More

    ರಶ್ಮಿಕಾ ಚೆಲುವಿಗೆ, ಮುಗ್ಧತೆಗೆ ಬೋಲ್ಡ್ ಆದರಂತೆ ಈ ನಿರ್ದೇಶಕ …

    ಮುಂಬೈ: ಸೌಥ್​ ಸೆನ್ಸೇಶನ್​ ರಶ್ಮಿಕಾ ಮಂದಣ್ಣ ಬಾಲಿವುಡ್​ನಲ್ಲಿ ಮಿಷನ್​ ಮಜ್ನು ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ರಶ್ಮಿಕಾಗೆ ನಟಿಸುವುದಕ್ಕೆ ಅವಕಾಶ ಸಿಕ್ಕಿದ್ದು ಹೇಗೆ ಗೊತ್ತಾ? ಅದಕ್ಕೆ ಕಾರಣ, ಡಿಯರ್ ಕಾಮ್ರೇಡ್​ ಚಿತ್ರ.

    ಇದನ್ನೂ ಓದಿ: ವಿಕ್ರಮ್ ವೇದಾ ರೀಮೇಕ್ನಿಂದ ಹೃತಿಕ್ ಔಟ್?

    ಡಿಯರ್​ ಕಾಮ್ರೇಡ್​​ ಎಂಬ ತೆಲುಗು ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿದ್ದು ನೆನಪಿರಬಹುದು. ವಿಜಯ್​ ದೇವರಕೊಂಡ ಹೀರೋ ಆಗಿದ್ದ ಈ ಚಿತ್ರ, ಎರಡು ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು. ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಅಷ್ಟೇನೂ ಯಶಸ್ವಿಯಾಗದಿದ್ದರೂ, ರಶ್ಮಿಕಾ ಮಂದಣ್ಣ ಅಭಿನಯದ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

    ಮಿಷನ್​ ಮಜ್ನು ಚಿತ್ರದಲ್ಲಿ ರಶ್ಮಿಕಾಗೆ ಅವಕಾಶ ಸಿಗುವುದಕ್ಕೆ ಅದೇ ಕಾರಣ ಎಂದು ನಿರ್ದೇಶಕ ಶಂತನು ಬಾಗ್ಚಿ ಹೇಳಿಕೊಂಡಿದ್ದಾರೆ. ಅವರು ಮಿಷನ್​ ಮಜ್ನು ಕಥೆ ಮಾಡಿಟ್ಟುಕೊಂಡು, ಸಿದ್ಧಾರ್ಥ್​ ಮಲ್ಹೋತ್ರಾಗೆ ಸೂಕ್ತ ನಾಯಕಿಯ ಹುಡುಕಾಟದಲ್ಲಿದ್ದರಂತೆ. ಈ ಸಂದರ್ಭದಲ್ಲಿ ಒಮ್ಮೆ ಡಿಯರ್​ ಕಾಮ್ರೇಡ್​ ಚಿತ್ರವನ್ನು ನೋಡುವ ಅವಕಾಶ ಬಂದಿತಂತೆ. ಈ ಚಿತ್ರದಲ್ಲಿ ರಶ್ಮಿಕಾ ಅವರನ್ನು ನೋಡಿ ಬೋಲ್ಡ್​ ಆದ ಶಂತನು, ರಶ್ಮಿಕಾ ಅವರನ್ನು ಕರೆದು ಬಾಲಿವುಡ್​ನಲ್ಲಿ ಅವಕಾಶ ಕೊಟ್ಟಿದ್ದಾರೆ ಎಂದು ವಿಶೇಷ.

    ಈ ಕುರಿತು ಮಾತನಾಡಿರುವ ಶಂತನು, ಡಿಯರ್​ ಕಾಮ್ರೇಡ್​ ಚಿತ್ರದಲ್ಲಿ ನನಗೆ ರಶ್ಮಿಕಾ ಅವರ ಅಭಿನಯ ಬಹಳ ಹಿಡಿಸಿತು. ಅವರ ಮುಗ್ಧತೆ ಮತ್ತು ಚೆಲುವು ಇಷ್ಟವಾಯಿತು. ನಮ್ಮ ಚಿತ್ರದ ನಾಯಕಿ ಪಾತ್ರಕ್ಕೆ ಅವವರು ಹೇಳಿ ಮಾಡಿಸಿದ್ದಾರೆ ಎಂದನಿಸಿತು. ಅದೇ ಕಾರಣಕ್ಕೆ, ಅವರಿಗೆ ಚಿತ್ರದಲ್ಲಿ ನಟಿಸುವ ಆಫರ್​ ಕೊಟ್ಟೆ. ಅವರು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ ಎಂದು ಶಂತನು ಹೇಳಿದ್ದಾರೆ.

    ಇದನ್ನೂ ಓದಿ: ಒಂದು ವಾರಕ್ಕಿಂತ ಹೆಚ್ಚು ಕಾಲ ಇನ್ಸ್ಟಾಗ್ರಾಂನಲ್ಲಿ ಇರುವ ನಂಬಿಕೆ ಇಲ್ಲ: ಕಂಗನಾ

    ಮಿಷನ್​ ಮಜ್ನು, ರಶ್ಮಿಕಾ ಅಭಿನಯದ ಮೊದಲ ಬಾಲಿವುಡ್​ ಚಿತ್ರವಾಗಿದ್ದು, ಕೆಲವು ತಿಂಗಳುಗಳ ಹಿಂದೆಯೇ ಚಿತ್ರೀಕರಣ ಪ್ರಾರಂಭವಾಗಿದೆ. ಈ ಚಿತ್ರ ಮುಗಿಯುವುದಕ್ಕೆ ಮುನ್ನವೇ ರಶ್ಮಿಕಾ ಬಾಲಿವುಡ್​ನಲ್ಲಿ ಇನ್ನೂ ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಒಂದು ಅಮಿತಾಭ್​ ಅಭಿನಯದ ಗುಡ್​ಬೈ ಆದರೆ, ಇನ್ನೊಂದು ಚಿತ್ರದ ಬಗ್ಗೆ ಅವರಿನ್ನೂ ಯಾವದೇ ಮಾಹಿತಿ ಹಂಚಿಕೊಂಡಿಲ್ಲ. ಸದ್ಯದಲ್ಲೇ ಆ ಚಿತ್ರದ ಬಗ್ಗೆ ಇನ್ನಷ್ಟು ವಿಷಯಗಳನ್ನು ಹೇಳುವುದಾಗಿ ಹೇಳುತ್ತಾರೆ.

    ಕೋವಿಡ್ ಸೆಂಟರ್ಗೆ ಎರಡು ಕೋಟಿ ಕೊಟ್ಟ ಅಮಿತಾಭ್ ಬಚ್ಚನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts