More

    ಕಾಡ್ಗಿಚ್ಚು ಸಂತ್ರಸ್ತರಿಗೆ ಸಹಾಯ| ದೇಣಿಗೆಗಾಗಿ ವಾರ್ನ್ ಬ್ಯಾಗಿ ಗ್ರೀನ್ ಹರಾಜು

    ಸಿಡ್ನಿ: ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್, ಕಾಡ್ಗಿಚ್ಚು ಸಂತ್ರಸ್ತರ ಸಹಾಯಕ್ಕಾಗಿ ತಮ್ಮ ಟೆಸ್ಟ್ ಕ್ರಿಕೆಟ್ ಜೀವನದುದ್ದಕ್ಕೂ ಧರಿಸಿದ್ದ ‘ಬ್ಯಾಗಿ ಗ್ರೀನ್’ ಕ್ಯಾಪ್ (ಆಸ್ಟ್ರೇಲಿಯಾ ಕ್ರಿಕೆಟಿಗರು ಟೆಸ್ಟ್ ಪಂದ್ಯಗಳಲ್ಲಿ ಧರಿಸುವ ಕಡುಹಸಿರು ಬಣ್ಣದ ಹ್ಯಾಟ್) ಹರಾಜಿಗೆ ಇಡಲು ನಿರ್ಧರಿಸಿದ್ದಾರೆ.

    ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ 3ನೇ ಟೆಸ್ಟ್ ಪಂದ್ಯ ವೀಕ್ಷಿಸಿದ ವಾರ್ನ್ ಈ ವೇಳೆ ಟ್ವಿಟರ್​ನಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ. ‘ಆಸ್ಟ್ರೇಲಿಯಾದಲ್ಲಿ ಭಯಾನಕ ಕಾಡ್ಗಿಚ್ಚು ಹರಡಿದೆ. ಹಲವರ ಜೀವಕ್ಕೂ ಇದು ಕುತ್ತು ತಂದಿದೆ. ಲಕ್ಷಾಂತರ ಪ್ರಾಣಿ ಸಂಕುಲ ಜೀವ ತೆತ್ತಿವೆ’ ಎಂದು ವಾರ್ನ್ ಬರೆದುಕೊಂಡಿದ್ದಾರೆ. ‘ಈ ಸಮಯದಲ್ಲಿ ಪ್ರತಿಯೊಬ್ಬರು ಒಂದಾಗಬೇಕು. ಟೆಸ್ಟ್ ಪಂದ್ಯಗಳ ವೇಳೆ ಧರಿಸುತ್ತಿದ್ದ ಬ್ಯಾಗಿ ಗ್ರೀನ್ ಕ್ಯಾಪ್ ಅನ್ನು ಹರಾಜಿಗಿಟ್ಟಿದ್ದೇನೆ. ಇದರಿಂದ ಹೆಚ್ಚು ಹಣದ ನಿರೀಕ್ಷೆಯಲ್ಲಿದ್ದೇನೆ’ ಎಂದು 50 ವರ್ಷದ ಮಾಜಿ ಲೆಗ್​ಸ್ಪಿನ್ನರ್ ಹೇಳಿದ್ದಾರೆ.

    ಅವರು ಆಸೀಸ್ ಪರ 145 ಟೆಸ್ಟ್ ಪಂದ್ಯ ಆಡಿದ್ದು, 708 ವಿಕೆಟ್ ಕಬಳಿಸಿದ್ದಾರೆ. ಆಸ್ಟ್ರೇಲಿಯಾದ ಹಾಲಿ ಆಟಗಾರರಾದ ಕ್ರಿಸ್ ಲ್ಯಾನ್, ಗ್ಲೆನ್ ಮ್ಯಾಕ್ಸ್​ವೆಲ್, ಡಿ ಶಾರ್ಟ್ ಪ್ರಸಕ್ತ ಬಿಗ್​ಬಾಷ್ ಲೀಗ್​ನಲ್ಲಿ ಪ್ರತಿ ಸಿಕ್ಸರ್ ಸಿಡಿಸಿದರೆ ಸಿಗುವ 250 ಆಸೀಸ್ ಡಾಲರ್ (12,500) ಮೊತ್ತವನ್ನು ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts