More

    ಗ್ರಾಮಕ್ಕೆ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಕೇಳಿದ್ದಕ್ಕೆ ಯುವಕನ ಕಪಾಳಕ್ಕೆ ಬಾರಿಸಿದ ಕೈ​ ಶಾಸಕ

    ತುಮಕೂರು: ಮತದಾನ ಮಾಡಿ ಆಯ್ಕೆ ಮಾಡಿದ ಜನಪ್ರತಿನಿಧಿಯ ಬಳಿ ಊರಿನ ಸಮಸ್ಯೆಗಳನ್ನು ಹೇಳುವುದೇ ತಪ್ಪಾ ಎನ್ನುವ ಪ್ರಶ್ನೆ ಈ ಘಟನೆ ನೋಡಿದ ಮೇಲೆ ಹುಟ್ಟಿಕೊಳ್ಳುತ್ತದೆ.

    ಅಷ್ಟಕ್ಕೂ ನಡೆದಿದ್ದೇನೆಂದರೆ, ಗ್ರಾಮಕ್ಕೆ ರಸ್ತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೇಳಿದ್ದಕ್ಕೆ ಕಾಂಗ್ರೆಸ್​ ಶಾಸಕರೊಬ್ಬರು ಯುವಕನ ಕಪಾಳಕ್ಕೆ ಬಾರಿಸಿರುವ ಅಮಾನವೀಯ ಘಟನೆ ನಡೆದಿದೆ. ಜನರ ಸೇವೆ ಮಾಡುತ್ತೇವೆ ಎಂದು ಭರವಸೆ ನೀಡಿ ವೋಟ್​ ಪಡೆದುಕೊಳ್ಳುವ ಜನಪ್ರತಿನಿಧಿಗಳೇ ಹೀಗೆ ಮಾಡಿದರೆ ಸಾಮಾನ್ಯ ಜನರು ತಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು.

    ತುಮಕೂರು ಜಿಲ್ಲೆಯ ಪಾವಗಡ ಕ್ಷೇತ್ರದ ಕಾಂಗ್ರೆಸ್​ ಶಾಸಕ ವೆಂಕಟರವಣಪ್ಪ ಅವರು ಯುವಕನ ಮೇಲೆ ದರ್ಪ ಮೆರೆದಿದ್ದಾರೆ. ತಮ್ಮ ಗ್ರಾಮಕ್ಕೆ ಸರಿಯಾದ ರಸ್ತೆ ಹಾಗೂ ಕುಡಿಯುವ ನೀರಿಲ್ಲ ಎಂದು ದೂರು ನೀಡಲು ಪಾವಗಡ ತಾಲೂಕು ಕಚೇರಿಯ ಬಳಿ ಯುವಕ ಬಂದಿದ್ದ, ಈ ವೇಳೆ ಸಮಸ್ಯೆ ಹೇಳಿಕೊಳ್ಳುವಾಗಲೇ ಶಾಸಕರು ಯುವಕನ ಕಪಾಳಕ್ಕೆ ಬಾರಿಸಿದ್ದಾರೆ.

    ಕಪಾಳಕ್ಕೆ ಬಾರಿಸಿದ್ದಲ್ಲದೆ, ಬೆದರಿಕೆಯನ್ನು ಹಾಕಿದ್ದಾರೆ. ನಿನ್ನ ಪೊಲೀಸ್​ ಠಾಣೆಗೆ ಹಾಕಿಸುತ್ತೇನೆಂದು ಬೆದರಿಕೆ ಹಾಕಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್. (ದಿಗ್ವಿಜಯ ನ್ಯೂಸ್​)

    ಎರಡು ವರ್ಷ ಅಲೆದ್ರೂ ಸಿಗದ ಕೆಲಸ: ಟೀ ಮಾರಾಟಕ್ಕಿಳಿದ ಅರ್ಥಶಾಸ್ತ್ರ ಪದವೀಧರೆಯ ಮನಕಲಕುವ ಕತೆಯಿದು

    ನಾಗಚೈತನ್ಯ 2ನೇ ಮದ್ವೆಗೆ ರೆಡಿಯಾಗಿರುವ ಸುದ್ದಿ ನಿಜವೋ? ವದಂತಿಯೋ?…ಇಲ್ಲಿದೆ ಅಸಲಿ ವಿಚಾರ

    ಕೋಟಿ ಸಂಪಾದಿಸುವ ಸಮಂತಾರ ಮೊದಲ ಸಂಬಳ ಎಷ್ಟೆಂಬುದನ್ನು ತಿಳಿದ್ರೆ ನೀವು ಅಚ್ಚರಿ ಪಡ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts