More

    ಹೊನ್ನಾವರದಲ್ಲಿ ಶರಾವತಿ ಆರತಿ ಸಂಪನ್ನ

    ಹೊನ್ನಾವರ: ಜೀವ ಸಂಕುಲವನ್ನು ಪೊರೆಯುವ ಜೀವನದಿ ಶರಾವತಿ ನಮಿಸಿ ಆರತಿ ಮಾಡುವುದರೊಂದಿಗೆ ಕೃತಜ್ಞತೆಯನ್ನು ಸಲ್ಲಿಸುವ ಕೆಲಸ ನಡೆದಿದೆ. ಹಲವಾರು ಬಗೆಯಲ್ಲಿ ಜನಜೀವನಕ್ಕೆ ದಾರಿಯಾಗಿರುವ ಶರಾವತಿ ನದಿಯನ್ನು ಮಲೀನ ಮಾಡದೆ ಶುದ್ದವಾಗಿರಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಮಿರ್ಜಾನ ಆದಿಚುಂಚನಗಿರಿ ಶಾಖಾಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ನುಡಿದರು.
    ಪಟ್ಟಣದ ಬಂದರು ಪ್ರದೇಶದ ಶರಾವತಿ ನದಿತೀರದಲ್ಲಿ ಇಲ್ಲಿಯ ಶರಾವತಿ ಆರತಿ ಸಮಿತಿಯ ನೇತೃತ್ವದಲ್ಲಿ ಗುರುವಾರ ಆಯೋಜಿಸಿದ `ಶರಾವತಿ ಆರತಿ’ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಎಲ್ಲ ನಾಗರೀಕತೆಗಳು ನದಿತಟಗಳಲ್ಲಿ ಪ್ರಾರಂಭವಾಗಿದೆ. ಅದೇ ರೀತಿ ಶರಾವತಿ ನದಿ ತೀರದಲ್ಲಿ ಹಲವಾರು ಗ್ರಾಮಗಳ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ನದಿಯು ಕುಡಿಯುವುದಕ್ಕಾಗಿ, ರೈತರ ಕೃಷಿಭೂಮಿಗಾಗಿ, ವಿದ್ಯುತ್ ಉತ್ಪಾದನೆಗಾಗಿ, ಪ್ರವಾಸಿಗರಿಗಾಗಿ, ಛಾಯಾಗ್ರಹಣಕ್ಕಾಗಿ ಉಪಯುಕ್ತವಾಗಿ ವಿವಿಧ ರೀತಿಯಲ್ಲಿ ಉಪಯುಕ್ತವಾಗಿದೆ ಎಂದರು.
    ಪಂಚವಾದ್ಯದೊAದಿಗೆ ಮೆರವಣಿಗೆ ನಡೆಸಲಾಯಿತು. ಶರಾವತಿ ನದಿಗೆ ಬಾಗೀನ ಅರ್ಪಿಸಲಾಯಿತು. ಸ್ವಾಮೀಜಿಯವರು ನದಿಗೆ ಆರತಿ ಬೆಳಗಿದರು. ನಂತರ ಸೇರಿದ್ದ ಜನರು ದೀಪವನ್ನು ಬೆಳಗಿದರು. ಸಂಗೀತ ವಿದುಷಿ ತಾರಾ ಭಟ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
    ಸಮಿತಿಯ ಅಧ್ಯಕ್ಷ ವೆಂಕಟರಮಣ ಹೆಗಡೆ, ಸಮಿತಿಯ ಕಾರ್ಯಾಧ್ಯಕ್ಷ ಜಿ.ಜಿ.ಶಂಕರ, ಸಮಿತಿಯ ಜೆ.ಟಿ.ಪೈ, ಕೇಶವ ನಾಯ್ಕ ಬಳಕೂರು, ವಿಶ್ವನಾಥ ನಾಯಕ, ರಾಜೇಶ ಭಂಡಾರಿ, ಶಿವರಾಜ ಮೇಸ್ತ, ಉಮೇಶ ಮೇಸ್ತ, ಸುರೇಶ ಹೊನ್ನಾವರ, ಎಂ.ಎಸ್.ಹೆಗಡೆ ಕಣ್ಣಿಮನೆ, ಸಂಜಯ ಶೇಟ್, ಮಂಜುನಾಥ ಗೌಡ, ರಾಜೇಶ ತಾಂಡೇಲ ಹಾಗೂ ಸಾರ್ವಜನಿಕರು ಇದ್ದರು.

    https://www.vijayavani.net/rain-for-4-days-in-many-parts-of-the-state

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts