More

    ಸಮಾಜದ ಅಂಕುಡೊಂಕು ತಿದ್ದಿದ ಶರಣರು

    ಬ್ಯಾಡಗಿ: ತಾಲೂಕಿನ ಮಲ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಆಚರಿಸಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಹಡಪದ ಅಪ್ಪಣ್ಣ ಸಮಾಜದ ತಾಲೂಕಾಧ್ಯಕ್ಷ ದುಂಡೆಪ್ಪ ಕಾಯಕದ, ಸಂತರು ಹಾಗೂ ಶಿವಶರಣರ ನಾಡಿನಲ್ಲಿ ನಾವು ಮಹಾತ್ಮರ ಬದುಕನ್ನು ದಾರಿದೀಪವನ್ನಾಗಿಸಿಕೊಂಡಿದ್ದೇವೆ. ಸಾವಿರಾರು ವರ್ಷಗಳಿಂದ ದಾರ್ಶನಿಕರು ಸಮಾಜವನ್ನು ತಿದ್ದುವಲ್ಲಿ ಶ್ರಮಿಸಿದ್ದು, ಸಮಾಜದ ಅಂಕುಡೊಂಕುಗಳನ್ನು ವಚನಗಳ ಮೂಲಕ ತಿದ್ದಿದ ಶರಣರ ಕಾಯಕಯೋಗಿಯಾಗಿದ್ದರು. ಅವರ ನಿಸ್ವಾರ್ಥ ಸೇವೆಯಿಂದ ಸಾಕಷ್ಟು ಬದಲಾವಣೆಯಾಗಿದ್ದು, ಯುವ ಪೀಳಿಗೆಗೆ ಅವರ ನಡೆನುಡಿ ದಾರಿದೀಪವಾಗಿದೆ ಎಂದರು.

    ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾಗರಾಜ ಹಡಗಲಿ ಮಾತನಾಡಿ, ಎಲ್ಲ ಸಮಾಜಗಳಲ್ಲಿ ದಾರ್ಶನಿಕರು, ಮಹಾತ್ಮರ ಜನನವಾಗಿದ್ದು, ಎಲ್ಲರೂ ಸಾಮಾಜಿಕ ಬದಲಾವಣೆಗೆ ಯತ್ನಿಸಿದ್ದಾರೆ. ಸಮಾಜದಲ್ಲಿ ಕೋಮ ಸಾಮರಸ್ಯ, ಸೌಹಾರ್ದ ಭಾವನೆ ಮೂಡಿಸಲು ಪ್ರಾಚೀನ ಕಾಲದಿಂದಲೂ ಶರಣರು ಸತತ ಪ್ರಯತ್ನ ನಡೆಸಿದ್ದರು. ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಸಂವಿಧಾನದಲ್ಲಿ ಎಲ್ಲರಿಗೂ ಕರ್ತವ್ಯ, ಹಕ್ಕುಗಳನ್ನು ನೀಡಿದೆ. ನಾವೆಲ್ಲ ಭಾವನಾತ್ಮಕವಾಗಿ ಒಂದಾಗಿ, ಒಗ್ಗಟ್ಟಿನಿಂದ ಗ್ರಾಮದ ಅಭಿವೃದ್ದಿಗೆ ಸಹಕರಿಸೋಣ ಎಂದರು.

    ಗ್ರಾಪಂ ಅಧ್ಯಕ್ಷೆ ನೀಲಮ್ಮ ಕುಲಕರ್ಣಿ, ಸದಸ್ಯರಾದ ವಿಠ್ಠಲ ಜಾಧವ, ಮಹ್ಮದಹನೀಫ್ ಪಾಟೀಲ, ಫಕೀರಪ್ಪ ಯತ್ನಳ್ಳಿ, ಹಡಪದ ಅಪ್ಪಣ್ಣ ಸಮಾಜದ ಮುಖಂಡರಾದ ನಾಗರಾಜ ಕಾಯಕದ, ನಾಗೇಂದ್ರಪ್ಪ ಕಾಯಕದ, ಫಕೀರೇಶ ಕಾಯಕದ, ಮಾಲತೇಶ ಹೊಳಲ, ಕೃಷ್ಣ ಹಡಪದ, ರಾಜಶೇಖರ ಕಾಯಕದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts