More

    ಜಯಲಲಿತಾ ಆಪ್ತೆ ಶಶಿಕಲಾ​ಗೆ ಕರೊನಾ ಸೋಂಕು ದೃಢ! ಬಿಡುಗಡೆ ಮುಂದೂಡಿಕೆ ಸಾಧ್ಯತೆ

    ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ (ಚಿನ್ನಮ್ಮ)ಗೆ ಕರೊನಾ ಸೋಂಕು ದೃಢವಾಗಿದೆ. ಎರಡನೇ ಬಾರಿ ನಡೆಸಿದ ಆರ್​ಟಿಪಿಸಿಆರ್​ ಪರೀಕ್ಷೆಯಲ್ಲಿ ಸೋಂಕು ದೃಢವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

    ಇದನ್ನೂ ಓದಿ: ಶಶಿಕಲಾಗೆ ಉಸಿರಾಟದಲ್ಲಿ ತೊಂದರೆ; ಬೌರಿಂಗ್​ ಆಸ್ಪತ್ರೆಗೆ ದಾಖಲು

    ಚಿನ್ನಮ್ಮ, ಜ್ವರ ಮತ್ತು ಬೆನ್ನು ಉರಿ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಕರೊನಾ ಪರೀಕ್ಷೆ ನಡೆಸಿದಾಗ ಕರೊನಾ ನೆಗೆಟಿವ್​ ವರದಿ ಬಂದಿದೆ. ಬೇರೆ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿದ ವೈದ್ಯರು ಎಂಆರ್​ಐ ಸ್ಕ್ಯಾನಿಂಗ್ ಸಲುವಾಗಿ ಗುರುವಾರ ಮಧ್ಯಾಹ್ನ ವಿಕ್ಟೋರಿಯಾ ಆಸ್ಪತ್ರೆಗೆ ಶಶಿಕಲಾರನ್ನು ಸ್ಥಳಾಂತರ ಮಾಡಿದ್ದಾರೆ. ಅಲ್ಲಿ ಮತ್ತೊಮ್ಮೆ ಕರೊನಾ ಪರೀಕ್ಷೆಯನ್ನು ಮಾಡಲಾಗಿದ್ದು, ಸೋಂಕು ಇರುವುದು ಕಾಣಿಸಿಕೊಂಡಿದೆ.

    ಶಶಿಕಲಾಗೆ ಟೈಪ್ 2 ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಹೈಪೋಥೈರಾಯ್ಡಿಸಮ್ ಯುಟಿಐ (ಮೂತ್ರಕೋಶದ ಸೋಂಕು), ಶಂಕಿತ ‘ಸಾರಿ’ (ತೀವ್ರ ಉಸಿರಾಟದ ತೊಂದರೆ) ಸಮಸ್ಯೆಯಿಂದಾಗಿ ಬೌರಿಂಗ್​ನಿಂದ ಮಧ್ಯಾಹ್ನ 2.30ಕ್ಕೆ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

    ಇದನ್ನೂ ಓದಿ: ಬಿಡುಗಡೆಗೆ ವಾರವಿರುವಾಗಲೇ ಶಶಿಕಲಾ ಆರೋಗ್ಯದಲ್ಲಿ ಏರುಪೇರು!

    ತಮಿಳುನಾಡು ಮಾಜಿ ಸಿಎಂ ದಿ ಜಯಲಲಿತಾ ಅಪ್ತೆ ಶಶಿಕಲಾ ಕಳೆದ ನಾಲ್ಕು ವರ್ಷದಿಂದ ಜೈಲು ವಾಸ ಅನುಭವಿಸುತ್ತಿದ್ದಾರೆ. ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಗಿರುವ ಶಶಿಕಲಾ ಅವರು ಜನವರಿ 27ರಂದು ಬಿಡುಗಡೆಯಾಗಲಿದ್ದಾರೆ ಎಂದು ಪರಪ್ಪನ ಅಗ್ರಹಾರದ ಅಧಿಕಾರಿಗಳು ದೃಢಪಡಿಸಿದ್ದರು. ಆದರೆ ಇದೀಗ ಅವರಿಗೆ ಕರೊನಾ ಸೋಂಕು ದೃಢವಾಗಿರುವ ಹಿನ್ನೆಲೆಯಲ್ಲಿ ಬಿಡುಗಡೆ ದಿನವೂ ಮುಂದೆ ಹೋಗುವ ಸಾಧ್ಯತೆಯಿದೆ ಎನ್ನಲಾಗಿದೆ.

    ಸೆರಂ ಇನ್​ಸ್ಟಿಟ್ಯೂಟ್​ನಲ್ಲಿ ಮತ್ತೆ ಬೆಂಕಿ! ಐವರ ಸಾವಿನ ನಂತರವೂ ತಣಿಯದ ಅಗ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts