More

    ನಾಗಲಮಡಿಕೆ ಅಂತ್ಯ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯದಲ್ಲಿ ಷಷ್ಠಿ ಪೂಜೆ

    ಪಾವಗಡ: ನಾಗಲಮಡಿಕೆಯ ಅಂತ್ಯ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯದಲ್ಲಿ ಗುರುವಾರ ಮೊದಲನೆ ಷಷ್ಠಿ ಪೂಜೆ ನೆರವೇರಿತು. ಮಾರ್ಗಶಿರ ಷಷ್ಠಿ ಮೊದಲನೆ ಷಷ್ಠಿಯೆಂದು ಪ್ರಸಿದ್ಧಿಯಾಗಿದ್ದು ಷಷ್ಠಿ ಪೂಜೆಗಳ ಅಂಗವಾಗಿ ಬೆಳಗಿನಿಂದಲೂ ಮಹಾನ್ಯಾಸ ಪೂರ್ವಕ ಏಕವಾರು ರುದ್ರಾಭಿಷೇಕ, ಪುರುಷಸೂಕ್ತ, ಶ್ರೀಸೂಕ್ತ, ಸಹಸ್ರನಾಮಾರ್ಚನೆಗಳು ವಿಧ್ಯುಕ್ತವಾಗಿ ನಡೆದವು.

    ಉತ್ತರ ಪಿನಾಕಿನ ಬ್ಯಾರೇಜಿನಲ್ಲಿ ನೀರು ತುಂಬಿರುವುದರಿಂದ ಭಕ್ತರು ನೀರಿನಲ್ಲಿ ಸ್ನಾನ ಮಾಡಿಕೊಂಡು ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಕಂದಾಯ ಇಲಾಖಾ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ನೂರಾರು ಭಕ್ತರು ಇದ್ದರು. ಮಡೆ ಸ್ನಾನ ನಿಷೇಧಿಸಿರುವ ಹಿನ್ನೆಲೆಯಲ್ಲಿ ಮಡೆ ಉರುಳಬಾರದು ಎಂಬ ಉದ್ದೇಶದಿಂದ ಎಲೆಯನ್ನು ಯಾರೂ ತೆಗೆದುಕೊಂಡು ಹೋಗದಂತೆ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಊಟದ ಕೊನೆಯಲ್ಲಿ ಎಲೆ ಕಾವಲು ಕಾಯುತ್ತಿದ್ದ ದೃಶ್ಯ ಕಂಡು ಬಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts