ಸರ್ಕಾರದ ಮಟ್ಟದಲ್ಲಿ ವಿಶೇಷ ಪ್ರಯತ್ನ ನಡೆಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಭರವಸೆ ನೀಡಿದರು.
    ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆಯಿಂದ ಆಯೋಜಿಸಿದ್ದ 7ನೇ ಅಂತಾರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಧನ್ವಂತರಿ ಜಯಂತಿ ಉದ್ಘಾಟಿಸಿ ಮಾತನಾಡಿದರು.
    ರಾಜ್ಯ ಸರ್ಕಾರ ಆಯುಷ್ ವಿವಿ ಸ್ಥಾಪನೆಗೆ ಈಗಾಗಲೇ 100 ಎಕರೆ ಜಾಗವನ್ನು ನೀಡಿದೆ. ವಿವಿಯಲ್ಲಿ 2023ರಿಂದಲೇ ಪ್ರವೇಶಾತಿ ಆರಂಭವಾಗಬೇಕಿದ್ದು, ವಿಶೇಷಾಧಿಕಾರಿ ನೇಮಕ ಮಾಡಬೇಕಿದೆ. ಆ ಮೂಲಕ ಭವಿಷ್ಯದಲ್ಲಿ ಶಿವಮೊಗ್ಗ ಆಯುರ್ವೇದದ ಹಬ್ ಆಗಬೇಕಿದೆ ಎಂದು ಹೇಳಿದರು.
    ಮೊದಲು ಆಯುರ್ವೇದದ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆ ಇತ್ತು. ಆಯುರ್ವೇದ ಎಂದಾಕ್ಷಣ ನಿರ್ಲಕ್ಷೃ ಮಾಡುವವರೇ ಹೆಚ್ಚಿದ್ದರು. ಆದರೆ ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಆಯುರ್ವೇದ ಮತ್ತು ಧನ್ವಂತರಿ ಬಗ್ಗೆ ವಿಶೇಷ ಒತ್ತು ನೀಡಿದ್ದಾರೆ. ಇದೀಗ ಜನರು ನಿಧಾನವಾಗಿ ಆಯುರ್ವೇದ ಮತ್ತು ಧನ್ವಂತರಿ ಚಿಕಿತ್ಸೆಯತ್ತ ವಾಲುತ್ತಿದ್ದಾರೆ ಎಂದರು.
    ಆಯುಷ್ ಇಲಾಖೆ ರಾಜ್ಯ ಕಾರ್ಯದರ್ಶಿ ಡಾ. ಈರಣ್ಣ, ಆಯುರ್ವೇದಿಕ್ ಫಾರ್ಮುಲರಿ ಆಫ್ ಇಂಡಿಯಾ ಅಧ್ಯಕ್ಷ ಡಾ. ಶಶಿಕಾಂತ್ ಮಾತನಾಡಿದರು. ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಪುಷ್ಪಾ, ಎಎಫ್‌ಐನ ಡಾ. ಶ್ರೀನಿವಾಸ್ ರೆಡ್ಡಿ, ಡಾ. ಹಿರೇಮಠ, ಡಾ.ರಾಘವೇಂದ್ರ, ಡಾ. ಸಂತೋಷ್, ಯೋಗ ಸಮಿತಿ ಅಧ್ಯಕ್ಷ ಎಚ್.ವೈ.ಸಂಜಯ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts