More

    ಚಂದನವನದಲ್ಲಿ ಶಿಮ್ಲಾ ಆಪಲ್​ ! ವೆಂಕ್ಯಾ ಚಿತ್ರದಲ್ಲಿ ಮಾದಕ ಮಾಡೆಲ್​ ರೂಪಾಲಿ ಸೂಡ್​

    ವಿಜಯವಾಣಿ ಸುದ್ದಿಜಾಲ ಬೆಂಗಳೂರು:

    “ಡೊಳ್ಳು’ ಚಿತ್ರದ ಯಶಸ್ಸಿನ ಬಳಿಕ ಸಾಗರ್​ ಪುರಾಣಿಕ್​ ನಿರ್ದೇಶನ ಮತ್ತು ಪವನ್​ ಒಡೆಯರ್​ ನಿರ್ಮಾಣದಲ್ಲಿ “ವೆಂಕ್ಯಾ’ ಸಿನಿಮಾ ಘೋಷಣೆಯಾಗಿರುವುದು ಗೊತ್ತಿದೆ. ಈಗಾಗಲೇ ಚಿತ್ರದ ಶೂಟಿಂಗ್​ ಪ್ರಾರಂಭವಾಗಿದ್ದು, ಅದರ ನಡುವೆಯೇ ಚಿತ್ರತಂಡ ಹೊಸ ಪಾತ್ರವನ್ನು ಪರಿಚಯಿಸಿದೆ. ಶಿಮ್ಲಾ ಮೂಲದ ಮಾಡೆಲ್​, ನಟಿ ರೂಪಾಲಿ ಸೂದ್​ “ವೆಂಕ್ಯಾ’ ಟೀಂ ಸೇರಿಕೊಂಡಿದ್ದು, ಅವರ ಲುಕ್​ ಕೂಡ ರಿವೀಲ್​ ಆಗಿದೆ.

    ಚಂದನವನದಲ್ಲಿ ಶಿಮ್ಲಾ ಆಪಲ್​ ! ವೆಂಕ್ಯಾ ಚಿತ್ರದಲ್ಲಿ ಮಾದಕ ಮಾಡೆಲ್​ ರೂಪಾಲಿ ಸೂಡ್​

    ಮಾಡೆಲಿಂಗ್​ ಜತೆ ಖ್ಯಾತ ಗಾಯಕ ಹಾರ್ಡಿ ಸಂಧುಗೆ ಜೋಡಿಯಾಗಿ “ಹಾರ್ನ್​ ಬ್ಲೋ’ ಸೇರಿ ಕೆಲವು ಮ್ಯೂಸಿಕ್​ ವಿಡಿಯೋ ಆಲ್ಬಂ ಸಾಂಗ್​ಗಳಲ್ಲಿ ಮಿಂಚಿರುವ ರೂಪಾಲಿಗೆ, “ವೆಂಕ್ಯಾ’ ಮೊದಲ ಕನ್ನಡ ಚಿತ್ರ. “ನನಗೆ ಬಾಲ್ಯದಿಂದಲೂ ನಟಿಯಾಗುವ ಆಸೆಯಿತ್ತು. ಐಟಿಯಲ್ಲಿ ಎಂಬಿಎ ಪದವಿ ಪಡೆದಿದ್ದೇನೆ. ಕಾಲೇಜು ದಿನಗಳಿಂದಲೇ ಮಾಡೆಲಿಂಗ್​ ಮತ್ತು ಮ್ಯೂಸಿಕ್​ ವಿಡಿಯೋಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಈ ಚಿತ್ರದಲ್ಲಿ ಹಿಮಾಚಲದ ಪಹಾಡಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ಇತ್ತೀಚೆಗಷ್ಟೆ ಮನಾಲಿಯ ಕೈಲಾಂಗ್​ನ ಪರ್ವತಗಳ ನಡುವೆ ಸುಂದರ ಸ್ಥಳಗಳಲ್ಲಿ ಶೂಟಿಂಗ್​ ನಡೆಸಿದೆವು. ಕನ್ನಡ ಸಿನಿಮಾ ಮೂಲಕ ವೃತ್ತೀಜಿವನ ಆರಂಭಿಸಿರುವ ಖುಷಿಯಿದೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ ರೂಪಾಲಿ ಸೂದ್​.

    ಚಂದನವನದಲ್ಲಿ ಶಿಮ್ಲಾ ಆಪಲ್​ ! ವೆಂಕ್ಯಾ ಚಿತ್ರದಲ್ಲಿ ಮಾದಕ ಮಾಡೆಲ್​ ರೂಪಾಲಿ ಸೂಡ್​

    ಉತ್ತರ ಕರ್ನಾಟಕದ ಕಥಾಹಂದರ ಹೊಂದಿರುವ “ವೆಂಕ್ಯಾ’ ಚಿತ್ರಕ್ಕೆ ಶ್ರೀನಿಧಿ ಡಿ.ಎಸ್​ ಸಂಭಾಷಣೆ, ಪ್ರಣವ್​ ಮುಲೆ ಛಾಯಾಗ್ರಹಣ ಹಾಗೂ ಹೇಮಂತ್​ ಜೋಯಿಸ್​ ಸಂಗೀತವಿರಲಿದೆ.

    ಚಂದನವನದಲ್ಲಿ ಶಿಮ್ಲಾ ಆಪಲ್​ ! ವೆಂಕ್ಯಾ ಚಿತ್ರದಲ್ಲಿ ಮಾದಕ ಮಾಡೆಲ್​ ರೂಪಾಲಿ ಸೂಡ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts