More

    ಬೆಳಗಾವಿ ಟಿಕೆಟ್ ಸಿಗುವ ವಿಶ್ವಾಸದಲ್ಲಿ ಶೆಟ್ಟರ್

    ಹುಬ್ಬಳ್ಳಿ : ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಅಥವಾ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಆಸಕ್ತಿ ಇತ್ತು. ಎರಡೂ ಕ್ಷೇತ್ರಗಳ ಟಿಕೆಟ್ ಬೇರೆಯವರಿಗೆ ಸಿಕ್ಕಿವೆ. ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಬಿಜೆಪಿ ವರಿಷ್ಠರು ಹಾಗೂ ಬೆಳಗಾವಿಯ ಪ್ರಮುಖರೊಂದಿಗೆ ಚರ್ಚೆ ನಡೆಸಿದ್ದೇನೆ. ಟಿಕೆಟ್ ಸಿಗುವ ವಿಶ್ವಾಸ ಇದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದರೆ.

    ನಗರದ ತಮ್ಮ ಗೃಹ ಕಚೇರಿಯಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶೆಟ್ಟರ್, ಬೆಳಗಾವಿಯಲ್ಲಿ ನನ್ನ ಸ್ಪರ್ಧೆಗೆ ಅಪಸ್ವರ ಇಲ್ಲ. ತುಮಕೂರಿನಲ್ಲಿಯೂ ಸೋಮಣ್ಣ ಸ್ಪರ್ಧೆಗೆ ಅಲ್ಲಿನ ಸ್ಥಳೀಯರು ವಿರೋಧಿಸಿದ್ದರು. ಟಿಕೆಟ್ ಅಂತಿಮಗೊಂಡ ನಂತರ ಪರಿಸ್ಥಿತಿ ಶಾಂತವಾಗಿದೆ ಎಂದರು.

    ಹಾವೇರಿ ಮತ್ತು ಧಾರವಾಡ ಕ್ದೇತ್ರದ ಟಿಕೆಟ್ ಕೈ ತಪ್ಪಿದ್ದರಿಂದ ರಾಯಚೂರು ಪ್ರವಾಸ ಮೊಟಕುಗೊಳಿಸಿಲ್ಲ. ರಾಯಚೂರು ಪ್ರವಾಸದಲ್ಲಿ ತೊಡಗಿದರೆ ಪಕ್ಷದ ವರಿಷ್ಠರೊಂದಿಗೆ ರ್ಚಚಿಸಲು ಆಗುವುದಿಲ್ಲ. ಹೀಗಾಗಿ, ರಾಯಚೂರು ಪ್ರವಾಸದಿಂದ ವಾಪಸ್ಸು ಬರಬೇಕಾಯಿತು ಎಂದು ಹೇಳಿದರು.

    ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಬುಧವಾರವೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೊಂದಿಗೆ ರ್ಚಚಿಸಿದ್ದೇನೆ. ಚರ್ಚೆಯ ವಿಷಯವನ್ನು ಬಹಿರಂಗಪಡಿಸಲು ಆಗುವುದಿಲ್ಲ ಎಂದು ತಿಳಿಸಿದರು.

    ನಾನು ಬಿಜೆಪಿಯಲ್ಲಿಯೇ ಇದ್ದೇನೆ. ಪ್ರಲ್ಹಾದ ಜೋಶಿ ಸೇರಿದಂತೆ ಯಾರದೇ ಪರ ಪ್ರಚಾರಕ್ಕೆ ವರಿಷ್ಠರು ಸೂಚಿಸಿದರೆ ಹೋಗುತ್ತೇನೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದಷ್ಟೇ ನನ್ನ ಉದ್ದೇಶ ಎಂದು ಹೇಳಿದರು.

    ಬಿಜೆಪಿಯಿಂದ ಕಾಂಗ್ರೆಸ್​ಗೆ ಹೋಗಿದ್ದಕ್ಕೆ ಆಗಲಿ ಅಥವಾ ಮರಳಿ ಬಿಜೆಪಿಗೆ ಬಂದಿದ್ದಕ್ಕಾಗಲಿ ನನಗೆ ಪಶ್ಚಾತಾಪ ಆಗಿಲ್ಲ. ಇನ್ನೊಬ್ಬರು ಪಶ್ಚಾತಾಪ ಪಡುವಂತೆ ಮಾಡುವವನು ನಾನು ಎಂದರು.

    ಎಲ್ಲೆಡೆ ನರೇಂದ್ರ ಮೋದಿ ಪರ ವಾತಾವರಣ ಇದೆ. ರಾಜ್ಯದಲ್ಲಿ ಎಲ್ಲ 28 ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಗೆಲ್ಲುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts